ಕಣಿವೆ, ಡಿ. ೨೮: ಆರೋಗ್ಯ ಇಲಾಖೆಯ ಉಪಕೇಂದ್ರ ತೆರೆಯುವ ಸದುದ್ದೇಶದಿಂದ ನಿರ್ಮಿಸಲಾಗುತ್ತಿದ್ದ ಆಸ್ಪತ್ರೆ ಕಟ್ಟಡದಲ್ಲಿ ಕುಟುಂಬವೊAದು ವಾಸವಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಗುರುವಾರ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. ಮದಲಾಪುರದ ಶಿರಹೊಳಲು ಗ್ರಾಮದಲ್ಲಿನ ಸರ್ವೆ ನಂಬರ್ ೧ ರಲ್ಲಿರುವ ಊರುಗುಪ್ಪೆ ಪೈಸಾರಿ ಜಾಗವನ್ನು ಸಂಪೂರ್ಣವಾಗಿ ಸರ್ವೆ ಮಾಡಿಸಿ ಪಂಚಾಯಿತಿಯ ಆಸ್ತಿಯಾಗಿ ಸಂರಕ್ಷಣೆ ಮಾಡಬೇಕೆಂಬ ಬಹುಮತದ ನಿರ್ಣಯವನ್ನು ಪಂಚಾಯಿತಿ ಕೈಗೊಂಡಿತು.
ಸಭೆಯ ಆರಂಭದಲ್ಲಿ ವಿವಾದಿತ ಕಟ್ಟಡವನ್ನು ಅತಿಕ್ರಮಿಸಿ ವಾಸವಿರುವ ವ್ಯಕ್ತಿಗೆ ವಿದ್ಯುತ್ ಸಂಪರ್ಕ ಪಡೆಯಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಏಕಪಕ್ಷೀಯವಾಗಿ ಪರವಾನಗಿ ನೀಡಿರುವ ಕ್ರಮವನ್ನು ಸಭೆ ತೀವ್ರವಾಗಿ ಖಂಡಿಸಿತು. ಹಾಗೆಯೇ ಗುರುವಾರದ ``ಶಕ್ತಿ’’ ಯಲ್ಲಿ ಪ್ರಕಟವಾದ ‘‘ಮದಲಾಪುರದ ಸರ್ಕಾರಿ ಕಟ್ಟಡ ವಿವಾದ’’ ಎಂಬ ವರದಿಯ ಕುರಿತು ‘ಇದೇನಿದು ನಿಮ್ಮ ರಾದ್ದಾಂತ’ ಎಂದು ಪಿಡಿಓ ಅವರಿಗೆ ಸದಸ್ಯರಾದ ರವಿ ಹಾಗೂ ಹಮೀದ್ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಈ ವೇಳೆ `ಪಂಚಾಯಿತಿ ಅಧ್ಯಕ್ಷರೇ ನಿರಾಕ್ಷೇಪಣಾ ಪತ್ರ ನೀಡುವಂತೆ ನನಗೆ ಹೇಳಿದರು’ ಎಂದು ಸಭೆಯಲ್ಲಿ ಪಿಡಿಓ ಮಂಜುಳಾ ಹೇಳಿದಾಗ ಸಭಾಧ್ಯಕ್ಷ ಗಿರೀಶ್ ಕುಮಾರ್ ಸದಸ್ಯರ ಸಮ್ಮುಖದಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸದಸ್ಯರಾದ ಟಿ.ಪಿ. ಹಮೀದ್, ಜಯಶೀಲಾ, ರವಿ, ಮೋಹಿನಿ ತಮ್ಮಣ್ಣೇಗೌಡ ಮೊದಲಾದವರು ಪಿಡಿಓ ಅವರ ಕರ್ತವ್ಯಲೋಪವನ್ನು ಖಂಡಿಸಿದರು.
