ಮಡಿಕೇರಿ, ಡಿ. ೨೬ : ಕಾವೇರಿ ನೀರಾವರಿ ನಿಗಮದ ವತಿಯಿಂದ ಹಾರಂಗಿ ಹಿನ್ನೀರು ಪ್ರದೇಶ ಸೇರಿದಂತೆ ಉಪನದಿಗಳು ಹರಿಯುವ ಸ್ಥಳದಲ್ಲಿ ತಡೆಗೋಡೆ, ಗೇಬಿಯನ್ ಗೋಡೆ ನಿರ್ಮಾಣ ಸಂಬAಧ ನದಿ ತೀರದಲ್ಲಿ ಮರಗಳನ್ನು ಕಡಿಯುವ
ಯೋಜನೆ ಸ್ಥಗಿತಗೊಳಿಸಲಾಗಿದೆ. ಮುಕ್ಕೋಡ್ಲುವಿನಲ್ಲಿ ನಡೆದ ಗ್ರಾ.ಪಂ. ವಾರ್ಡ್ ಸಭೆಯಲ್ಲಿ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
೨೦೧೮ರಲ್ಲಿ ಭೂಕುಸಿತ, ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಹಾರಂಗಿ ನದಿಯಲ್ಲಿ ಹೂಳು ತುಂಬಿದ್ದು, ಹೂಳೆತ್ತಲು ಸರಕಾರದಿಂದ ರೂ. ೧೩೦ ಕೋಟಿ ಅನುದಾನ ಬಿಡುಗಡೆಯಾಗಿತ್ತು. ಕಾವೇರಿ ನೀರಾವರಿ ನಿಗಮದ ಮೂಲಕ ಅನುದಾನ ಬಿಡುಗಡೆಯಾಗಿದ್ದು, ನಿಗಮದ ಮೂಲಕ ಹಾರಂಗಿಯನ್ನು ಸೇರುವ ಉಪನದಿಗಳಲ್ಲಿ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಹೂಳೆತ್ತುವುದು, ಸೇತುವೆ ನಿರ್ಮಾಣ, ತಡೆಗೋಡೆ ನಿರ್ಮಾಣ ಕಾಮಗಾರಿ ಗಳಿಗೆ ಯೋಜನೆ ರೂಪಿಸಲಾಗಿತ್ತು.
ಅಂತೆಯೇ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಮುಕ್ಕೋಡ್ಲುವಿ ನಿಂದ ಮಕ್ಕಂದೂರು ಪಂಚಾಯಿತಿಯ ತಂತಿಪಾಲದವರೆಗೆ ನದಿ ತೀರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿತ್ತು. ಈ ಯೋಜನೆಗೆ ಸಂಬAಧಿಸಿದAತೆ ನದಿ ತೀರದಲ್ಲಿನ ನೂರಾರು ಪ್ರಾಚೀನ ಕಾಲದ ಮರಗಳನ್ನು ಕಡಿಯಲು ಗುರುತು ಮಾಡಲಾಗಿತ್ತು. ಆದರೆ, ಇದರ ಬಗ್ಗೆ ಗ್ರಾಮಸ್ಥರು, ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಬಗ್ಗೆ ‘ಶಕ್ತಿ’ ವರದಿ ಮಾಡಿತ್ತಲ್ಲದೆ, ಇದರ ಬೆನ್ನಲ್ಲೇ ಗ್ರಾಮ ಪಂಚಾಯಿತಿ ವತಿಯಿಂದ ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಹಾಗೂ ಮರಕಡಿತಲೆ ಮಾಡದಂತೆ ನೀರಾವರಿ ನಿಗಮ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಮುಕ್ಕೋಡ್ಲುವಿನಲ್ಲಿ ನಡೆದ ವಾರ್ಡ್ ಸಭೆಯಲ್ಲಿ ನೆರೆದಿದ್ದ ಗ್ರಾಮಸ್ಥರು ಮರಕಡಿತಲೆಗೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮರ ಕಡಿಯುವ ಯೋಜನೆಯನ್ನು ಕೈ ಬಿಟ್ಟಿದ್ದಾರೆ.
ಮರಕಡಿತಲೆ ಮಾಡದಂತೆ ನೀರಾವರಿ ನಿಗಮ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಸಭೆಯಲ್ಲಿದ್ದ ಗ್ರಾಮಸ್ಥರು ಮೊದಲಿಗೆ ನದಿಯಲ್ಲಿನ ಹೂಳೆತ್ತುವದರೊಂದಿಗೆ ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಅಂತಿಮವಾಗಿ ಯಾವುದೇ ಮರಗಳನ್ನು ಕಡಿಯದಂತೆ ತೀರ್ಮಾನ ಕೈಗೊಂಡು ಇದೇ ತೀರ್ಮಾನವನ್ನು ಗ್ರಾಮ ಸಭೆಯಲ್ಲಿ ಮಂಡಿಸಿ, ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಕಳುಹಿಸಿಕೊಡುವಂತೆ ತೀರ್ಮಾನಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ಬಿ.ಎನ್. ರಮೇಶ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ವಿಮಲರವಿ, ಸದಸ್ಯರುಗಳಾದ ಕನ್ನಿಕಂಡ ಶಾಂ ಸುಬ್ಬಯ್ಯ, ಪಡೇಟಿರ ಕವಿತಾ, ಸುನಂದ, ಕಟ್ಟೆಮನೆ ಗಣೇಶ್, ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣೆ ಪಡೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ವಲಯ ಅರಣ್ಯಾಧಿಕಾರಿ ಆನಂದ, ಗ್ರಾಮದ ಹಿರಿಯರಾದ ಡಾ. ಮುತ್ತಪ್ಪ, ಕೆ.ಬಿ. ನಾಣಯ್ಯ, ಮನು ಮುದ್ದಪ್ಪ ಇತರರು ಪಾಲ್ಗೊಂಡಿದ್ದರು.