ಕರಿಕೆ, ಡಿ. ೨೨: ಕೊಡಗಿನ ಗಡಿ ಪ್ರದೇಶವಾದ ಕರಿಕೆ ಗ್ರಾಮದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ, ವತಿಯಿಂದ ನಡೆಯಲಿರುವ ಗಡಿ ಸಾಂಸ್ಕೃತಿಕ ಉತ್ಸವ ಕುರಿತ ಪೂರ್ವಭಾವಿ ಸಭೆ ಹಾಗೂ ವಿವಿಧ ಸಮಿತಿಗಳ ರಚನೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಗಡಿ ಉತ್ಸವದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮದಲ್ಲಿ ಅದ್ದೂರಿ ಗಡಿ ಸಾಂಸ್ಕೃತಿಕ ಉತ್ಸವವನ್ನು ಗ್ರಾಮದ ಉತ್ಸವವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸ್ವಾಗತ, ಆರ್ಥಿಕ, ಸಾಂಸ್ಕೃತಿಕ, ಮೆರವಣಿಗೆ, ಆಹಾರ ಸಮಿತಿಗಳನ್ನು ರಚಿಸಲಾಯಿತು. ಗ್ರಾಮದ ಮುಖ್ಯ ಪಟ್ಟಣವಾದ ಎಳ್ಳುಕೊಚ್ಚಿಯ ಮೈದಾನದಲ್ಲಿ ಒಂದು ದಿನದ ಕಾರ್ಯಕ್ರಮ ನಡೆಸುವ ಕುರಿತು ತೀರ್ಮಾನಿಸಲಾಯಿತು.

ನಂತರ ಮಾತನಾಡಿದ ಬಾಲಚಂದ್ರ ನಾಯರ್ ಕಾಟೂರು ನಾರಾಯಣ ನಂಬಿಯಾರ್ ಸ್ಮಾರಕ ಶಾಲೆಯಿಂದ ಕಾರ್ಯಕ್ರಮ ಮೈದಾನಕ್ಕೆ ಎರಡು ಕಿ.ಮೀ. ದೂರದವರೆಗೆ ವಿವಿಧ ಕಲಾ ತಂಡ ವಾದ್ಯ ಮೇಳಗಳೊಂದಿಗೆ ಸಾಂಸ್ಕೃತಿಕ ಮೆರವಣಿಗೆ ಆಗಮಿಸಿ ನಂತರ ಸಭಾ ಕಾರ್ಯಕ್ರಮ ನಡೆಸಿ ಸಂಜೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕ ರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವು ದೆಂದರು. ಅಲ್ಲದೆ ಗಡಿ ಉತ್ಸವದ ಜೊತೆಗೆ ಅದೇ ದಿವಸ ಗ್ರಾಮದ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶೈಕ್ಷಣಿಕ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ, ಶಾಸಕರು ಹಾಗೂ ಇತರೆ ಅಧಿಕಾರಿ ಗಳೊಂದಿಗೆ ಸಭೆ ನಡೆಸುವ ಕುರಿತು ಚಿಂತಿಸಲಾಗಿದೆ. ಕಾರ್ಯಕ್ರಮ ದಲ್ಲಿ ಪಂಚಾಯಿತಿ ಉಪಾದ್ಯಕ್ಷೆ ಕುದುಪಜೆ ಕಲ್ಪನಾ ಜಗದೀಶ್, ಅಭಿವೃದ್ಧಿ ಅಧಿಕಾರಿ ಪಿ.ಪಿ. ಗಣಪತಿ, ಸಹಕಾರ ಸಂಘದ ಅಧ್ಯಕ್ಷ ಬೇಕಲ್ ದೇವರಾಜ್, ಬೇಕಲ್ ರಮಾನಾಥ ಸೇರಿದಂತೆ ಪಂಚಾಯಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಗಳು, ಅಂಗನವಾಡಿ ಕಾರ್ಯಕರ್ತೆ ಯರು, ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ್ಷರು, ಗ್ರಾಮಸ್ಥರು ಹಾಜರಿದ್ದರು.