ಐಗೂರು, ಡಿ. ೨೪: ಒತ್ತುವರಿಯಾಗಿದ್ದ ಕೆರೆಯನ್ನು ತೆರವುಗೊಳಿಸಿ ಗ್ರಾಮ ಪಂಚಾಯಿತಿಗೆ ಜಾಗ ಹಸ್ತಾಂತರಿಸಲಾಯಿತು.

ಕರ್ನಾಟಕ ಉಚ್ಚ ನ್ಯಾಯಾಲಯ ಸರ್ಕಾರಿ ಕೆರೆಗಳನ್ನು ತೆರವು ಮಾಡುವಂತೆ ಆದೇಶಿಸಿರುವ ಹಿನ್ನೆಲೆ ಸೋಮವಾರಪೇಟೆ ತಾಲೂಕು ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಕೆರೆಯನ್ನು ಸರ್ವೆ ನಡೆಸಿ ತೆರವುಗೊಳಿಸಿ ಮುಂದಿನ ಕ್ರಮಕೈಗೊಳ್ಳಲಾಯಿತು. ಸೋಮವಾರಪೇಟೆ ತಾಲೂಕು ಕಂದಾಯ ಪರಿವೀಕ್ಷಕ ಪ್ರಹ್ಲಾದ್ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ದೀಪಿಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಲೀಂ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮ, ಸರ್ವೇಯರ್ ಪ್ರದೀಪ್, ಮಂಜುನಾಥ್, ಸಿಬ್ಬಂದಿಗಳಾದ ರವಿ, ರೋಶನ್ ಮತ್ತು ರುದ್ರ ಹಾಜರಿದ್ದರು. - ಸುಕುಮಾರ