ಮಡಿಕೇರಿ, ಡಿ. ೨೭: ನಿರಾಶ್ರಿತರರು ನಿರ್ಗತಿಕರ ಆಶ್ರಯವಾಗಿರುವ ಮಡಿಕೇರಿ ಆಶ್ರಮದಲ್ಲಿ ದಯಾ ಚಾರಿಟೇಬಲ್ ಟ್ರಸ್ಟ್ ಇದರ ಪ್ರಮುಖರಾದ ಮೊಹಮ್ಮದಾಲಿ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ಜರುಗಿತು.
ಅಧ್ಯಕ್ಷರಾಗಿ ಮೊಹಮ್ಮದ್ ಮುಸ್ತಫಾ ಅವರು ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೆ.ಆರ್. ಶಶಿ ವೀರಾಜಪೇಟೆ, ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಕರ್ತೆ ಬಾಳೆಯಡ ದಿವ್ಯಾ, ಜಂಟಿ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಶ್ರಪ್ ತ್ವಾಹಾ, ಕೋಶಾಧಿಕಾರಿಯಾಗಿ ಕರಾಮತುಲ್ಲಾ ಅಝ್ಗರ್ ಅಲೀ ಹಾಗೂ ೧೨ ಜನ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು..
ತನಲ್ ಸಂಸ್ಥೆ ವತಿಯಿಂದ ಸೇವಕರಿಗೆ ಸನ್ಮಾನ ತನಲ್ ಆಶ್ರಮದಲ್ಲಿ ಸಿಬ್ಬಂದಿಗಳಾಗಿ ಸೇವಾ ನಿರತರಾಗಿರುವ ಮಮತಾ, ಸವಿತಾ, ಶ್ಯಾಮಲಾ, ರಝಿಯಾ ಹಾಗೂ ನಾಪೋಕ್ಲು ವಿಪತ್ತು ನಿರ್ವಹಣ ಘಟಕ ಹಾಗೂ ಮರಗೋಡು ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸೇವೆಯನ್ನು ಗುರುತಿಸಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.