ಕುಶಾಲನಗರ, ಡಿ. ೨೭: ಕಲ್ಲಡ್ಕ ಪ್ರಭಾಕರ್ ಅವರು ಮುಸ್ಲಿಂ ಮಹಿಳೆ ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋ ಪಿಸಿ ಕುಶಾಲನಗರ ತಾಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಒಕ್ಕೂಟದ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಕಲ್ಲಡ್ಕ ಪ್ರಭಾಕರ್ ಅವರನ್ನು ಬಂಧಿಸುವAತೆ ಆಗ್ರಹಿಸಿ ದರು. ನಂತರ ಕಲ್ಲಡ್ಕ ಪ್ರಭಾಕರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಭಾರತದಲ್ಲಿ ಹಿಂದೂ ಮುಸಲ್ಮಾನರು ಪರಸ್ಪರ ಶಾಂತಿ, ಪ್ರೀತಿ ವಿಶ್ವಾಸದಿಂದ ಬದುಕು ಸಾಗಿಸು ತ್ತಿದ್ದಾರೆ. ಕಲ್ಲಡ್ಕ ಪ್ರಭಾಕರ್ ಎಂಬ ವರು ಮುಸಲ್ಮಾನ ಹೆಣ್ಣು ಮಕ್ಕಳನ್ನ ಅವಹೇಳನ ಮಾಡಿರೋದು ಖಂಡ ನೀಯ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಅಲ್ಪ ಸಂಖ್ಯಾತರ ಮತವನ್ನು ಪಡೆದು ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿದ್ದರೇ, ಕಾಂಗ್ರೆಸ್ ಜಾತ್ಯಾತೀತ ಪಕ್ಷವೇ ಆಗಿದ್ದರೇ ಕಲ್ಲಡ್ಕ ಪ್ರಭಾಕರ್ ಅವರಂತಹ ಸಮಾಜಕ್ಕೆ ಮಾರಕವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಕಲೀಂ, ಕುಶಾಲನಗರ ಎಸ್.ಡಿ.ಪಿ.ಐ ಅಧ್ಯಕ್ಷ ಝಕ್ರಿಯ, ತಾಲೂಕು ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಮೀರ್, ಉಪಾಧ್ಯಕ್ಷ ಪಾಷಾ, ಅನ್ವರ್, ಅಕ್ಬರ್, ಖಲೀರ್, ಶರೀಫ್, ಸಲೀಂ, ಮೊಯ್ದೀನ್, ಸಮಿ, ಅಶ್ರಫ್, ಜರೀನಾ, ಹಮೀದ್, ಸಾಹುಲ್ ಸಂಘಟನೆ ಸದಸ್ಯರು ಪಾಲ್ಗೊಂಡಿದ್ದರು.