ಶ್ರೀಮಂಗಲ, ಡಿ. ೨೪: ಶ್ರೀಮಂಗಲ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಮಾರೋಪ ಭಾಷಣಕಾರರಾಗಿ ವೈದ್ಯ ಡಾ. ಕಾಳಿಮಾಡ ಶಿವಪ್ಪ ಅವರು ಪಾಲ್ಗೊಂಡು ಮಾತನಾಡಿ, ಸತ್ಸಂಗ, ಸದೃಢದೇಹ, ಸದೃಢ ಮನಸ್ಸು ಹೊಂದಿ ಸಮಯ ಸದುಪಯೋಗ ಮಾಡಿ ಕೊಂಡು ಉತ್ತಮ ಶಿಕ್ಷಣ ಹೊಂದಿ ಸುಖ-ಸಮೃದ್ಧ ಸಮಾಜ ವನ್ನು ನಿರ್ಮಿಸಿ ಎಂದು ವಿದ್ಯಾರ್ಥಿ ಗಳಿಗೆ ಹಿತವಚನ ನೀಡಿದರು.
ಈ ಸಂದರ್ಭ ಸಂಸ್ಥೆಯ ಹಳೆಯ ವಿದ್ಯಾರ್ಥಿ ಡಾ. ಕಾಳಿಮಾಡ ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಬೋಡಂಗಡ ಅಯ್ಯಪ್ಪ ಅವರು ವಹಿಸಿದ್ದರು. ಕೊಡಗಿನ ದಾನಿಗಳು ಸ್ಥಾಪಿಸಿರುವ ದತ್ತಿನಿಧಿ ಬಹುಮಾನ ಗಳನ್ನು ರಾಜ್ಯಮಟ್ಟದ ಕ್ರೀಡಾಕೂಟದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು, ವರ್ಷದ ಅತ್ಯುತ್ತಮ ಬಹುಮಾನಗಳನ್ನು ನೀಡಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಕಾಳಿಮಾಡ ಪದ್ಮ ಬೆಳ್ಯಪ್ಪ, ಖಜಾಂಚಿ ಎಸ್.ಎಂ. ವಿನಯ್, ನಿರ್ದೇಶಕರುಗಳಾದ ಚಿಮ್ಮಂಗಡ ಗಣಪತಿ, ಅಜ್ಜಮಾಡ ಸಾವಿತ್ರಿ, ಅಯ್ಯಮಾಡ ಉದಯ್, ಚೆಟ್ಟಂಗಡ ಕಾರ್ಯಪ್ಪ, ಬಾಚಂಗಡ ಕಾರ್ಯಪ್ಪ, ಅಣ್ಣಳಮಾಡ ನರೇಂದ್ರ ಹಾಗೂ ವರ್ಷದ ಅತ್ಯುತ್ತಮ ಬಹುಮಾನಗಳನ್ನು ನೀಡಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಕಾಳಿಮಾಡ ಪದ್ಮ ಬೆಳ್ಯಪ್ಪ, ಖಜಾಂಚಿ ಎಸ್.ಎಂ. ವಿನಯ್, ನಿರ್ದೇಶಕರುಗಳಾದ ಚಿಮ್ಮಂಗಡ ಗಣಪತಿ, ಅಜ್ಜಮಾಡ ಸಾವಿತ್ರಿ, ಅಯ್ಯಮಾಡ ಉದಯ್, ಚೆಟ್ಟಂಗಡ ಕಾರ್ಯಪ್ಪ, ಬಾಚಂಗಡ ಕಾರ್ಯಪ್ಪ, ಅಣ್ಣಳಮಾಡ ನರೇಂದ್ರ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರತ್ನಮ್ಮ ಉಪಸ್ಥಿತ ರಿದ್ದರು. ಕಾಲೇಜಿನ ಪ್ರಾಂಶುಪಾಲ ಮುಲ್ಲೇಂಗಡ ಸೋಮಯ್ಯ ಸ್ವಾಗತಿಸಿ, ಚಂದನ ಜಿ.ಎಸ್. ವಾರ್ಷಿಕ ವರದಿ ವಾಚನ ಮಾಡಿದರು. ಸಹ ಶಿಕ್ಷಕ ಅರುಣಾಚಲ ವಂದಿಸಿದರು. ಕನ್ನಡ ಶಿಕ್ಷಕ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟç ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.