ಮಡಿಕೇರಿ, ಡಿ. ೨೨: ಕುಶಾಲನಗರ ಸಮೀಪದ ಹೆಬ್ಬಾಲೆ ಮತ್ತು ಹುದುಗೂರು ಗ್ರಾಮದ ಉಪವಲಯ ಅರಣ್ಯ ವ್ಯಾಪ್ತಿಯಲ್ಲಿ ಬರುವ ಹಾರಂಗಿ ಮುಖ್ಯ ನಾಲೆಯ ಎರಡು ಬದಿಯಲ್ಲಿ ಬೆಳೆದು ನಿಂತಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಕಾವೇರಿ ಪರಿಸರ ರಕ್ಷಣಾ ಬಳಗದ ಮೂಲಕ ಸಂಬAಧಿಸಿದ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿದೆ.

ಮುಖ್ಯ ನಾಲೆಯ ಎರಡು ಬದಿಯಲ್ಲಿ ಸುಮಾರು ೨೮೩ ಮರಗಳನ್ನು ತೆರವುಗೊಳಿಸುವ ಬಗ್ಗೆ ಹಾರಂಗಿ ಅಣೆಕಟ್ಟು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರಣ್ಯ ಇಲಾಖೆಗೆ ಕೋರಿರುವ ಹಿನ್ನೆಲೆಯಲ್ಲಿ ಕಾವೇರಿ ಪರಿಸರ ರಕ್ಷಣಾ ಬಳಗ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದು, ತೆರವಿಗೆ ಮುಂದಾದಲ್ಲಿ ಸುಪ್ರೀಂ ಕೋರ್ಟ್ ಹಸಿರು ಪೀಠದ ಆದೇಶದಂತೆ ಒಂದು ಮರ ತೆರವುಗೊಳಿಸುವ ಸಂದರ್ಭ ಪರ್ಯಾಯವಾಗಿ ೧೦ ಗಿಡಗಳನ್ನು ನೆಡುವುದು, ಅವುಗಳನ್ನು ಐದು ವರ್ಷಗಳ ಕಾಲ ನಿರ್ವಹಣೆ ಮಾಡುವುದು ಮತ್ತು ಆ ಬಗ್ಗೆ ಸಂಬAಧಿಸಿದ ಇಲಾಖೆಗೆ ಗಿಡ ಒಂದರ ಬಾಪ್ತು ೧೩೫ ರೂಗಳನ್ನು ಭದ್ರತಾ ಠೇವಣಿಯಾಗಿ ಇಟ್ಟುಕೊಳ್ಳುವುದು.

ಈ ಆದೇಶಕ್ಕೆ ಒಳಪಟ್ಟು ಮರಗಳನ್ನು ತೆರೆವುಗೊಳಿಸಲು ಕ್ರಮ ಕೈಗೊಳ್ಳಬಹುದು ಎಂದು ಪತ್ರ ಮೂಲಕ ಬಳಗದ ಸಂಚಾಲಕ ಚಂದ್ರಮೋಹನ್ ಎಂ.ಎನ್. ಆಕ್ಷೇಪಣೆಯಲ್ಲಿ ಕೋರಿದ್ದಾರೆ.