*ಗೋಣಿಕೊಪ್ಪ, ಡಿ. ೨೨: ಕರ್ನಾಟಕ ಸ್ಪೋರ್ಟ್ಸ್ ಅಸೋ ಷಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡ ರೇಷನ್ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಸ್ಪೋರ್ಟ್ಸ್ ಡ್ಯಾನ್ಸ್ನಲ್ಲಿ ಕೊಡಗಿನ ಇಶಾನಿ ಪಿ.ಎ. ಚಾಂಪಿ ಯನ್ ಅಗಿ ಹೊರಹೊಮ್ಮಿದ್ದಾರೆ.
ಮೈಸೂರಿನ ಶಾರದಾ ವಿಲಾಸ ಕಾಲೇಜು ಸಭಾಂಗಣದಲ್ಲಿ ಈ ಸ್ಪರ್ಧೆ ನಡೆಯಿತು. ಇಶಾನಿ ಪಿ.ಎ ವೀರಾಜಪೇಟೆಯ ಹೆಗ್ಗಳ ಗ್ರಾಮದ ಪಡಂಬೈಲು ಅನಿಲ್ ಮತ್ತು ತೀರ್ಥ ದಂಪತಿ ಪುತ್ರಿ. ಎರಡು ಚಿನ್ನದ ಪದಕದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಎಸ್.ಎಂ.ಎಸ್. ಅರಮೇರಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ವಿದುಷಿ ಹೇಮಾವತಿ ಕಾಂತರಾಜ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.