ಮುಳ್ಳೂರು, ಡಿ. ೨೮: ನಿಡ್ತ ಗ್ರಾ.ಪಂ.ನ ೨೦೨೩-೨೪ನೇ ಸಾಲಿನ ಗ್ರಾಮಸಭೆ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ಎಚ್.ಡಿ. ಮನು ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮಸಭೆ ಪ್ರಾರಂಭದಲ್ಲಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಅನುಮತಿ ನೀಡಿದ ಹಿನ್ನೆಲೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಗ್ರಾ.ಪಂ. ಸದಸ್ಯ ವಿಜಯ್ ಗ್ರಾಮಸಭೆ ಅಜೆಂಡಾದAತೆ ಗ್ರಾ.ಪಂ.ನಿAದ ಹಿಂದೆ ಆಗಿರುವ ಕಾಮಗಾರಿಗಳ ವರದಿ ಸೇರಿದಂತೆ ಹಿಂದಿನ ಗ್ರಾಮಸಭೆಯಲ್ಲಿ ಆಗಿರುವ ಪ್ರಸ್ತಾವನೆ ವರದಿಯನ್ನು ಸಭೆಯಲ್ಲಿ ಮಂಡಿಸಬೇಕು ಎಂದರು. ಅದರಂತೆ ಗ್ರಾ.ಪಂ.ನಿAದ ಆಗಿರುವ ಕಾಮಗಾರಿ ಅಭಿವೃದ್ದಿ ಪ್ರಸ್ತಾವನೆ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ವರದಿಪಟ್ಟಿಯಲ್ಲಿರುವಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಯಾವುದು ಆಗುವುದಿಲ್ಲ ಎಂದು ಗ್ರಾಮಸ್ಥ ಜಾಗೇನಹಳ್ಳಿ ಸುರೇಶ್ ದೂರಿದರು. ಇದಕ್ಕೆ ಉತ್ತರಿಸಿದ ಪಿಡಿಓ ಹರೀಶ್ ಗ್ರಾ.ಪಂ. ವ್ಯಾಪ್ತಿಯ ಅಭಿವೃದ್ಧಿ ದೃಷ್ಟಿಯಿಂದ ಕಾಮಗಾರಿಗಳ ಪ್ರಸ್ತಾವನೆ ಮಾಡಲಾಗುತ್ತದೆ. ಆದರೆ ಸರಕಾರದ ವಿವಿಧ ಅನುದಾನ ಬಂದAತೆ ಕಾಮಗಾರಿಗಳಿಗೆ ತಕ್ಕಂತೆ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತದೆ. ಆದ್ಯತೆಗೆ ಅನುಗುಣವಾಗಿ ಕಾಮಗಾರಿಗಳನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳ ಮಾಹಿತಿ ನೀಡುವ ಸಂದರ್ಭ ನಡೆದ ಚರ್ಚೆಯಲ್ಲಿ ಗ್ರಾಮಸ್ಥ ಪುಟ್ಟಣ್ಣ ಮಾತನಾಡಿ, ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮಸಭೆ ನಡೆಯುವ ಸಂದರ್ಭ ಮಾತ್ರ ಇಲಾಖೆಯ ಯೋಜನೆ, ಇಲಾಖೆಯಿಂದ ಜನರಿಗೆ ದೊರೆಯುವ ಸೇವೆ ಸೌಲಭ್ಯಗಳ ಬಗ್ಗೆ ಹೇಳುತ್ತಾರೆ. ಆದರೆ ಫಲಾನುಭವಿಗಳು ಕಚೇರಿಗೆ ಹೋದಾಗ ಅಲೆದಾಡಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್ ಇಲಾಖೆಯ ಯೋಜನೆ ಕುರಿತಾಗಿ ಮಾಹಿತಿ ನೀಡುತ್ತಿದ್ದ ಸಂದರ್ಭ ಗ್ರಾಮಸ್ಥರು ಕಾಡುಹಂದಿಗಳು ಕೃಷಿ ಬೆಳೆಗಳನ್ನು ನಾಶ ಮಾಡುತ್ತಿವೆ. ಆದ್ದರಿಂದ ಕಾಡುಹಂದಿಯನ್ನು ಹೊಡೆಯಲು ಅರಣ್ಯ ಇಲಾಖೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಅರಣ್ಯದಲ್ಲಿ ಕಾಡಾನೆ, ಕಾಡುಪ್ರಾಣಿಗಳಿಗೆ ಆಹಾರವಾಗುವಂತ ಮರಗಿಡಗಳನ್ನು ಬೆಳೆಸುವುದರಿಂದ ಕಾಡಾನೆ, ಕಾಡು ಪ್ರಾಣಿಗಳು ಗ್ರಾಮದೊಳಕ್ಕೆ ಬರುವುದಿಲ್ಲ ಎಂದು ಗ್ರಾಮಸ್ಥರ ಪರವಾಗಿ ಗ್ರಾ.ಪಂ. ಸದಸ್ಯ ಕಾರ್ತಿಕ್ ಪ್ರಸ್ತಾಪಿಸಿದರು.
ವಿದ್ಯುತ್ ಇಲಾಖೆ ಕುರಿತು ಮಾಹಿತಿ ನೀಡಿದ ಶನಿವಾರಸಂತೆ ಚೆಸ್ಕಾಂ ಅಭಿಯಂತರ ಸುದೀಪ್ ಗೃಹಜ್ಯೋತಿ ಯೋಜನೆಯ ಉಪಯೋಗ ಪಡೆಯದೆ ಇರುವ ಫಲಾನುಭವಿಗಳು ಇಲಾಖೆ ಕಚೇರಿಗೆ ಬಂದು ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದರು. ಕಂದಾಯ ಇಲಾಖೆಗೆ ಸಂಬAಧಪಟ್ಟAತೆ ಮಾಹಿತಿ ನೀಡಿದ ಗ್ರಾಮ ಆಡಳಿತ ಅಧಿಕಾರಿ ರಜಾಕ್ ಶನಿವಾರಸಂತೆ ಹೋಬಳಿಯ ೬ ಗ್ರಾ.ಪಂ.ವ್ಯಾಪ್ತಿಯಲ್ಲಿ ೬೪ ಕೆರೆಗಳನ್ನು ಒತ್ತುವರಿ ಮಾಡಿರುವ ಬಗ್ಗೆ ಮಾಹಿತಿ ಇದ್ದು ಕಂದಾಯ ಇಲಾಖೆ ಕೆರೆಗಳ ಮೂಲ ವಿಸ್ತೀರ್ಣದ ಬಗ್ಗೆ ಸರ್ವೆಕಾರ್ಯ ನಡೆಸಿದ ಬಳಿಕ ಒತ್ತುವರಿ ಮಾಡಿರುವ ಕೆರೆಯನ್ನು ತೆರವುಗೊಳಿಸಿ ಸಂಬAಧಪಡುವ ಗ್ರಾ.ಪಂ.ಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದರು.
ಉದ್ಯೋಗ ಖಾತ್ರಿ ಯೋಜನೆ ಕುರಿತು ಇಲಾಖೆಯ ಅಭಿಯಂತರ ಅಶೋಕ್ ಮಾಹಿತಿ ನೀಡಿದರು. ಶನಿವಾರಸಂತೆ ಪಶುವೈದ್ಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸತೀಶ್ ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾ.ಪಂ. ಅಧ್ಯಕ್ಷ ಎಚ್.ಡಿ. ಮನು ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಸುಮಿತ್ರ, ಗ್ರಾ.ಪಂ.ಯ ಸರ್ವ ಸದಸ್ಯರು, ಗ್ರಾ.ಪಂ. ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.