ಮಡಿಕೇರಿ, ಡಿ. ೧೬: ಇಡೀ ಪ್ರಪಂಚವನ್ನು ಬಾಧಿಸಿ ಸಾವು-ನೋವಿಗೆ ಕಾರಣವಾಗಿದ್ದ ಕೊರೊನಾ ಎಂಬ ಮಹಾಮಾರಿಯ ರೂಪಾಂತರಿ ಇದೀಗ ಮತ್ತೆ ಕರ್ನಾಟಕದ ನೆರೆರಾಜ್ಯ ಕೇರಳದಲ್ಲಿ ಕೆಲವರಲ್ಲಿ ಕಾಣಿಸಿಕೊಂಡಿದೆ. ಪರಿಣಾಮ ಕೊಡಗು ಜಿಲ್ಲೆಯಲ್ಲೂ ಆತಂಕ ಮನೆಮಾಡಿದ್ದು, ಅಗತ್ಯ ಕ್ರಮದ ಅನಿವಾರ್ಯತೆ ಎದುರಾಗಿದೆ. ಜೊತೆಗೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಕೇರಳದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಉಪತಳಿ ‘ಜೆಎನ್೧’ ಪತ್ತೆಯಾದ ಬೆನ್ನಲ್ಲೇ ಇತ್ತ ದೇಶದಲ್ಲಿನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಸಾಗಿದೆ. ಇದರೊಂದಿಗೆ ಕೇರಳ ರಾಜ್ಯದೊಂದಿಗೆ ಗಡಿಹಂಚಿಕೊAಡಿರುವ ಕೊಡಗಿನಲ್ಲಿಯೂ ಕಳವಳ ಮೂಡುತ್ತಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾರತದಾದ್ಯಂತ ೩೩೯ ಹೊಸ ಕೋವಿಡ್-೧೯ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆೆ. ಶನಿವಾರ ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಿಸಿದ ಅಂಕಿಅAಶಗಳ ಪ್ರಕಾರ, ಭಾರತದಲ್ಲಿ ೩೩೯ ಹೊಸ ಕೋವಿಡ್ -೧೯ ಸೋಂಕು ಪ್ರಕರಣಗಳು ವರದಿಯಾಗಿದ್ದು, ಆ ಮೂಲಕ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೪೯೨ ಕ್ಕೆ ಏರಿದೆ.

ರೂಪಾಂತರಿಯ ಆತಂಕ

ಕೋವಿಡ್ ರೂಪಾಂತರಿ ‘ಜೆಎನ್.೧’ ಎಂಬ ವೈರಾಣು ಕೇರಳ ಸೇರಿದಂತೆ ದೇಶದ ಕೆಲರಾಜ್ಯಗಳಲ್ಲಿ ಪತ್ತೆಯಾಗಿದ್ದು, ಮೂಗುಕಟ್ಟುವಿಕೆ, ಸದಾ ಸ್ರವಿಸುವ ಮೂಗು, ಅತಿಸಾರ, ತಲೆನೋವು, ಜ್ವರ, ಕೆಮ್ಮು, ಸುಸ್ತು ಈ ರೋಗದ ಲಕ್ಷಣಗಳಾಗಿವೆ.

ತಾ. ೮ ರಂದು ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್-೧ರ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ೭೯ ವರ್ಷದ ಮಹಿಳೆಯ ಮಾದರಿಯು

(ಮೊದಲ ಪುಟದಿಂದ) ನವೆಂಬರ್ ೧೮ ರಂದು ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಮಹಿಳೆ ‘ಇನ್‌ಫ್ಲುಯೆನ್ಸ’ ತರಹದ ಕಾಯಿಲೆಗಳ (ಐಎಲ್‌ಐ) ಸೌಮ್ಯ ಲಕ್ಷಣಗಳನ್ನು ಹೊಂದಿದ್ದರೂ ಇದೀಗ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ, ಸಿಂಗಾಪುರದಲ್ಲಿ ಜೆಎನ್.೧ ರೂಪಾಂತರಿ ವೈರಸ್ ಭಾರತೀಯ ಪ್ರಯಾಣಿಕರಲ್ಲಿ ಕಂಡುಬAದಿತ್ತು. ಓರ್ವ ವ್ಯಕ್ತಿ ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯವರಾಗಿದ್ದು, ಅಕ್ಟೋಬರ್ ೨೫ ರಂದು ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದರು. ತಿರುಚಿನಾಪಳ್ಳಿ ಜಿಲ್ಲೆ ಅಥವಾ ತಮಿಳುನಾಡಿನ ಇತರ ಸ್ಥಳಗಳಲ್ಲಿ ರೂಪಾಂತರಿ ಪತ್ತೆಯಾದ ನಂತರ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಕಂಡುಬAದಿಲ್ಲ ಎಂದು ಹೇಳಲಾಗಿದೆ. ಇದನ್ನು ಹೊರತುಪಡಿಸಿ ಭಾರತದಲ್ಲಿ ಯಾವುದೇ ರೀತಿಯ ಜೆಎನ್-೧ ರೂಪಾಂತರದ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ರೂಪಾಂತರಿ ವೈರಸ್ ಈ ಹಿಂದೆ ಯೂರೋಪ್ ಖಂಡದ ಲಕ್ಸೆಂಬರ್ಗ್ ದೇಶದಲ್ಲಿ ಮೊದಲು ಪತ್ತೆಯಾಗಿತ್ತು. ಬಳಿಕ ಹಲವಾರು ದೇಶಗಳಿಗೆ ಹರಡಿವೆ. ಈ ಜೆಎನ್-೧ ಪಿರೋಲಾ ರೂಪಾಂತರದ (ಃಂ.೨.೮೬) ವಂಶಸ್ಥ ರೂಪಾಂತರ ಎಂದು ತಜ್ಞರು ಅಂದಾಜಿಸಿದ್ದಾರೆ.

ಮುನ್ನೆಚ್ಚರಿಕೆ ವಹಿಸಲು ಸಲಹೆ : ದೇಶದಲ್ಲಿ ಕೋವಿಡ್ ಆವರಿಸಿದ ಪರಿ ಇಂದಿಗೂ ನೆನಪಾದರೆ ಬೆಚ್ಚಿ ಬೀಳುವ ಭಯದ ಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ಅಗತ್ಯ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆಗೆ ಕರೆ ನೀಡಿರುವ ಡಿಹೆಚ್‌ಓ ಸತೀಶ್, ರೋಗದ ಲಕ್ಷಣ ಕಂಡುಬAದರೆ ಪರೀಕ್ಷಿಸಿಕೊಳ್ಳುವಂತೆ ತಿಳಿಸಿದ್ದಾರೆ. ಟಿ ಹೆಚ್.ಜೆ. ರಾಕೇಶ್