ಡಿಸೆಂಬರ್ ೨೫ ರಂದು ವಿಶ್ವದೆಲ್ಲಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ. ಕ್ರೆöÊಸ್ತರು ಮಾತ್ರವಲ್ಲದೇ, ಅನ್ಯ ಧರ್ಮಿಯರೂ, ಕೂಡ ಸಂಭ್ರಮ ದಿಂದ, ಸಂತಸದಿAದ ಆಚರಿಸುವ ಹಬ್ಬ "ಕ್ರಿಸ್ಮಸ್". ಲೋಕ ರಕ್ಷಕ, ಪ್ರಭು ಏಸುಕ್ರಿಸ್ತನು ಜನಿಸಿದ ಸುದಿನ. ಅದನ್ನು ಸಂಭ್ರಮದಿAದ ಆಚರಿಸಲು ಒಂದು ತಿಂಗಳಿನಿAದಲೇ ತಯಾರಿ ಗಳನ್ನು ಮಾಡಿಕೊಳ್ಳುತ್ತಾರೆ. ಖಾದ್ಯ ತಿಂಡಿಗಳ ತಯಾರಿ, ಕೇಕ್ ತಯಾರಿ, ಕ್ರಿಸ್ಮಸ್ ಕ್ಯಾರಲ್, ಬಟ್ಟೆಗಳ ಖರೀದಿ, ಹಾಡುಗಳ ಮೂಲಕ ಕ್ರಿಸ್ತ ಜನನದ ಸಂದೇಶ ಸಾರುವುದು, ಶುಭಾಶಯ ಹೇಳುವುದು, ಗೋದಲಿಯ ನಿರ್ಮಾಣ, ವಿವಿಧ ರೀತಿಯ ನಕ್ಷತ್ರಗಳನ್ನು ತಯಾರಿಸುವುದು, ಬಂಧು- ಬಳಗದವರು, ಹಿತೈಷಿಗಳು ಒಟ್ಟಾಗಿ ಸೇರಿ ಸಂಭ್ರಮಿಸಲು ಹವಣಿ ಸುವುದು ಸಹಜ. ಮಾನವನಿಗಾಗಿ, ಪವಿತ್ರಾತ್ಮರಿಂದಲೇ ಮಾನವ ರೂಪವನ್ನು ಪಡೆದು ತಂದೆ ದೇವರ ಚಿತ್ತವನ್ನು ನೆರವೇರಿಸಲು, ಈ ಧರೆಗೆ ಏಸು ಮೊದಲ ಬಾರಿಗೆ ಸ್ಪರ್ಶಿಸಿದ ದಿನವೇ "ಕ್ರಿಸ್ಮಸ್" ಹಬ್ಬವಾಗಿದೆ. ಆಗಮಿಸುವ ವ್ಯಕ್ತಿ ದೇವರಿಂದಲೇ ಅಭಿಷಿಕ್ತರಾದ ಉನ್ನತ ಮಟ್ಟದ ಪ್ರವಾದಿ ಆಗಿರಬಹುದು ಅಥವಾ ಅರಮನೆಗಳಲ್ಲಿ ಜನಿಸಿ ಧೀರನಂತ ರಾಜನಾಗಿ ಜನಿಸಬಹುದು, ಎಂಬ ಕಾಲ್ಪನಿಕ ಚಿತ್ರಣವನ್ನು ಆ ಕಾಲದ ಯಹೂದ್ಯ ಜನರು ಹೊಂದಿದ್ದರು. ಇಹಲೋಕದ ಶಿಕ್ಷಣ ಜ್ಞಾನವಿಲ್ಲದ, ದೈವಿಕ ಜ್ಞಾನವೂ ಇಲ್ಲದೆ, ಅಂಧಕಾರದ ಜೀವನದಲ್ಲಿ ತಮ್ಮ ಪ್ರತಿದಿನದ ಬದುಕನ್ನು ಸಾಗಿಸುತ್ತಿದ್ದರು. ಕಾಲದ ಪರಿವೇ ಇರಲಿಲ್ಲ. ಬದುಕಿ ನುದ್ದಕ್ಕೂ, ಬಳಲಿ ಬೆಂಡಾಗಿದ್ದರು. ಕಾಲವು ಪರಿಪಕ್ವವಾದಾಗ, ದೇವರು ತಮ್ಮ ಏಕೈಕ ಪುತ್ರನನ್ನೇ ಈ ಲೋಕಕ್ಕೆ ಕಳುಹಿಸಿಕೊಟ್ಟರು. ಆತನು, ಸ್ವರ್ಗದ ವೀರಾಧಿ-ವೀರನು, ಮಾನವರೆಲ್ಲರನ್ನು ಸಂಧಿಸಲು, ಸ್ಪರ್ಶಿಸಲು, ದೈವಿಕ ಪ್ರೀತಿಯನ್ನು ಜಗತ್ತಿಗೆ ಸಾರಲು, ಕ್ಷಮೆ, ಅನ್ಯೋನ್ಯತೆ, ಪ್ರೀತಿ, ವಿಶ್ವಾಸ, ಶಾಂತಿ ಮತ್ತು ಸೇವೆ ಎಂಬ ಅಸ್ತçಗಳನ್ನು ಧರಿಸಿ ಬಂದಿಹನು. ಪಾಪ ಶೋಧನೆಯನ್ನು ಜಯಿಸಿ, ಲೋಕದ ಜನತೆಯನ್ನು ರಕ್ಷಿಸಲು, ದುರ್ಬಲ ಮನುಜರನ್ನು ದೇವರ ರಾಜ್ಯದ ಸಶಕ್ತ ಸೈನಿಕರ ನ್ನಾಗಿಸಲು, ಭೌತಿಕ ಅಸ್ತçಗಳನ್ನು ತ್ಯಜಿಸಿ, ದೈವೀ ಗುಣಗಳೆಂಬ ಅಸ್ತçಗಳನ್ನು ಹೊತ್ತು ತಂದಿಹನು. ಅರಮನೆಯಲ್ಲಿ ಜನಿಸಬೇಕಾದ ಯೇಸುರಾಜ ದನಗಳ ಗೋದಲಿಯಲ್ಲಿ ಜನಿಸಿ ಒಂದು ಧರ್ಮಕ್ಕೆ, ಜನಾಂಗಕ್ಕೆ ಸೀಮಿತವಾಗಿರದೇ, ವಿಶ್ವದ ಅರಸನಾಗಿ ಜನಿಸಿದ್ದಾನೆ. ಕ್ರಿಸ್ಮಸ್ ಅನ್ನು ಮೊದಲು ರೋಮ್ ದೇಶದಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತಿದೆ. ಆದರೆ ಕ್ರಿಸ್ಮಸ್‌ಗೆ ಮುನ್ನ ರೋಮ್ ನಗರದಲ್ಲಿ ಡಿಸೆಂಬರ್ ೨೫ ದಿನವನ್ನು ಸೂರ್ಯದೇವರ ಜನ್ಮ ದಿನವಾಗಿ ಆಚರಿಸಲಾಯಿತು. ಆ ಸಮಯದಲ್ಲಿ ರೋಮಿನ ಚಕ್ರವರ್ತಿಗಳು ಸೂರ್ಯ ದೇವನನ್ನು ತಮ್ಮ ಮುಖ್ಯ ದೇವತೆ ಯನ್ನಾಗಿ ಪರಿಗಣಿಸಿದ್ದರು. ಆದರೆ ಕ್ರಿ.ಶ. ೩೩೦ ರ ಹೊತ್ತಿಗೆ ರೋಮಿನಲ್ಲಿ ಕ್ರೆöÊಸ್ತ ಧರ್ಮದ ಪ್ರಚಾರವು ವೇಗವಾಗಿ ಬೆಳೆಯಲು ಪ್ರಾರಂಭಿಸಿತು. ಹೀಗೆ ಪ್ರಾರಂಭವಾದ ಕ್ರಿಸ್ಮಸ್ ಹಬ್ಬದ ಆಚರಣೆ ಈಗ ಜಗತ್ತಿನಾದ್ಯಂತ ಪ್ರಪಂಚದಲ್ಲೇ ಬಹಳ ಸಂಭ್ರಮದಿAದ ಸಡಗರದಿಂದ ಆಚರಿಸಲಾಗುತ್ತಿದೆ.

