ಮಡಿಕೇರಿ, ಡಿ. ೨೮: ನಗರದ ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ತಾ. ೩೦ರಂದು ಮುತ್ತಪ್ಪ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಅಂದು ಬೆಳಿಗ್ಗೆ ೬ ಗಂಟೆಗೆ ನಡೆ ತೆಗೆಯುವುದು, ನಿರ್ಮಲ್ಯ ಪೂಜೆ, ೬.೩೦ ಗಂಟೆಗೆ ಗಣಪತಿ ಹೋಮ, ೮ ಗಂಟೆಗೆ ಅಷ್ಟಾಭಿಷೇಕ ಸೇವೆ, ೧೦.೩೦ ಗಂಟೆಗೆ ಭಕ್ತರೊಡಗೂಡಿ ತುಳಸಿ ಸಹಸ್ರ ನಾಮಾರ್ಚನೆ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅವರು ತಿಳಿಸಿದರು.

ಮಧ್ಯಾಹ್ನ ೧ ಗಂಟೆಗೆ ಪಾಲಕೊಂಬು ಪ್ರತಿಷ್ಠಾಪನೆ, ೧.೩೦ ಗಂಟೆಗೆ ತಾಯಂಬಕA (ಚಂಡೆ ಸೇವೆ), ಸಂಜೆ ೪ ಗಂಟೆಗೆ ಅಶ್ವಿನಿ ಗಣಪತಿ ದೇವಾಲಯದಿಂದ ಅಲಂಕೃತ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯನ್ನು ಒಳಗೊಂಡು ಪಾಲಕೊಂಬು ಮೆರವಣಿಗೆ ಚಂಡೆ ಮೇಳದೊಂದಿಗೆ ನಡೆಯಲಿದೆ. ಬಳಿಕ ೬.೩೦ ಗಂಟೆಗೆ ದೀಪಾರಾಧನೆ, ಅಲಂಕಾರ ಪೂಜೆ, ರಾತ್ರಿ ೭.೩೦ ಗಂಟೆಗೆ ಪಡಿರಂಗ ಪೂಜೆ, ದುರ್ಗಾ ಪೂಜೆ, ಸುಬ್ರಹ್ಮಣ್ಯ ಪೂಜೆ, ೮.೩೦ ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಲಿದೆ.

ರಾತ್ರಿ ೧೨ ಗಂಟೆಯಿAದ ೨ ಗಂಟೆಯವರೆಗೆ ಅಗ್ನಿಪೂಜೆ, ೨ ಗಂಟೆಯಿAದ ಬೆಳಿಗ್ಗೆ ೫ರವರೆಗೆ ಪೊಲಿಪಾಟ್, ಪಾಲ್ಕಿಂಡಿ ತಿರಿ ಉಳಿಚಲ್ ವೆಟ್ಟು ತಡವುಂ ನಡೆಯಲಿದ್ದು, ಬೆಳಿಗ್ಗೆ ೫.೩೦ ಗಂಟೆಗೆ ಅಗ್ನಿಕುಂಡ ಹಾಯುವುದರೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಚಂದ್ರಶೇಖರ್ ವಿವರಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ರವಿ, ಖಜಾಂಚಿ ಹರೀಶ್, ಗುರುಸ್ವಾಮಿ ವಿಜು, ಪದಾಧಿಕಾರಿಗಳಾದ ಬಸವರಾಜು, ಸುರೇಶ್ ಉಪಸ್ಥಿತರಿದ್ದರು.