ಮಡಿಕೇರಿ, ಡಿ. ೨೪: ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಿನ್ನೆ ದಿನ ಭಕ್ತಾದಿಗಳು ಪೂರ್ಣ ಕುಂಭ ಕಳಸದೊಂದಿಗೆ ಮೆರವಣಿಗೆ ಮೂಲಕ ಹೊರೆ ಕಾಣಿಕೆಯನ್ನು ತಂದು ದೇವಸ್ಥಾನಕ್ಕೆ ಅರ್ಪಿಸಿದರು. ಸಂಜೆ ಕೆಮ್ಮಿಂಜೆ ಲಕ್ಷಿö್ಮÃಶ ತಂತ್ರಿ ಮತ್ತು ಇರುವೈಲು ಕೃಷ್ಣದಾಸ್ ತಂತ್ರಿಗಳನ್ನು ಪೂರ್ಣ ಕುಂಭ ಕಳಸದೊಂದಿಗೆ ಬರಮಾಡಿ ಕೊಂಡು ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಯಿತು.

ಇಂದು ಬೆಳಿಗ್ಗೆ ಮಹಾ ಗಣಪತಿ ಹೋಮದೊಂದಿಗೆ ವಿವಿಧ ಪೂಜೆ ಗಳು ನಡೆದು ಬಾಲಾಲಯದಿಂದ ಶಿವಲಿಂಗ ಮತ್ತು ಪಾಣಿಪೀಠ ವನ್ನು ನೂತನ ದೇವಾಲಯಕ್ಕೆ ತರಲಾಯಿತು.

ತಾ. ೨೫ರಂದು (ಇಂದು) ಬೆಳಿಗ್ಗೆ ಮಹಾಗಣಪತಿ ಹೋಮದೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ. ಮಧ್ಯಾಹ್ನ ಹೋಮ ಕಲಶಾಭಿಷೇಕ, ಮಹಾಪೂಜೆ ಬಳಿಕ ಅನ್ನದಾನ, ರಾತ್ರಿ ವಿವಿಧ ಪೂಜೆಗಳ ಬಳಿಕ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಧಾರ್ಮಿಕ ಚಿಂತಕರಾದ ಚಿ.ನಾ. ಸೋಮೇಶ್ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಬಳಿಕ ಅನ್ನದಾನ ನೆರವೇರಲಿದೆ.