ಮಡಿಕೇರಿ, ಡಿ. ೧೬: ಈಗಿನ ಇಂಟರ್ನೆಟ್ ಯುಗದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರೂ ಮೊಬೈಲ್ ನಲ್ಲಿ ಮುಳುಗಿ ರುತ್ತಾರೆ., ಮಕ್ಕಳಂತೂ ಪುಸ್ತಕ ತೆರೆದು ಓದಬೇಕೆಂದರೆ ಅಪ್ಪ-ಅಮ್ಮನ ಅರಚಾಟ, ಬೈಗುಳ ಪಕ್ಕದ ಮನೆಯವರೆಗೂ ತಲಪಿರುತ್ತೆ., ಸಾಹಿತ್ಯ-ಪತ್ರಿಕೆ ಓದುವವರನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ., ಇಂತಹವರ ನಡುವೆ ಈ ಪುಟ್ಟ ಪೋರ ಓದಲು ಅರಿಯದಿದ್ದರೂ ಮಹಾ ಜ್ಞಾನಿಯಂತೆ ಪತ್ರಿಕೆ ಹಿಡಿಕೊಂಡು ಕಣ್ಣಾಡಿಸುತ್ತಾನೆ..!
ಈತ ಒಂದೂವರೆ ವರ್ಷದ ಪುಟಾಣಿ ಯಾನ್ ದೇವಯ್ಯ.., ಪೋರಾಡ್ ಗ್ರಾಮದ ಮೀದೇರಿರ ಸೊಮಣ್ಣ ಹಾಗೂ ರಕ್ಷಿತಾ ಸೋಮಣ್ಣ ಅವರ ಪುತ್ರ. ಈತನ ತಂದೆ ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಬರುವಾಗ ಪೇಪರ್ ತರುವದನ್ನೇ ಕಾಯುತ್ತಿರುತ್ತಾನೆ. ಬಂದೊಡನೆ ಶಕ್ತಿ ಪತ್ರಿಕೆ ಹಿಡಿದು ಎಲ್ಲಾ ಬಲ್ಲವನಂತೆ ಓದಲು ಕೂರುತ್ತಾನೆ. ಕೆಲ ಹೊತ್ತು ಹಾಗೇ ಪುಟಗಳಲ್ಲಿ ಕಣ್ಣಾಯಿಸಿ ಸತಾಯಿಸಿದ ಮೇಲೆ ಬೇರೆ ಯಾರಿಗೂ ಕೊಡದೆ ಅಜ್ಜಿಗೆ ಕೊಡುತ್ತಾನೆ. ಇದು ಅವನ ದಿನ ನಿತ್ಯದ ಅಭ್ಯಾಸ. ಪುಟ್ಟ ಅಭಿಮಾನಿಯ ಭವಿಷ್ಯಕ್ಕೆ ‘‘ಶಕ್ತಿ’’ ಬಳಗದ ಶುಭ ಹಾರೈಕೆಗಳು. ? ಸಂತೋಷ್