ಪಳೆಯಂಡ ಪಾರ್ಥ ಚಿಣ್ಣಪ್ಪ

ವೀರಾಜಪೇಟೆ, ಡಿ. ೨೪: ವೀರಾಜಪೇಟೆ ಪಟ್ಟಣದ ಮುಖ್ಯ ರಸ್ತೆ ಕೇವಲ ೩೦ ಅಡಿಗಳಿಷ್ಟಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾ ಗುತ್ತಿದೆ. ಈಗಾಗಲೇ ಇಲಾಖಾ ಸರ್ವೆ ಕಾಂiÀið ಮುಗಿಸಿದ್ದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಬಹುತೇಕ ಅಂಗಡಿ ಮಾಲೀಕರು ತಮ್ಮ ಅಂಗಡಿ ಮಳಿಗೆಗಳನ್ನು ತೆರವು ಗೊಳಿಸುತ್ತಿದ್ದು ಕೆಲವು ಗೊಂದಲ ಗಳು ಸರಿಯಾದರೆ ಮುಂದಿನ ಎರಡು ತಿಂಗಳಲ್ಲಿ ರಸ್ತೆ ವಿಸ್ತರಣೆ ಕಾರ್ಯ ಪೂರ್ಣಗೊಳ್ಳಲಿದೆ.

ಸರ್ಕಾರದ ಆದೇಶ ಸಂಖ್ಯೆ ಪಿಡಬ್ಲೂö್ಯಡಿ೨೩ ಆರ್‌ಡಿಎಫ್ ೨೦೦೪ ದಿನಾಂಕ ೧೮.೧೦.೨೦೦೪ ರ ಅನ್ವಯ ರಸ್ತೆಯ ಮಧ್ಯಭಾಗದಿಂದ ರಾಷ್ಟಿçÃಯ ಹಾಗೂ ರಾಜ್ಯ ಹೆದ್ದಾರಿಗಳು ರಾಜ್ಯ ಹೆದ್ದಾರಿಗಳು ರಸ್ತೆಯ ಮಧ್ಯಭಾಗದಿಂದ ನಿಗದಿ ಪಡಿಸಿದಂತೆ ೪೦ ಮೀಟರ್‌ಗಳಾಗಿದೆ. ಇತರ ಜಿಲ್ಲಾ ಮುಖ್ಯ ರಸ್ತೆಗಳು ೨೫ ಮೀಟರ್‌ಗಳಂತೆ ನಿಗದಿ ಪಡಿಸಲಾಗಿತ್ತು. ತದನಂತರ ರಾಜ್ಯ ಲೊಕೋಪಯೋಗಿ ಇಲಾಖೆಯ ಉಲ್ಲೇಖ(೨)ರ ಆದೇಶದಲ್ಲಿ ನಗರ, ಪಟ್ಟಣ ಗ್ರಾಮಗಳ ಪರಿಮಿತಿ ಹಾಗೂ ಇತರ ಆಕ್ಷೇಪಿತ ಪ್ರದೇಶಗಳಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ಗಡಿರೇಖೆ ಮತ್ತು ಕಟ್ಟಡ ರೇಖೆಗಳನ್ನು ಮಾರ್ಪಡಿಸ ಲಾಗಿದ್ದು ರಾಜ್ಯ ಹೆದ್ದಾರಿಯ ಭೂ ದಾಖಲಿತ ರಸ್ತೆ ಭೂ ಗಡಿಯ ಅಂಚಿನಿAದ ಕಟ್ಟಡ ರೇಖೆಯ ಅಂತರ ಸಿಟಿ ಕಾರ್ಪೊರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಪರಿಮಿತಿ, ಟೌನ್ ಪಂಚಾಯಿತಿ, ಗ್ರಾಮ ಪಂಚಾಯಿತಿ ಪರಿಮಿತಿಯಲ್ಲಿ ೬ ಮೀಟರ್, ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ ೧೫ ಕಿ.ಮೀ, ಸಿಟಿ ಮುನ್ಸಿಪಲ್ ಕೌನ್ಸಿಲ್‌ನಿಂದ ೧೦ ಕಿ.ಮೀ, ಟೌನ್ ಮುನ್ಸಿಪಲ್, ಟೌನ್ ಪಂಚಾಯಿತಿ, ಗ್ರಾಮ ಪಂಚಾಯಿತಿ ಪರಿಮಿತಿಯೊಳಗೆ ೫ ಕಿ.ಮೀ ದೂರದವರೆಗೆ ೧೨ ಮೀಟರ್ ನಿಗದಿಪಡಿಸಲಾಗಿತ್ತು.

ಸರ್ಕಾರ ನಿಗದಿಪಡಿಸಿದ ಪರಿಮಿತಿಯ ಅಂತರದಲ್ಲಿ ಹಲವು ಪಟ್ಟಣ, ಗ್ರಾಮಗಳು ಬರುವುದರಿಂದ ಇದನ್ನು ಜಾರಿಗೊಳಿಸಿದರೆ ತೊಂದರೆ ಉಂಟಾಗುವ ಅಂಶಗಳನ್ನು ಗಮನದಲ್ಲಿಟ್ಟ ಇಲಾಖೆ ರಾಜ್ಯ ಹೆದ್ದಾರಿಗಳ ಕಟ್ಟಡ ರೇಖೆಗಳ ಅಂತರವನ್ನು ಸಿಟಿ ಕಾರ್ಪೋ ರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆಯ ಭೂ ಗಡಿಯಿಂದ ೬ ಮೀಟರ್, ಸಿಟಿ ಕಾರ್ಪೋರೇಷನ್ ಪರಿಮಿತಿಯಿಂದ ೧೫ ಕಿ.ಮೀ, ೧೨ ಮೀಟರ್‌ಗೆ ನಿಗದಿಪಡಿಸಲಾಗಿದೆ.

