ಗೋಣಿಕೊಪ್ಪಲು, ಡಿ. ೨೩: ಹುದಿಕೇರಿಯ ಅಂಜಿಗೇರಿ ನಾಡ್ ಕೂಟದಿಂದ ದ.ಕೊಡಗಿನ ಹುದಿಕೇರಿಯ ಜನತಾ ಪ್ರೌಢಶಾಲಾ ಮೈದಾನದಲ್ಲಿ ಹಾಕಿ ಕ್ರೀಡೆಗೆ ವಿದ್ಯುಕ್ತ ಚಾಲನೆ ದೊರೆಯಿತು.
೭ ದಿನಗಳ ಕಾಲ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ೭೦ ಕೊಡವ ತಂಡಗಳು ಭಾಗವಹಿಸಲಿದ್ದು ತಲಾ ೭ ಆಟಗಾರರು ಮೈದಾನಕ್ಕಿಳಿದು ಪ್ರದರ್ಶನ ತೋರಲಿದ್ದಾರೆ. ಹಾಕಿ ಪಂದ್ಯಾವಳಿಗೆ ಕರ್ನಾಟಕ ರಾಜ್ಯದ ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಷನ್ ಅಪ್ಪಚ್ಚು ಚಾಲನೆ ನೀಡಿದರು.
ಮುಂಜಾನೆ ೮ ಗಂಟೆಗೆ ಹುದಿಕೇರಿಯ ಮಹಾದೇವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅಂಜಿಗೇರಿ ನಾಡ್ ಕೂಟದ ಯುವಕರು ಹಾಗೂ ಹಿರಿಯರು ನಂತರ ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ಸಾಂಪ್ರದಾಯಿಕ ವಾಗಿ ಗಾಳಿಯಲ್ಲಿ ಗುಂಡನ್ನು ಹಾರಿಸುವ ಮೂಲಕ ಮೈದಾನ ಪ್ರವೇಶ ಮಾಡಿದರು. ಮಹಿಳೆಯರು ಮೆರವಣಿಗೆಯಲ್ಲಿ ನೆಲ್ಲಕ್ಕಿ ಬೊಳ್ಚ ದೊಂದಿಗೆ ಆಗಮಿಸಿದರು. ವಿಸ್ತಾರ ವಾದ ಸುಸಜ್ಜಿತ ಮೈದಾನದಲ್ಲಿ ಹಾಕಿ ಪಂದ್ಯಾಟವನ್ನು ವೀಕ್ಷಿಸಲು ಸುತ್ತಲೂ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.
ಅಂಜಿಗೇರಿ ನಾಡ್ ಕೂಟದ ಅಧ್ಯಕ್ಷರಾದ ಚಂಗುಲAಡ ಅಜಿತ್ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ದಲ್ಲಿ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ ದೊರಕಬೇಕಾದಲ್ಲಿ ಗ್ರಾಮೀಣ ಭಾಗದಲ್ಲಿ ವಿವಿಧ ಕ್ರೀಡೆಗಳು ಆಗಿಂದಾಗ್ಗೆ ನಡೆಯಬೇಕು. ಈ ನಿಟ್ಟಿನಲ್ಲಿ ಅಂಜಿಗೇರಿ ನಾಡ್ ಕೂಟದ ಯುವಕರು ಹಾಕಿ ಕ್ರೀಡೆಯನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಕೊಡಗಿನಿಂದ ಪ್ರತಿಭಾವಂತ ಕ್ರೀಡಾಪಟುಗಳು ರಾಷ್ಟçಮಟ್ಟದಲ್ಲಿ ಸಾಧನೆ ಮಾಡಲು ಕಠಿಣ ಶ್ರಮ ವಹಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಡ್ ತಕ್ಕರಾದ ಸುಬ್ರಮಣಿ ಮಾದಯ್ಯ ಮಾತನಾಡಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕ್ಷೇತ್ರದ ಆರು ಹೋಬಳಿಯ ಶಾಲಾ ಮೈದಾನಗಳನ್ನು ಅಭಿವೃದ್ಧಿ ಮಾಡಲಾಗುವುದು. ಆ ಸಂದರ್ಭದಲ್ಲಿ ಹುದಿಕೇರಿ ಜನತಾ ಪ್ರೌಢಶಾಲೆಯ ಹಾಕಿ ಮೈದಾನವನ್ನು ಅಭಿವೃದ್ಧಿ ಪಡಿಸಲು ಅನುದಾನ ನೀಡುವುದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು. ಅಂಜಿಗೇರಿ ನಾಡ್ ಕೂಟದಿಂದ ನಡೆಯುತ್ತಿರುವ ಹಾಕಿ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇವರು, ಚುನಾವಣಾ ಸಂದರ್ಭದಲ್ಲಿ ಶಾಲಾ ಮೈದಾನದ ಅಭಿವೃದ್ಧಿ ಬಗ್ಗೆ ಭರವಸೆ ನೀಡಲಾಗಿತ್ತು.