‘ಪAಚಾಯಿತಿಯಲ್ಲಿ ಪಾಪದ ಬಡವರಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯವೇ...? ಏನ್ರೀ ಪಿಡಿಓ, ನೀವು ಪಂಚಾಯಿತಿಯನ್ನು ಅಭಿವೃದ್ಧಿ ಮಾಡಲು ಬಂದಿದ್ದೀರಾ ? ಇಲ್ಲ ಪಂಚಾಯಿತಿಯನ್ನು ಮಾರಲು ಬಂದಿದ್ದೀರಾ ? ಎಂದು ಸದಸ್ಯೆ ಜಯಶೀಲಾ ಏರುದನಿಯಲ್ಲಿ ಪ್ರಶ್ನಿಸಿದರು.
ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಒಂದಿಲ್ಲ ಒಂದು ವಿವಾದಗಳಿಂದಾಗಿ ಅಭಿವೃದ್ಧಿ ವಿಚಾರಗಳ ಚರ್ಚೆ ಗೌಣವಾಗುತ್ತಿದೆ. ದಿನಂಪ್ರತಿ ಮಾಧ್ಯಮಗಳಲ್ಲಿ ಪಂಚಾಯಿತಿಯ ಬಗ್ಗೆ ಒಂದಿಲ್ಲೊAದು ವಿಚಾರಗಳು ಬರುತ್ತಲೇ ಇದ್ದು, ಜನ ರೊಚ್ಚಿಗೇಳುತ್ತಿದ್ದಾರೆ.
ಪಂಚಾಯಿತಿ ಸದಸ್ಯರ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾದ ಅಪವಾದಗಳು ಕೇಳಿ ಬರುತ್ತಿವೆ. ಪಂಚಾಯಿತಿ ಪಿಡಿಓ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಪ್ರತಿಯೊಂದು ವಿಚಾರಗಳನ್ನು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಚರ್ಚಿಸಿದ ನಂತರವೇ ಆಡಳಿತಾತ್ಮಕವಾದ ಕ್ರಮ ವಹಿಸಬೇಕು ಎಂದು ಹಿರಿಯ ಸದಸ್ಯ ಟಿ.ಪಿ .ಹಮೀದ್ ಪಿಡಿಓಗೆ ತಾಕೀತು ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಓ ಮಂಜುಳಾ, ‘ಈ ಹಿಂದೆ ಆದದ್ದು ಆಗಿದೆ. ವಿಮಲ ಹಾಗೂ ನಾಗರಾಜು ದಂಪತಿ ಹಳೆಯ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಕೋರಿಕೊಂಡ ಮನವಿ ಪತ್ರಕ್ಕೆ ಸ್ಪಂದಿಸಿ ಪರವಾನಗಿ ನೀಡಿದ್ದೇನೆಯೇ ಹೊರತು ಅವರು ವಾಸವಿರುವ ಆಸ್ಪತ್ರೆಯ ಕಟ್ಟಡದ ಹೊಸ ಮನೆಗಲ್ಲ’ ಎಂಬ ತಪ್ಪೊಪ್ಪಿಗೆಯ ಹೇಳಿಕೆಯನ್ನು ಪಂಚಾಯಿತಿ ಆಡಳಿತ ಮಂಡಳಿ ಖಂಡಿಸಿತು.
ಪಿಡಿಓ ಆಗಿ ಪಂಚಾಯಿತಿಗೆ ಬಂದ ನಾಲ್ಕು ತಿಂಗಳ ಅವಧಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಅಥವಾ ಯಾವುದೇ ಸದಸ್ಯರ ಗಮನಕ್ಕೆ ಯಾವುದೇ ವಿಚಾರಗಳನ್ನು ತಾರದೇ ಏಕಪಕ್ಷೀಯವಾಗಿ ವರ್ತಿಸುವುದನ್ನು ಬಿಡಬೇಕು ಎಂದು ಎಚ್ಚರಿಕೆ ನೀಡಿದರು.