"ತನಗಾಗಿ ಬಾಳುವುದು ಬಾಳಲ್ಲ, ತನಗಾಗಿ ಬೆಳಗುವುದು ದೀಪವಲ್ಲ, ತನಗಾಗಿ ಅರಳುವುದು ಹೂವಲ್ಲ". ಎಂಬ ಸತ್ಯಾಂಶವೇ ಕ್ರಿಸ್ತ ಜಯಂತಿಯ ಸಂದೇಶವಾಗಿರಲಿ. ಈ ಹಬ್ಬವು ನಮಗಿಂದು ನಮ್ಮ ಬದುಕಿನಲ್ಲಿ ಕಳೆದುಕೊಂಡ ಜೀವನದ ಮೌಲ್ಯಗಳನ್ನು, ಏಸುವಿನ ದೈವೀ ಅಸ್ತçಗಳನ್ನು ಮರುಪಡೆಯುವ ಕರೆಯಾಗಲಿ. ಅಂದು ಬೆತ್ಲೆಹೇಮಿನಲ್ಲಿ ಜನಿಸಿದ ಕ್ರಿಸ್ತ, ಇಂದು ನಮ್ಮ ಹೃದಯದಲ್ಲಿ ಜನಿಸಬೇಕಾಗಿದೆ.

ನಮ್ಮ ಜೀವನ, ಪ್ರೀತಿಯ, ಶಾಂತಿಯ, ಕ್ಷಮೆಯ, ಸೇವೆಯ ತಾಣವಾಗಿ ಸೋಣ.

- ಚಾರ್ಲ್ಸ್ ಡಿಸೋಜ, ಉಪನ್ಯಾಸಕರು, ವೀರಾಜಪೇಟೆ.