ಸ್ಥಳೀಯರಿಗೆ ಉದ್ಯೋಗ ನೀಡಬೇಕು: ಸಿದ್ದರಾಮಯ್ಯ

ಮೈಸೂರು, ಡಿ. ೨೪: ಮೈಸೂರು ಮತ್ತು ಸುತ್ತಮುತ್ತ ಸ್ಥಾಪನೆಯಾಗಿರುವ ಕಾರ್ಖಾನೆಗಳಲ್ಲಿ ಉದ್ಯೋಗಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಕಾರ್ಖಾನೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ಸಮೀಪದ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಮಾತ್ರ ಉದ್ಯೋಗ ನೀಡಬೇಕು ಮತ್ತು ತಾಂತ್ರಿಕವಾಗಿ ನುರಿತವರು ಸ್ಥಳೀಯವಾಗಿ ಲಭ್ಯವಿಲ್ಲದಿದ್ದಾಗ ಹೊರಗಿನವರಿಗೆ ಮಾತ್ರ ಅವಕಾಶ ನೀಡಬೇಕು ಎಂದರು. ಸ್ಥಳೀಯರಿಗೆ ಉದ್ಯೋಗ ಸಿಗದಿರುವ ವಿಚಾರವನ್ನು ಪ್ರಸ್ತಾಪಿಸಿದ ಸಿಎಂ, ರಾಜ್ಯದಲ್ಲಿ ವೃತ್ತಿಪರ ಕೌಶಲ್ಯವಿರುವ ಮಾನವ ಸಂಪನ್ಮೂಲವಿದ್ದು, ಸುಳ್ಳು ನೆಪ ಹೇಳಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ನಿರಾಕರಿಸಬಾರದು ಎಂದು ಹೇಳಿದರು. ಕಾರ್ಖಾನೆಗಳು ಶಾಂತಿಯುತವಾಗಿ ನಡೆಯಬೇಕು. ನಮ್ಮ ಸರ್ಕಾರ ನಿರುದ್ಯೋಗಿ ಪದವೀಧರರಿಗೆ ಯುವ ನಿಧಿ ಯೋಜನೆ ಜಾರಿಗೊಳಿಸುತ್ತಿದೆ. ಜನವರಿ ೧೨ ರಂದು ಈ ಯೋಜನೆಗೆ ಚಾಲನೆ ನೀಡಲಾಗುವುದು. ಬೇಡಿಕೆಗೆ ಅನುಗುಣವಾಗಿ ಪದವೀಧರರಿಗೆ ಅಗತ್ಯವಿರುವ ವೃತ್ತಿಪರ ಕೌಶಲ್ಯವನ್ನು ಸರ್ಕಾರದಿಂದ ತರಬೇತಿ ನೀಡಲಾಗುವುದು ಎಂದರು.

ಪೊಲೀಸ್ ಎನ್‌ಕೌಂಟರ್; ೩ ಮಾವೋವಾದಿಗಳು ಹತ

ರಾಯ್ಪುರ, ಡಿ. ೨೪: ಛತ್ತೀಸ್‌ಗಢದಲ್ಲಿ ಮತ್ತೊಂದು ನಕ್ಸಲ್ ಎನ್‌ಕೌಂಟರ್ ನಡೆದಿದ್ದು, ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಸಿಬ್ಬಂದಿಯೊAದಿಗೆ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಟ ಮೂವರು ಮಾವೋವಾದಿಗಳು ಹತರಾಗಿದ್ದಾರೆ. ಮೂಲಗಳ ಪ್ರಕಾರ ಭಾನುವಾರ ಸಂಜೆ ೫:೩೦ ರ ಸುಮಾರಿಗೆ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಕಾಟೇಕಲ್ಯಾಣ ಪೊಲೀಸ್ ಠಾಣಾ ವ್ಯಾಪ್ತಿಯ ದಬ್ಬಕುನ್ನ ಗ್ರಾಮದ ಬಳಿಯ ಬೆಟ್ಟದ ಮೇಲೆ ಮಾವೋವಾದಿಗಳ ಇರುವಿಕೆ ಪತ್ತೆ ಮಾಡಿದ್ದು, ಈ ವೇಳೆ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ಏರ್ಪಟ್ಟಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ರೇಂಜ್) ಸುಂದರರಾಜ್ ಪಿ. ತಿಳಿಸಿದ್ದಾರೆ.

ಕೆರೆ ಏರಿ ಮೇಲಿಂದ ಉರುಳಿಬಿದ್ದ ಬಸ್:೨೦ ಮಂದಿಗೆ ಗಾಯ

ಬೆಂಗಳೂರು, ಡಿ. ೨೪: ವೇಗವಾಗಿ ಬಂದ ಖಾಸಗಿ ಬಸ್‌ವೊಂದು ಕೆರೆ ಏರಿ ಮೇಲಿಂದ ಉರುಳಿ ಬಿದ್ದ ಪರಿಣಾಮ ೨೦ ಮಂದಿ ಗಾಯ ಗೊಂಡಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರದ ಹೊರ ವಲಯದ ಸರ್ಜಾಪುರ-ಅತ್ತಿಬೆಲೆ ರಸ್ತೆಯ ಬಿದರಗುಪ್ಪೆ ಕೆರೆ ಬಳಿ ಶನಿವಾರ ಈ ಅಪಘಾತ ನಡೆದಿದೆ. ಬಸ್ ಚಾಲಕ ಸಲೀಂ ಉಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಿಗ್ಗೆ ೬ ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದಾಗ ಬಸ್‌ನಲ್ಲಿ ಸುಮಾರು ೫೦ ಮಂದಿ ಇದ್ದರು ಎನ್ನಲಾಗಿದೆ. ಬಸ್ ಸರ್ಜಾಪುರ-ಅತ್ತಿಬೆಲೆ ಮಾರ್ಗವಾಗಿ ತಮಿಳುನಾಡಿನ ಓಂ ಶಕ್ತಿ ಕಡೆಗೆ ಸಾಗುತ್ತಿತ್ತು. ಗಾಯಾಳುಗಳನ್ನು ಅತ್ತಿಬೆಲೆಯ ಶ್ರೀ ಸಾಯಿ ಆಸ್ಪತ್ರೆಗೆ ರವಾನಿಸಲಾಗಿದೆ. ಅತ್ತಿಬೆಲೆ ನಿವಾಸಿ ಸಲೀಂ ಉಲ್ಲಾ ಅವರ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ದಾಳಿ:ನಿವೃತ್ತ ಪೊಲೀಸ್ ಅಧಿಕಾರಿ ಸಾವು

ಶ್ರೀನಗರ, ಡಿ. ೨೪: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಶೀರಿ ಬಾರಾಮುಲ್ಲಾದ ಗಂಟ್ಮುಲ್ಲಾ ಎಂಬಲ್ಲಿರುವ ಮಸೀದಿಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಾರ್ಥನೆ ಸಲ್ಲಿಸುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಶಫಿ ಅವರು ಗಂಭೀರವಾಗಿ ಗಾಯಗೊಂಡು, ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ್ದ ಪ್ರಕರಣ: ಮುಖ್ಯ ಶಿಕ್ಷಕಿ ಬಂಧನ

ಬೆAಗಳೂರು, ಡಿ. ೨೪: ಅಂದ್ರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಚಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಶಾಲೆಯ ಮುಖ್ಯ ಶಿಕ್ಷಕಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಅಂದ್ರಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷಿö್ಮÃ ದೇವಮ್ಮ ಬಂಧಿತರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ಆರೋಪಿ ಲಕ್ಷಿ ದೇವಮ್ಮ ಅವರನ್ನು ಅಮಾನತು ಗೊಳಿಸಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಅಂದ್ರಹಳ್ಳಿಯ ಶಾಲೆಯಲ್ಲಿ ಮಕ್ಕಳಿಂದಲೇ ಶಿಕ್ಷಕರು ಶಾಲೆಯ ಶೌಚಾಲಯವನ್ನು ಬ್ಲೀಚಿಂಗ್ ಪೌಡರ್ ಹಾಗೂ ಆ್ಯಸಿಡ್ ಹಾಕಿಸಿ ಸ್ವಚ್ಛಗೊಳಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ವಿಷಯ ತಿಳಿದ ಮಕ್ಕಳ ಪೊಷಕರು ಶಾಲೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿಯುತ್ತಿದ್ದಂತೆ ಬಿಇಓ ಆಂಜನಪ್ಪ ಅವರು ಸ್ಥಳಕ್ಕಾಗಮಿಸಿ ಪ್ರತಿಭಟನಾಕರರ ಮನವೊಲಿಸಿ ನಂತರ ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಎಫ್.ಐ.ಆರ್. ದಾಖಲಿಸಿಕೊಂಡ ಪೊಲೀಸರು ಶಾಲಾ ಮುಖ್ಯ ಶಿಕ್ಷಕಿಯನ್ನು ಬಂಧಿಸಿದ್ದಾರೆ.

ರಾಷ್ಟಿçÃಯ ಕುಸ್ತಿ ಫೆಡರೇಷನ್ ಸಂಸ್ಥೆ ಅಮಾನತು ಮಾಡಿದ ಕೇಂದ್ರ ಸರ್ಕಾರ

ನವದೆಹಲಿ, ಡಿ. ೨೪: ಸಂಜಯ್ ಸಿಂಗ್ ನೇತೃತ್ವದ ಕುಸ್ತಿ ಫೆಡರೇಶನ್‌ನ ಹೊಸ ಸಮಿತಿಯನ್ನು ಕ್ರೀಡಾ ಸಚಿವಾಲಯವು ಅಮಾನತುಗೊಳಿಸಿದೆ. ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳಿಗೆ ಡಬ್ಲ್ಯೂಎಫ್‌ಐ ಸಂಪೂರ್ಣ ನಿರ್ಲಕ್ಷö್ಯವನ್ನು ತೋರಿಸಿದೆ ಎಂದು ಉಲ್ಲೇಖಿಸಿ ಸಚಿವಾಲಯವು ಇಂದು ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಹೊಸದಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ಡಿಸೆಂಬರ್ ೨೧ ರಂದು ಜೂನಿಯರ್ ರಾಷ್ಟಿçÃಯ ಸ್ಪರ್ಧೆಗಳು ಈ ವರ್ಷಾಂತ್ಯದ ಮೊದಲು ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದರು ಎಂದು ಸಚಿವಾಲಯ ಉಲ್ಲೇಖಿಸಿದೆ. ಇದು ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಕುಸ್ತಿಪಟುಗಳು ತಯಾರಾಗಲು ಕನಿಷ್ಟ ೧೫ ದಿನಗಳ ಸೂಚನೆ ಅಗತ್ಯವಿದೆ ಎಂದು ಸಚಿವಾಲಯ ವಿವರಿಸಿದೆ. ಅಂತಹ ನಿರ್ಧಾರಗಳನ್ನು ಕಾರ್ಯಕಾರಿ ಸಮಿತಿಯು ತೆಗೆದುಕೊಳ್ಳಬೇಕು, ಅದಕ್ಕೂ ಮೊದಲು ಕಾರ್ಯಸೂಚಿಗಳನ್ನು ಪರಿಗಣನೆಗೆ ಇರಿಸಬೇಕಾಗುತ್ತದೆ. ಹೊಸದಾಗಿ ಚುನಾಯಿತ ಸಮಿತಿಯು ಕ್ರೀಡಾ ಸಂಹಿತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಮಾಜಿ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣವನ್ನು ತೋರುತ್ತಿದೆ ಎಂದು ಸÀಚಿವಾಲಯ ಆರೋಪಿಸಿದೆ.

ಅಮೋನಿಯಂ ನೈಟ್ರೇಟ್ ಖರೀದಿಸಿದ್ದ ಶಂಕಿತ ಉಗ್ರರು

ಬಳ್ಳಾರಿ, ಡಿ. ೨೪: ಎನ್‌ಐಎ ಬಂಧಿಸಿರುವ ಇಬ್ಬರು ಶಂಕಿತ ಉಗ್ರರು ನಗರದ ರಸಗೊಬ್ಬರ ಅಂಗಡಿಯಿAದ ಅಮೋನಿಯಂ ನೈಟ್ರೇಟ್ ಖರೀದಿಸಿದ್ದರು ಎಂದು ವರದಿಯಾಗಿದೆ. ಆರೋಪಿಗಳಾದ ಮೊಹಮ್ಮದ್ ಸುಲೇಮಾನ್ ಮತ್ತು ಸೈಯದ್ ಸಮೀರ್ ಅವರು ಅಕ್ಟೋಬರ್ ೨೨ ರಂದು ಒಂದು ಕೆ.ಜಿ. ಅಮೋನಿಯಂ ನೈಟ್ರೇಟ್ ಖರೀದಿಸಿರುವುದಾಗಿ ಎನ್‌ಐಎ ಅಧಿಕಾರಿಗಳ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಗೊಬ್ಬರ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಅಮೋನಿಯಂ ನೈಟ್ರೇಟ್ ಅನ್ನು ಸ್ಫೋಟಕ ಏಜೆಂಟ್ ಆಗಿಯೂ ಬಳಸಬಹುದು. ಪ್ರಯೋಗಾತ್ಮಕ ಸ್ಫೋಟಕವನ್ನು ತಯಾರಿಸಲು ಈ ವಸ್ತುವನ್ನು ಬಳಸುವ ಯೋಜನೆ ಇತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಆದಾಗ್ಯೂ, ಆ ದಿನಾಂಕದAದು ಯಾವುದೇ ಬಿಲ್ ಅಂಗಡಿಯಲ್ಲಿ ಕಂಡುಬAದಿಲ್ಲ ಮತ್ತು ಅವರ ಭೇಟಿಯ ಯಾವುದೇ ದಾಖಲೆಗಳಿಲ್ಲ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ ೧೮ ರಂದು, ಎನ್‌ಐಎ ಅಧಿಕಾರಿಗಳು ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ನಿಷೇಧಿತ ಪಿಎಫ್‌ಐ ಮತ್ತು ಐಎಸ್‌ಐಎಸ್‌ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತರ ಮೇಲೆ ದಾಳಿ ನಡೆಸಿದರು. ಈ ವೇಳೆ ಸುಲೇಮಾನ್ ಮತ್ತು ಸಮೀರ್ ಸೇರಿದಂತೆ ಬಳ್ಳಾರಿ ಮೂಲದ ನಾಲ್ವರನ್ನು ಬಂಧಿಸಿದ್ದರು.