ನಾಪೋಕ್ಲು, ಡಿ. ೨೭: ಉತ್ತಮ ಶಿಕ್ಷಣದಿಂದ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಕಕ್ಕಬ್ಬೆ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆಟೋಳಿರ ಪಿ. ಕುಟ್ಟಪ್ಪ ಹೇಳಿದರು. ಕಕ್ಕಬ್ಬೆ ವಿದ್ಯಾಸಂಸ್ಥೆಯಲ್ಲಿ ಜರುಗಿದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲೂ ಹೆಚ್ಚಿನ ಆಸಕ್ತಿ ವಹಿಸಿ ಮುಂದುವರಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು. ಅತಿಥಿಗಳಾಗಿ, ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೊಂಗೇರ ಶಿಲ್ಪ ಲೋಕೇಶ್, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪಯಡಿ ಹಂಸ, ಬಾತ್ಮಿದಾರರಾದ ಕಲ್ಯಾಟಂಡ ಸುಧಾ ಗಣಪತಿ, ನಿರ್ದೇಶಕರಾದ ಪರದಂಡ ಸದಾ ನಾಣಯ್ಯ, ಚೋಯಮಾಡಂಡ ನಾಣಯ್ಯ, ಅಂಜಪರವAಡ ಎ. ಕುಶಾಲಪ್ಪ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು.

ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಮೂಹಿಕ ಅಂಗಸಾಧನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರೌಢಶಾಲಾ ಮುಖ್ಯ ಶಿಕ್ಷಕ ಡಿ. ಅನಿಲ್ ರಾಜ್ ಶಾಲಾ ವರದಿ ವಾಚಿಸಿದರು. ಪ್ರಾಥಮಿಕ ಶಾಲಾ ವಿಭಾಗದ ವರದಿಯನ್ನು ಶಿಕ್ಷಕಿ ಕೆ.ಬಿ. ಲೀಲಾವತಿ ವಾಚಿಸಿದರು. ಶಿಕ್ಷಕಿ ಬಬಿತ ಕಾರ್ಯಕ್ರಮ ನಿರೂಪಿಸಿ, ಎ.ಎ. ಕುಶಾಲಪ್ಪ ಸ್ವಾಗತಿಸಿ. ವಂದಿಸಿದರು.