ಮಡಿಕೇರಿ, ಡಿ. ೧೭: ನಗರದ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ೩೩ನೇ ವಾರ್ಷಿಕೋತ್ಸವ ಪ್ರಯುಕ್ತ ಆಂಜನೇಯ ದೇವಾಲಯದಲ್ಲಿ ಅಖಂಡ ಏಕಾಹ ಭಜನೆ ನಡೆಯಿತು. ಮಡಿಕೇರಿ ರೋಟರಿ ಕ್ಲಬ್‌ನ ಲಲಿತಾ ರಾಘವನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಮಾಂಜನೇಯ ಭಜನಾ ಮಂಡಳಿಯ ಪ್ರಮುಖರಾದ ಮಹೇಶ್ ಕುಮಾರ್ ಮತ್ತಿತರರು ಹಾಜರಿದ್ದರು. ಬಳಿಕ ಹದಿನೈದು ತಂಡಗಳಿAದ ನಿರಂತರ ಭಜನೆ ನಡೆಯಿತು. ಬೆಳಗ್ಗಿನಿಂದ ಸಂಜೆಯವರೆಗೂ ನಡೆದ ಭಜನೆಯಲ್ಲಿ ಮಡಿಕೇರಿಯ ಶ್ರೀ ರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಶ್ರೀ ಸತ್ಯಸಾಯಿ ಭಜನಾ ಸಮಿತಿ, ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿ, ಕಗ್ಗೋಡ್ಲುವಿನ ಸನಾತನ ಭಜನಾ ಮಂಡಳಿ, ಮಡಿಕೇರಿಯ ವಿಜಯವಿನಾಯಕ ಭಜನಾ ಮಂಡಳಿ, ವೆಂಕಟೇಶ್ವರ ಕಲಾ ತಂಡ, ಮೋದೂರಿನ ಮೇಘಾಭಟ್ ತಂಡ, ೨ನೇ ಮೊಣ್ಣಂಗೇರಿಯ ರಾಮ ಭಜನಾ ಸೇವಾ ಸಮಿತಿ, ಭೂತನಕಾಡಿನ ಓಂ ಶ್ರೀ ಭಜನಾ ಮಂಡಳಿ, ತೊಂಭತ್ತುಮನೆಯ ವಿನಾಯಕ ಸೇವಾ ಸಮಿತಿ, ಮಡಿಕೇರಿಯ ಕೋದಂಡರಾಮ ಭಜನಾ ಮಂಡಳಿ, ದೇವರಕೊಲ್ಲಿಯ ಚಾಮುಂಡೇಶ್ವರಿ ಭಜನಾ ಮಂಡಳಿ, ಮಡಿಕೇರಿಯ ಶೃತಿಲಯ ಭಜನಾ ಮಂಡಳಿ, ಇಸ್ಕಾನ್ ತಂಡ, ರಾಮಾಂಜನೇಯ ಭಜನಾ ಮಂಡಳಿ ತಂಡಗಳು ಪಾಲ್ಗೊಂಡಿದ್ದವು. ಸಂಜೆ ಹನುಮಾನ್ ಚಾಲೀಸ, ಮಂಗಳಾಚರಣೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನೆರವೇರಿತು. ಸಮಾರೋಪ ಸಮಾರಂಭದಲ್ಲಿ ಯೂನಿಯನ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಡಿ.ಹೆಚ್. ತಮ್ಮಪ್ಪ ಹಿತವಚನ ನೀಡಿದರು.