ಕೂಡಿಗೆ, ಡಿ. ೧೫: ಹೆಬ್ಬಾಲೆ ಮಾದರಿ ಯುವಕ ಸಂಘ, ಬಸವೇಶ್ವರ ಯುವಕರ ಬಳಗ ಇವರ ಆಶ್ರಯದಲ್ಲಿ ಶ್ರೀ ಬನಶಂಕರಿ ಅಮ್ಮನವರ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಯಲ್ಲಿ ಪಿರಿಯಾ ಪಟ್ಟಣ ತಾಲೂಕಿನ ಚಪ್ಪರದಳ್ಳಿಯ ಭೀಮ ಬೌಯ ಎತ್ತಿನ ಜೋಡಿ ಪ್ರಥಮ ಸ್ಥಾನ ಪಡೆದು, ೮ ಗ್ರಾಂ ಚಿನ್ನ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನವನ್ನು ಕಡೂರಿನ ಆರ್. ಎಕ್ಸ್. ದೇವಾ ಬೆಟ್ಟಪ್ಪ ಎತ್ತುಗಳು ಗಳಿಸಿ ೬ ಗ್ರಾಂ ಚಿನ್ನ ಮತ್ತು ಟ್ರೋಫಿಯನ್ನು ಮಾಲೀಕರು ಪಡೆದುಕೊಂಡರು. ತೃತೀಯ ಸ್ಥಾನವನ್ನು ಪಾಪಣಿಕರ ಧರ್ಮಗೂಲಿ ಅವರ ಎತ್ತುಗಳ ಮಾಲೀಕರು ೪ ಗ್ರಾಂ. ಚಿನ್ನವನ್ನು ಪಡೆದರು.
೪ನೇ ಸ್ಥಾನವನ್ನು ದೇವಾಗೂಳಿ ಗಜಕೃಷ್ಣ ಎತ್ತುಗಳ ಮಾಲೀಕರು ೨ ಗ್ರಾಂ ಚಿನ್ನವನ್ನು ಪಡೆದರು. ಸಮಾಧಾನಕರ ಬಹುಮಾನವನ್ನು ಪ್ರಮೋದ ಕರ ದೌಲಾತ್, ವಜ್ರಸುನಾಮಿ, ಶಿವವಂಶಿ, ಭೀಮ ಜೀವ ಎತ್ತುಗಳ ಮಾಲೀಕರು ಟ್ರೋಪಿ üಯೊಂದಿಗೆ ಪಡೆದರು.
ಜಾತ್ರೋತ್ಸವದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಬಹುಮಾನವನ್ನು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ವಿತರಿಸಿದರು. ಈ ಸಂದರ್ಭ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಹೆಚ್. ಬಿ. ಜಗದೀಶ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣ್ ಕಮಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್.ಆರ್. ಶ್ರೀನಿವಾಸ್, ಕೆ.ಪಿ.ಸಿ.ಸಿ. ಸದಸ್ಯ ನಟೇಶ್ ಗೌಡ, ಪ್ರೌಢಶಾಲಾ ಶಿಕ್ಷಕ ಕುಮಾರ್ ಸೇರಿದಂತೆ ಸಮಿತಿಯ ನಿರ್ದೇಶಕರು, ಸದಸ್ಯರು ಹಾಜರಿದ್ದರು.