*ಗೋಣಿಕೊಪ್ಪಲು, ಡಿ. ೧೭: ಮಾಯಮುಡಿ ಸಮೀಪದ ಧನುಗಾಲ ಗ್ರಾಮದಲ್ಲಿರುವ ಶ್ರೀ ಮುರುಡೇಶ್ವರ ಮತ್ತು ಶ್ರೀ ಬಸವೇಶ್ವರ ದೇವಸ್ಥಾನಗಳ ಸಮಿತಿಯ ವತಿಯಿಂದ ತಾ.೧೮ರಂದು (ಇಂದು) ಬೆಳಿಗ್ಗೆ ೯-೩೦ ಗಂಟೆಯಿAದ ಶ್ರೀ ಮುರುಡೇಶ್ವರ ಮತ್ತು ಶ್ರೀ ಬಸವೇಶ್ವರ ದೇವಸ್ಥಾನಗಳಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಷಷ್ಟಿ ಉತ್ಸವ ಜರುಗಲಿದೆ. ಇದರ ಪ್ರಯುಕ್ತ ದೇವರಿಗೆ ಹರಕೆ ಒಪ್ಪಿಸುವುದು, ತಲೆಮುಡಿ ನೀಡುವುದು ಹಾಗೂ ಭಕ್ತಾದಿಗಳಿಗೆ ಸಾಮೂಹಿಕ ಅನ್ನ ಸಂತರ್ಪಣೆ ಇರುತ್ತದೆ ಎಂದು ದೇವಸ್ಥಾನಗಳ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.