ಮುಳ್ಳೂರು, ಡಿ. ೧೫: ಸಮೀಪದ ಶನಿವಾರಸಂತೆ ಮಧ್ಯಪೇಟೆಯಲ್ಲಿರುವ ಶ್ರೀ ಪಾರ್ವತಿ ಚಂದ್ರಮೌಳೇಶ್ವರ ಗಣಪತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಲಕ್ಷ ದೀಪೋತ್ಸವ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಲಕ್ಷ ದೀಪೋತ್ಸವ ಪ್ರಯುಕ್ತ ದೇವಸ್ಥಾನದ ಹೊರ ಭಾಗದಲ್ಲಿ ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು. ದೇವಸ್ಥಾನದಲ್ಲಿ ಸಾವಿರಾರು ಹಣತೆಯನ್ನು ಹಚ್ಚಲಾಗಿತ್ತು. ಕಾರ್ತಿಕ ಮಾಸದ ಪ್ರಯುಕ್ತ ಅರ್ಚಕರು ವಿಶೇಷ ಪೂಜಾ ವಿಧಿವಿಧಾನ ನೆರವೇರಿಸಿದರು. ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು.