ಮಡಿಕೇರಿ, ಡಿ. ೨೭: ಇಲ್ಲಿಗೆ ಸಮೀಪದ ಮರಗೋಡು ಬಳಿಯ ಕಟ್ಟೆಮಾಡು ಗ್ರಾಮದಲ್ಲಿ ನವೀಕರಣಗೊಂಡಿರುವ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾ ಪೂಜೆ, ಅಂಕುರ ಪೂಜೆ, ಸ್ವಶಾಂತಿ, ಅಧ್ವೆöÊತ ಶಾಂತಿ, ಶ್ವಾನ ಶಾಂತಿ, ಚೋರ ಶಾಂತಿ ಹೋಮಾದಿಗಳು, ಹೋಮ, ಕಲಶಾಭಿಷೇಕ ಮಹಾಪೂಜೆ ನೆರವೇರಿತು. ರಾತ್ರಿ ಅಂಕುರ ಪೂಜೆ, ಕುಂಬೇಶ ಕರ್ಕರಿ ಪೂಜೆ, ಅನುಜ್ಞಾ ಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆಯೊಂದಿಗೆ ಅನ್ನಸಂತರ್ಪಣೆ ನಡೆಯಿತು.

ಧಾರ್ಮಿಕ ಚಿಂತಕ ಚಿ.ನಾ ಸೋಮೇಶ್ ಧಾರ್ಮಿಕ ಭಾಷಣ ಮಾಡಿದರು. ಬಳಿಕ ಭಾರತೀಯ ನೃತ್ಯ ಕಲಾ ಶಾಲೆಯ ನೃತ್ಯ ಕಲಾವಿದರಿಂದ ನೃತ್ಯ ಕಾರ್ಯಕ್ರಮ ನೆರೆದ ಭಕ್ತಾದಿಗಳನ್ನು ಮನರಂಜಿಸಿತು. ನಮಿತ ಮನು ಶೆಣೈ ಅವರಿಂದ ನೃತ್ಯ ಕಾರ್ಯಕ್ರಮ ಜರುಗಿತು.

ಇಂದಿನ ಕಾರ್ಯಕ್ರಮ

ತಾ. ೨೮ರಂದು (ಇಂದು) ಬೆಳಿಗ್ಗೆಯಿಂದ ವಿವಿಧ ಪೂಜಾಧಿ ಕಾರ್ಯಗಳು ನಡೆಯಲಿವೆ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೭ ಗಂಟೆಗೆ ಸಾಹಿತಿ ನಾಗೇಶ್ ಕಾಲೂರು ಅವರು ಧಾರ್ಮಿಕ ಭಾಷಣ ಮಾಡಲಿದ್ದಾರೆ. ನಂತರ ವಿವಿಧ ಪೂಜಾಧಿ ಕಾರ್ಯಗಳೊಂದಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಲಿದೆ.