ಕುಶಾಲನಗರ, ಡಿ. ೨೨: ನೆಲ, ಜಲ, ಪರಿಸರ ಸಂರಕ್ಷಣೆಗಾಗಿ ಜನರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವಕನೊಬ್ಬ ಕನ್ಯಾಕುಮಾರಿಯಿಂದ ಸೈಕಲ್ ಜಾಥಾ ಹಮ್ಮಿಕೊಂಡು ಭಾನುವಾರ ಕುಶಾಲನಗರ ತಲುಪಿದ್ದಾರೆ.
ಕನ್ಯಾಕುಮಾರಿಯಿಂದ ಹೊರಟು ತಮಿಳುನಾಡು ಮೂಲಕ ಬಂದು ಕುಶಾಲನಗರಕ್ಕೆ ಆಗಮಿಸಿದ ಮಧ್ಯಪ್ರದೇಶದ ಯುವಕ ರಾಬಿನ್ ಸಿಂಗ್ ಅವರನ್ನು ಕುಶಾಲನಗರದ ರಥ ಬೀದಿಯಲ್ಲಿ ಬರಮಾಡಿಕೊಳ್ಳಲಾಯಿತು.
ಕನ್ಯಾಕುಮಾರಿಯಿಂದ ಅಕ್ಟೋಬರ್ ೨೨ ರಿಂದ ೬೦೦ ಕಿಲೋಮೀಟರ್ ಉದ್ದಕ್ಕೆ ರಾಬಿನ್ ಸಿಂಗ್ ಸೈಕಲ್ ಮೂಲಕ ಕ್ರಮಿಸಿದ್ದು ದೇಶದ ಎಲ್ಲೆಡೆ ಸಂಚರಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ಪ್ರತಿ ಊರಿನ ಶಾಲಾ-ಕಾಲೇಜುಗಳಿಗೆ ಭೇಟಿ ಮಾಡಿ ಅವರಲ್ಲಿ ಪ್ರಕೃತಿ ಬಗ್ಗೆ ಅರಿವು ಮಾಹಿತಿ ಒದಗಿಸುವುದಾಗಿ ಹೇಳಿದರು. ಕುಶಾಲನಗರದ ಜಿತು ಪ್ರವೀಣ್, ವಸಂತ ಸಿಂಗ್, ನಕುಲ್ ಸಿಂಗ್, ಬಲವಂತ್ ಸಿಂಗ್ ಮತ್ತು ವೈಶಾಖ್ ಅವರುಗಳು ಸ್ವಾಗತಿಸಿ, ಬೀಳ್ಕೊಟ್ಟರು.
ದೇಶದಾದ್ಯಂತ ೨೬೦೦ ಕಿಲೋಮೀಟರ್ ಉದ್ದಕ್ಕೆ ಸೈಕಲ್ ಮೂಲಕ ತೆರಳುವ ಗುರಿ ಹೊಂದಲಾಗಿದೆ ಎಂದು ಪರಿಸರ ಪ್ರೇಮಿ ರಾಬಿನ್ ಸಿಂಗ್ ತಿಳಿಸಿದರು.