ಬಳಿಕ ಕುಶಾಲನಗರ ಚೆಸ್ಕಾಂಗೆ ಪತ್ರ ಬರೆದು ವಿಮಲ ಹಾಗೂ ನಾಗರಾಜು ಅವರ ಹೆಸರಲ್ಲಿ ವಿದ್ಯುತ್ ಸಂಪರ್ಕಕ್ಕೆ ನೀಡಿರುವ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆದು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ತೀರ್ಮಾನವನ್ನು ಸಭೆ ಕೈಗೊಂಡಿತು.
‘ಪAಚಾಯಿತಿಯ ಸಭೆಯಲ್ಲೂ ಮಂಡಿಸದೇ, ಸದಸ್ಯರಿಗೂ ತಿಳಿಸದೇ ಪರವಾನಗಿ ಹೇಗೆ ಕೊಟ್ಟಿರಿ ? ನಾಳೆ ಪರವಾನಗಿ ಪಡೆದ ವ್ಯಕ್ತಿ ಮಾನನಷ್ಟ ಮೊಕದ್ದಮೆ ಹೂಡಿದರೆ ನೀವೊಬ್ಬರೇ ಕಾರಣರು.’ ಸದಸ್ಯರು ಯಾರೂ ಕೂಡ ಕಾರಣರಲ್ಲ ಎಂದು ನಿರ್ಣಯದ ಪುಸ್ತಕದಲ್ಲಿ ತಮ್ಮ ಹೇಳಿಕೆ ದಾಖಲಿಸಬೇಕೆಂದು ಸದಸ್ಯ ಅರುಣ್ ರಾವ್ ಪಿಡಿಓ ಹೇಳಿದರು.
ಈ ಮಧ್ಯೆ ‘‘ಶಕ್ತಿ’’ಯೊಂದಿಗೆ ಪ್ರತಿಕ್ರಿಯಿಸಿದ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ, ಈ ಹಿಂದೆ ಇದ್ದ ಪಿಡಿಓ ಅಂಜನಾ ದೇವಿ ಅವರ ಬದಲಿಗೆ ಈಗ ಬಂದಿರುವ ಪಿಡಿಓ ಮಂಜುಳಾ ಅವರ ಕಾರ್ಯವೈಖರಿ ಸಮರ್ಪಕವಾಗಿಲ್ಲ.
ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳಿಗೆ ಸೌಜನ್ಯಕ್ಕೂ ಗೌರವ ನೀಡದ ಹಾಗೂ ಪಂಚಾಯಿತಿಯ ಆಡಳಿತದ ವಿಷಯದಲ್ಲಿ ಯಾರೊಂದಿಗೂ ಯಾವ ಚರ್ಚೆಯನ್ನೂ ಮಾಡದೆ ಏಕಪಕ್ಷೀಯವಾಗಿ ವರ್ತಿಸುವ ಮೂಲಕ ಪಂಚಾಯಿತಿ ಆಡಳಿತಕ್ಕೆ ಮುಜುಗರ ತರುತ್ತಿರುವ ಪಿಡಿಓ ಅವರನ್ನು ಬದಲಿಸಿ ಬದಲೀ ಪಿಡಿಓ ಅವರನ್ನು ನೇಮಿಸುವಂತೆ ಪಂಚಾಯಿತಿಯ ಸರ್ವ ಸದಸ್ಯರು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಓ ಅವರ ಬಳಿ ನಿಯೋಗ ಹೋಗುತ್ತೇವೆ ಎಂದರು.
ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಲಕ್ಷಿö್ಮ, ರತ್ನಮ್ಮ, ಮಂಗಳಾ, ವಾಣಿ, ಶಿವಕುಮಾರ್, ಅನಂತು ಹಾಗೂ ಚಂದ್ರು ಇದ್ದರು.
ವರದಿ : ಕೆ.ಎಸ್. ಮೂರ್ತಿ