ಸಿದ್ದಾಪುರ, ಡಿ. ೧೫: ಸಿದ್ದಾಪುರದ ಗುಹ್ಯ ಗ್ರಾಮದ ಹೈಸ್ಕೂಲ್ ಪೈಸಾರಿಯ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ೪೬ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಮತ್ತು ೧೬ನೇ ವರ್ಷದ ರಕ್ತೇಶ್ವರಿ ದೇವಿಯ ಮಹಾಗುರುಧಿ ಪೂಜೆ ತಾ. ೧೭ ಮತ್ತು ೧೮ ರಂದು ನಡೆಯಲಿದೆ. ತಾ. ೧೮ ರಂದು ಬೆಳಿಗ್ಗೆ ೪.೩೦ ಕ್ಕೆ ಸ್ವಾಮಿಯ ಮಹಾಪೂಜೆ ೫ ಗಂಟೆಗೆ ನಿರ್ಮಾಲ್ಯ ಪೂಜೆ, ೬.೦೦ ಕ್ಕೆ ಅಭಿಷೇಕ, ೭ ಕ್ಕೆ ಅಲಂಕಾರ ಪೂಜೆ ೮.೦೦ ಕ್ಕೆ ಮಹಾ ನೈವೇದ್ಯ ಪೂಜೆ, ೯.೩೦ಕ್ಕೆ ಕಾವಡಿ ಮತ್ತು ನಾಗಪೂಜೆ ೧೦.೩೦ ಕ್ಕೆ ಮಹಾಮಂಗಳಾರತಿ, ೧೧.೧೫ ಕ್ಕೆ ಕಾವಡಿ ಕರಗ ಮತ್ತು ಹಾಲು ಚೊಂಬು, ೧೨.೦೦ ಕ್ಕೆ ನೈವೇದ್ಯ ಪ್ರಸಾದ ವಿತರಣೆ ಮಧ್ಯಾಹ್ನ ೧.೩೦ಕ್ಕೆ ಅನ್ನ ಸಂತರ್ಪಣೆ, ೨.೦೦ ಗಂಟೆಗೆ ದೇವಿಪೂಜೆ, ೨.೩೦ಕ್ಕೆ ಮಹಾಗರುಧಿ ಪೂಜೆ ನಡೆಯಲಿದೆಂದು ಶ್ರೀ ಸುಬ್ರಹ್ಮಣ್ಯ ದೇವಾಲಯದ ಪ್ರಮುಖರಾದ ಕೆ. ಪ್ರೇಮರಾಜ್ ಹಾಗೂ ಕಾರ್ತಿಕ್ ತಿಳಿಸಿದ್ದಾರೆ.