ವೀರಾಜಪೇಟೆ, ಡಿ. ೧೩: ಸಮಾಜದಲ್ಲಿ ತನ್ನ ಮನೆ, ತನ್ನ ಕುಟುಂಬವೆAದು ಬಾಳುವವರು ಹಲವರಿದ್ದಾರೆ. ಸಮಾಜಕ್ಕಾಗಿ ಬಾಳುವವರು ಕೆಲವು ಮಂದಿ ಮಾತ್ರ. ಸಮಾಜಕ್ಕಾಗಿ ದುಡಿಯುವ ವ್ಯಕ್ತಿ ಉತ್ತಮ ಸಮಾಜ ರೂಪಿಸಬಲ್ಲ ಎಂದು ನಿವೃತ್ತ ಸೇನಾಧಿಕಾರಿ ಶೌರ್ಯ ಪ್ರಶಸ್ತಿ ವಿಜೇತ ಚೆಂಬAಡ ಎಂ. ತಿಮ್ಮಣ್ಣ ಹೇಳಿದರು.

ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸಿ ಮಾತನಾಡಿದ ನಿವೃತ್ತ ಕರ್ನಲ್ ಸಿ.ಎಂ. ತಿಮ್ಮಣ್ಣ ಅವರು, ನಾವು ಮಾಡುವ ಸೇವೆಗಳಲ್ಲಿ ಎರಡು ವಿಧಗಳಿವೆ. ಒಂದು ಸಂಭಾವನೆ ಪಡೆದು ಸೇವೆ ಮಾಡುವುದು. ಮತ್ತೊಂದು ಯಾವುದೇ ಪ್ರತಿಫಲ ಪಡೆಯದೆ ಮಾಡುವ ಸೇವೆ. ರಾಷ್ಟಿçÃಯ ಸೇವಾ ಯೋಜನೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು. ಶಿಬಿರದಲ್ಲಿ ಭಾಗವಹಿಸುವುದರಿಂದ ಸಮಾಜಮುಖಿಯಾದ ಸೇವೆ, ವ್ಯಕ್ತಿತ್ವ ನಿರ್ಮಾಣ, ನಾಯಕತ್ವದ ಗುಣಗಳನ್ನು ಕಲಿಯುವಂತಾಗುತ್ತದೆ. ಎನ್.ಎಸ್. ಎಸ್. ಮತ್ತು ಎನ್.ಸಿ.ಸಿ. ಪೂರೈಸಿದ ವಿದ್ಯಾರ್ಥಿಗಳಿಗೆ ಸೇನೆಯಲ್ಲಿ ವಿಫುಲ ಅವಕಾಶಗಳಿವೆ. ಆರ್ಥಿಕತೆಯಲ್ಲಿ ಐದು ಮುಂದುವರೆದ ದೇಶಗಳಲ್ಲಿ ಭಾರತವು ಒಂದು. ಮುಂದುವರೆದ ದೇಶಗಳ ಸ್ಥಾನದಲ್ಲಿ ಭಾರತವು ಪ್ರಬಲ ಪೈಪೋಟಿಯನ್ನು ನೀಡುತ್ತಾ ಬರುತ್ತಿದೆ. ಸೇನೆ, ವಿಜ್ಞಾನ, ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಭಾರತವು ಉನ್ನತ್ತಿಕರಣ ವಾಗುತ್ತಿದೆ. ಸೇವಾ ಯೋಜನೆಯು ನಿಗದಿತ ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತವಾಗಿ ಮುಂದುವರೆದಲ್ಲಿ ಉತ್ತಮ ಸಮಾಜ, ದೇಶ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕಾವೇರಿ ಎಜುಕೇಶನ್ ಸೂಸೈಟಿ ನಿರ್ದೇಶಕ ಪಿ.ಟಿ. ಸುಭಾಷ್ ಸುಬ್ಬಯ್ಯ ಅವರು, ರಾಷ್ಟಿçÃಯ ಸೇವಾ ಯೋಜನೆ ಭಾಗವಾದ ಪ್ರತಿಯೊಬ್ಬರು ಉತ್ತಮ ಸೇವಕರಾಗಿ ಮುಂದುವರೆಯುತ್ತಾರೆ. ಯೋಜನೆಯ ಶಿಬಿರದಲ್ಲಿ ಉತ್ತಮ ನಾಯಕತ್ವದ ಗುಣಗಳನ್ನು ಕಲಿಯ ಬಹುದಾಗಿದೆ. ಎನ್.ಎಸ್.ಎಸ್. ಪೂರ್ಣಗೊಳಿಸಿ ಬರುವ ವಿದ್ಯಾರ್ಥಿಯು ತುರ್ತು ಸಂದರ್ಭ ಮತ್ತು ಇತರ ಸಮಾಜಮುಖಿ ಕೆಲಸಗಳಿಗೆ ಎಂದಿಗೂ ಬೆನ್ನು ತೋರದೆ ಮುನ್ನುಗ್ಗುತ್ತಾನೆ. ವಿದ್ಯಾರ್ಥಿಯು ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮುತ್ತಾನೆ ಎಂದು ಹೇಳಿದರು. ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎ.ಎಂ. ಡಯಾನ ಸೋಮಯ್ಯ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ ಎನ್.ಎಸ್.ಎಸ್. ವೇದಿಕೆಯಾಗಿದೆ. ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜಮುಖಿ ಕಾರ್ಯಗಳಿಗೆ ಬದ್ಧರಾಗುತ್ತಾನೆ. ಶಿಬಿರದಲ್ಲಿ ಕಲಿಯುವ ವಿಷಯಗಳನ್ನು ಚಾಚುತಪ್ಪದೆ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕಾವೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಗಾಯತ್ರಿ ಕೆ.ಪಿ. ಸ್ವಾಗತಿಸಿ, ವಿದ್ಯಾರ್ಥಿಗಳಾದ ಹಸೀನಾ ಮತ್ತು ಶ್ರೀಶ್ಮ ನಿರೂಪಿಸಿದರು. ಪದವಿಪೂರ್ವ ಇತಿಹಾಸ ಉಪನ್ಯಾಸಕಿ ಅನುಪಮ ಸಿ.ಪಿ. ವಂದಿಸಿದರು. ಕಾವೇರಿ ಪದವಿ ಪೂರ್ವ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯ ಶಿಬಿರಾ ರ್ಥಿಗಳು, ಉಪನ್ಯಾಸಕರು, ಕಾರ್ಯಕ್ರಮದಲ್ಲಿ ಹಾಜರಿದ್ದರು.