*ಗೋಣಿಕೊಪ್ಪಲು, ಡಿ. ೧೩: ಕರ್ನಾಟಕ ಸ್ಪೋರ್ಟ್ ಡ್ಯಾನ್ಸ್ ಅಸೋಸಿಯೇಷನ್ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಮೈಸೂರಿನ ಶಾರದಾ ವಿಲಾಸ ಕಾಲೇಜು ಸಭಾಂಗಣದಲ್ಲಿ ನಡೆದ ಮೈಸೂರು ವಲಯ ಸ್ಪೋರ್ಟ್ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಕೆ.ಎನ್. ದೀಕ್ಷಾ, ಶಾಸ್ತಿçÃಯ ನೃತ್ಯ ಹಾಗೂ ಜಾನಪದ ನೃತ್ಯ ವಿಭಾಗದಲ್ಲಿ ಭಾಗವಹಿಸಿ ಮೂರು ಚಿನ್ನದ ಪದಕಗಳನ್ನು ಪಡೆದುಕೊಳ್ಳುವ ಮೂಲಕ ರಾಜ್ಯಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಅರಮೇರಿ ಎಸ್.ಎಸ್.ಎಂ.ಎಸ್. ವಿದ್ಯಾಸಂಸ್ಥೆಯಲ್ಲಿ ೨ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈಕೆ ಬಿಟ್ಟಂಗಾಲ ಗ್ರಾಮದ ಕೆ.ಎ. ನವೀನ್ ಕುಮಾರ್ ಮತ್ತು ಎ.ಎಸ್. ನಿತ್ಯ ದಂಪತಿಯ ಪುತ್ರಿ. ಈಕೆ ವೀರಾಜಪೇಟೆಯ ವಿದುಷಿ ಹೇಮಾವತಿ ಕಾಂತರಾಜ್ ಅವರ ನಾಟ್ಯಂಜಲಿ ನೃತ್ಯ ಮತ್ತು ಸಂಗೀತ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.