ಮುಳ್ಳೂರು, ಡಿ. ೧೩: ಸಮೀಪದ ವಳಗುಂದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು. ದಿನದ ಮಹತ್ವ ಕುರಿತು ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಕೆ.ಪಿ. ಪಾರ್ವತಿ ಮಾತನಾಡಿದರು. ಶೈಲಾ ದಿನೇಶ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ದೊಡ್ಡಮಳ್ತೆ ಗ್ರಾ.ಪಂ. ಸದಸ್ಯ ಅನುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಡಿಓ ಶ್ರೀನಿವಾಸ್, ಶಾಲಾ ಶಿಕ್ಷಕ ರಮೇಶ್, ಪ್ರಮುಖರಾದ ಸ್ಮಿತಾ ದಿನೇಶ್, ಇಂಚರ ಸತೀಶ್, ದಿವ್ಯಶ್ರೀ ಶ್ರೀನಿವಾಸ್, ಯೋಗಿತಾ ಪಾಲಾಕ್ಷ, ದಿವ್ಯಶ್ರೀ ಗಣೇಶ್, ಅಂಗನವಾಡಿ ಶಿಕ್ಷಕಿ ಪಲಿತ ರಮೇಶ್, ಸೋಜ್ಞ ಬಾಲ ವಿಕಾಸ ಸಮಿತಿ ಸದಸ್ಯರು ಹಾಜರಿದ್ದರು. ಮಕ್ಕಳ ದಿನದ ಅಂಗವಾಗಿ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.