ವೀರಾಜಪೇಟೆ ಪಟ್ಟಣದ ಜನಸಂಖ್ಯೆ ಸುಮಾರು ೨೨ ಸಾವಿರಕ್ಕೂ ಅಧಿಕ ಇದ್ದು ವಾಹನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಗ್ರಾಮಾಂತರ ಪ್ರದೇಶಗಳಿಂದಲೂ ಜನರು ಪಟ್ಟಣಕ್ಕೆ ಆಗಮಿಸುತ್ತಾರೆ. ಪ್ರತಿ ಬುಧವಾರ ನಡೆಯುವ ವಾರದ ಸಂತೆ ಸೇರಿದಂತೆ ಉಳಿದ ದಿನಗಳಲ್ಲಿಯು ವಾಹನಗಳ ಭರಾಟೆಯ ನಡುವೆ ಪಾದಚಾರಿಗಳ ಓಡಾಟ ಕಷ್ಟಕರವಾಗಿದೆ. ಈಗಿರುವ ರಸ್ತೆ ಕೇವಲ ೩೦ ಅಡಿಗಳಷ್ಟು ಮಾತ್ರ ಅಗಲವಿದ್ದು ಸಂಚಾರಕ್ಕೆ ತೀವ್ರ ತೊಡಕಾಗಿದೆ. ಪಟ್ಟಣದ ಹೆದ್ದಾರಿಯ ಇಕ್ಕೆಲಗಳ ವಾಸದ ಮನೆಗಳಲ್ಲಿರುವ ಜನರ ಮತ್ತು ವ್ಯಾಪಾರಿಗಳ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಸ್ತರಣೆ ಕಾರ್ಯ ಸ್ಥಗಿತಗೊಂಡಿತ್ತು.

೨೦೧೯ ರಲ್ಲಿ ನಡೆದ ಪ್ರಕೃತಿ ವಿಕೋಪದ ಸಂದರ್ಭ ಮಲೆತಿರಿಕೆ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಭೂ ವಿಜ್ಞಾನಿಗಳು ಬೆಟ್ಟ ಪ್ರದೇಶದಲ್ಲಿ ಅಧ್ಯಯನ ನಡೆಸಿ ಮಾನವನ ಹಸ್ತಕ್ಷೇಪವೇ ಭೂ ಕುಸಿತಕ್ಕೆ ಕಾರಣ. ಬೆಟ್ಟ ಪ್ರದೇಶದಲ್ಲಿ ಜನರ ವಾಸಕ್ಕೆ ಯೋಗ್ಯ ಇಲ್ಲ ಎಂದು ಸರ್ಕಾರಕ್ಕೆ ವರದಿ ನೀಡಿದೆ.

ಭೂ ವಿಜ್ಞಾನಿಗಳ ವರದಿಯನ್ನ ಆಧರಿಸಿ ರಸ್ತೆ ಅಗಲೀಕರಣ ಆದರೆ ಪರಿಸರಕ್ಕೆ ಧಕ್ಕೆ ಎಂಬ ವಿಚಾರವನ್ನು ಮುಂದಿಟ್ಟು ಜಿಲ್ಲೆಯ ಸಂಘಟನೆ ಯೊಂದು ರಾಜ್ಯ ಉಚ್ಚ ನ್ಯಾಯಾ ಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮ್ಮೆ ದಾಖಲಿಸಿತ್ತು. ರಸ್ತೆ ವಿಸ್ತರಣೆ ಮಾಡಿದರೆ ಮಲೆತಿರಿಕೆ ಬೆಟ್ಟಕ್ಕೆ ಹಾನಿಯಾಗಿ ಪರಿಸರ ನಾಶ ವಾಗುತ್ತದೆ ಎಂದು ಆರೋಪಿಸ ಲಾಗಿತ್ತು. ರಸ್ತೆ ಅಗಲೀಕರಣ ವಿಚಾರದಲ್ಲಿ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಸಂಘಟನೆಯ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಪರಿಸರಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ನೀಡಿದ ಆಶ್ವಾಸನೆಯ ಮೇರೆಗೆ ಪ್ರಮುಖ ಸಂಘಟನೆಯೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಹಿಂಪಡೆದುಕೊAಡಿದೆ.

ರಸ್ತೆಯ ಅಗಲೀಕರಣ ಆಗದ ಹಿನ್ನೆಲೆಯಲ್ಲಿ ವಾಹನ ಪಾರ್ಕಿಂಗ್‌ಗೆ ಸಮಸ್ಯೆಯಾಗುತ್ತಿದೆ. ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ಬೆಳಗ್ಗಿನಿಂದ ಸಂಜೆವರೆಗೆ ತಮ್ಮ ಅಂಗಡಿ ಮುಂದೆ ನಿಲ್ಲಿಸುತ್ತಿದ್ದಾರೆ. ಇದರಿಂದ ಗ್ರಾಮಾಂತರ ಪ್ರದೇಶ ಗಳಿಂದ ಬರುವ ಜನರಿಗೆ ಪಾರ್ಕಿಂಗ್ ಸಮಸ್ಯೆಯಾಗುತ್ತದೆ. ಕೇರಳ ಮಾದರಿಯಲ್ಲಿ ಪಾರ್ಕಿಂಗ್‌ಗೆ ಸಮಯ ನಿಗದಿ ಮಾಡಿದರೆ ಎಲ್ಲಾ ವಾಹನ ಮಾಲೀಕರಿಗೆ ಉಪಯೋಗವಾಗುತ್ತದೆ ಎಂಬುದು ಸಾರ್ವಜನಿಕರ ಅಳಲಾಗಿದೆ.