ಮಡಿಕೇರಿ, ಡಿ. ೨೪: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ (ಸಿ.ಪಿ.ಎ.) ವತಿಯಿಂದ ಇಂದು ವಿವಿಧ ಬೇಡಿಕೆಗಳ ಕುರಿತು ಮಡಿಕೇರಿ ಶಾಸಕ ಡಾ|| ಮಂಥರ್‌ಗೌಡ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ನಂದಾ ಬೆಳ್ಯಪ್ಪ ನೇತೃತ್ವದಲ್ಲಿ ಶಾಸಕರನ್ನು ಭೇಟಿಯಾದ ಪ್ರಮುಖರು, ಪೌತಿ ಖಾತೆ ವರ್ಗಾವಣೆ, ಬಾಣೆ ಜಮೀನಿಗೆ ಕಂದಾಯ ನಿಗದಿ, ಕಾಫಿ ಬೆಳೆ ವಿಮೆ, ಸೂಕ್ಷö್ಮ ಪರಿಸರ ತಾಣ, ಮಾನವ-ವನ್ಯಜೀವಿ ಸಂಘರ್ಷದ ಕುರಿತಾಗಿ ಮನವಿ ಸಲ್ಲಿಸಿ ಚರ್ಚಿಸಲಾಯಿತು.

ನಿಯೋಗದಲ್ಲಿ ಪ್ರಮುಖರಾದ ಕೆ.ಕೆ. ವಿಶ್ವನಾಥ್ ಕೈಬುಲೀರ ಹರೀಶ್ ಅಪ್ಪಯ್ಯ, ಡಾ. ಕೊಳ್ಳಿಮಾಡ ಸೋಮಣ್ಣ, ಪಿ.ಎಂ. ಪವನ್ ಮುತ್ತಪ್ಪ ಪಾಲ್ಗೊಂಡಿದ್ದರು.