ಕೂಡಿಗೆ, ಡಿ. ೧೫: ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಇಂಧನ ಉಳಿತಾಯ ಸಪ್ತಾಹ ಆಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಶಾಲಾ ಮುಖ್ಯೋಪಾ ಧ್ಯಾಯಿನಿ ವೀಣಾ ವಿಜಯ ನೆರವೇರಿಸಿ, ನಂತರ ಮಾತಾಡುತ್ತಾ ಇಂಧನ ಪರಿವರ್ತನೆ ಮತ್ತು ಹೊಸ ಇಂಧನ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಭಾರತ ವಿಶ್ವದ ಪ್ರಬಲ ಧ್ವನಿಗಳಲ್ಲಿ ಒಂದಾಗಿದೆ. ವಿಕಸಿತ ಭಾರತವು ಅಭಿವೃದ್ಧಿಯ ಸಂಕಲ್ಪದೊAದಿಗೆ ಭಾರತದಲ್ಲಿ ಅಭೂತಪೂರ್ವ ಸಾಧ್ಯತೆಗಳು ಹೊರ ಹೊಮ್ಮುತ್ತಿವೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಸಿಸ್ಟರ್ ರೇಖಾ ಫರ್ನಾಂಡಿಸ್ ಮಾತಾಡುತ್ತಾ, ದೇಶೀಯ ಅನ್ವೇಷಣೆ ಮತ್ತು ಉತ್ಪಾದನೆಗೆ ಭಾರತವು ಹಚ್ಚಿನ ಮಹತ್ವವನ್ನು ನೀಡಿದೆ. ಅಲ್ಲದೆ ಭಾರತದಲ್ಲಿ ಇಂಧನ ವಿಷಯವಾಗಿ ನಡೆಯುತ್ತಿರುವ ಅಭಿವೃದ್ಧಿ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಇಂಧನ ಉಳಿತಾಯ ಕುರಿತು ಮಾತನಾಡಿದರು. ಈ ಸಂದರ್ಭ ಶಾಲಾ ಶಿಕ್ಷಕರ ವೃಂದ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.