ಕುಶಾಲನಗರ, ಡಿ. ೨೬: ಭಗವದ್ಗೀತೆಯ ಬಗ್ಗೆ ಬೆಳಕು ಚೆಲ್ಲುವ ಕೊಡಗು ಜಿಲ್ಲಾ ವ್ಯಾಪ್ತಿಯ ಬೃಹತ್ ಕೋಟಿ ಗೀತಾ ಲೇಖನ ಯಜ್ಞ ದೀಕ್ಷ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಕುಶಾಲನಗರಕ್ಕೆ ಆಗಮಿಸಿದ ಉಡುಪಿ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ಕುಶಾಲನಗರ ಶ್ರೀ ಗಣಪತಿ ದೇವಾಲಯದ ಮುಂಭಾಗ ಕೋಟಿ ಗೀತಾ ಲೇಖನ ಯಜ್ಞ ಪರಿವಾರದ ಪ್ರಮುಖರು ಸ್ವಾಗತಿಸಿ ಶ್ರೀಗಳನ್ನು ರಥ ಬೀದಿಯ ಮೂಲಕ ಕಾರ್ಯಕ್ರಮ ನಡೆಯಲಿರುವ ಗಾಯತ್ರಿ ಕಲ್ಯಾಣ ಮಂಟಪಕ್ಕೆ ಕರೆ ತರಲಾಯಿತು. ಶ್ರೀಗಳು ಸಾಗಿದ ಮಾರ್ಗದುದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸುವುದರೊಂದಿಗೆ ಪುಷ್ಪಾರ್ಚನೆ ಮಾಡಿದರು. ಕೃಷ್ಣ ವೇಷ ಧರಿಸಿದ ಪುಟಾಣಿಗಳು, ಕೋಲಾಟದೊಂದಿಗೆ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀಗಳ ಜೊತೆಗೆ ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಶ್ರೀ ಕೃಷ್ಣನ ಮೂರ್ತಿಯೊಂದಿಗೆ ಭಗವದ್ಗೀತೆಗಳನ್ನು ಹೊತ್ತು ಭಕ್ತರು ಸಾಗಿದರು. ಪೂರ್ಣ ಕುಂಭ ಕಳಸದೊಂದಿಗೆ ಕುಶಾಲನಗರ ಮಹಿಳಾ ಭಜನಾ ಮಂಡಳಿಯ ಸದಸ್ಯರು ಸಾಂಪ್ರದಾಯಿಕ ಸ್ವಾಗತ ನಡುವೆ ರಥ ಬೀದಿಯಲ್ಲಿ ತೆರಳಿದ ಶ್ರೀಗಳು ಸ್ಥಳೀಯ ರಥ ಬೀದಿಯ ಕನ್ನಿಕಾ ಪರಮೇಶ್ವರಿ

(ಮೊದಲ ಪುಟದಿಂದ) ದೇವಾಲಯ, ಚೌಡೇಶ್ವರಿ ದೇವಾಲಯ ಮತ್ತು ಆಂಜನೇಯ ದೇವಾಲಯ ಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ವಿಶ್ವದಾದ್ಯಂತ ಕೋಟಿ ಭಕ್ತರ ಕೈಯಿಂದ ಭಗವದ್ಗೀತಾ ಶ್ಲೋಕಗಳನ್ನು ಬರೆಸಿ ಶ್ರೀಗಳ ಮೂಲಕ ಉಡುಪಿ ಶ್ರೀ ಕೃಷ್ಣನಿಗೆ ಅರ್ಪಿಸಿ ನಂತರ ಪ್ರಸಾದ ರೂಪವಾಗಿ ಅದನ್ನು ಸ್ವೀಕರಿಸಿ ತಮ್ಮ ಮನೆಯ ದೇವರ ಕೋಣೆಯಲ್ಲಿ ಶಾಶ್ವತವಾಗಿ ಇರಿಸಿಕೊಂಡು ಮುಂದಿನ ಪೀಳಿಗೆಗೆ ಗೀತೆಯ ಮೌಲ್ಯಗಳನ್ನು ಹಸ್ತಾಂತರಿಸುವ ಶ್ರೀಪಾದರ ಮಹಾನ್ ಜಾಗತಿಕ ಧಾರ್ಮಿಕ ಸಂಕಲ್ಪದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಶಾಲನಗರಕ್ಕೆ ಭೇಟಿ ನೀಡಿದ ಶ್ರೀಗಳ ಪಾದ ಪೂಜಾ ಕಾರ್ಯಕ್ರಮ ಸೇವಾರ್ಥದಾರರಿಂದ ನಡೆಯಿತು. ಮನೆಯ ದೇವರ ಕೋಣೆಯಲ್ಲಿ ಶಾಶ್ವತವಾಗಿ ಇರಿಸಿಕೊಂಡು ಮುಂದಿನ ಪೀಳಿಗೆಗೆ ಗೀತೆಯ ಮೌಲ್ಯಗಳನ್ನು ಹಸ್ತಾಂತರಿಸುವ ಶ್ರೀಪಾದರ ಮಹಾನ್ ಜಾಗತಿಕ ಧಾರ್ಮಿಕ ಸಂಕಲ್ಪದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಶಾಲನಗರಕ್ಕೆ ಭೇಟಿ ನೀಡಿದ ಶ್ರೀಗಳ ಪಾದ ಪೂಜಾ ಕಾರ್ಯಕ್ರಮ ಸೇವಾರ್ಥದಾರರಿಂದ ನಡೆಯಿತು. ಪ್ರಖಂಡದ ಗೀತಾ ಪ್ರಚಾರಕ ಶ್ರೀ ರಮಣ ಆಚಾರ್ಯ, ಕೊಡಗು ಜಿಲ್ಲಾ ಕೋಟಿ ಗೀತಾ ಲೇಖನ ಯಜ್ಞ ಪರಿವಾರದ ಅಧ್ಯಕ್ಷರಾದ ಎಸ್.ಕೆ. ಸತೀಶ್, ಸಮಿತಿ ಸಂಚಾಲಕರು ಶಕ್ತಿ ಸಂಪಾದಕರಾದ ಜಿ. ಚಿದ್ವಿಲಾಸ್, ಪ್ರಮುಖರಾದ ರಮಾ ವಿಜಯೇಂದ್ರ, ಜನಾರ್ದನ ವಶಿಷ್ಠ, ಕುಶಾಲನಗರ ತಾಲೂಕು ಸಂಚಾಲಕರಾದ ಬಿ.ಆರ್. ನಾಗೇಂದ್ರ ಪ್ರಸಾದ್, ವಿ.ಡಿ. ಪುಂಡರಿಕಾಕ್ಷ, ರಾಮದಾಸ್, ಉಪ ಸಮಿತಿಗಳ ಪ್ರಮುಖರಾದ ಪದ್ಮಾ ಪುರುಷೋತ್ತಮ್, ಲಕ್ಷಿö್ಮ ಮಂಜುನಾಥ್, ಚಿ.ನಾ. ಸೋಮೇಶ್, ಕೆ.ಎನ್. ದೇವರಾಜ್, ಜಿ.ಎಲ್. ನಾಗರಾಜ್, ರಾಜೇಶ್, ಸಮಿತಿ ಉಪ ಸಮಿತಿಗಳ ಪದಾಧಿಕಾರಿಗಳು, ಪಾದಪೂಜೆ ತೊಟ್ಟಿಲು ಪೂಜಾ ಸೇವಾರ್ಥದಾರರು ಭಕ್ತಾದಿಗಳು ಇದ್ದರು.