ಕುಶಾಲನಗರ, ಡಿ. ೧೩: ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜಾ ಉತ್ಸವ ಕಾರ್ಯಕ್ರಮಗಳು ತಾ. ೧೪ ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ತಾ. ೧೬ ರಂದು ಅಯ್ಯಪ್ಪ ಸ್ವಾಮಿ ಮಂಡಲ ಪೂಜಾ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಣಪತಿ ತಿಳಿಸಿದ್ದಾರೆ.

ತಾ. ೧೪ ರಂದು ಬೆಳಿಗ್ಗೆ ಗಣಪತಿ ಹೋಮ ನಂತರ ದೇವಾಲಯದಲ್ಲಿ ಧ್ವಜಾರೋಹಣ, ೭ ಗಂಟೆಗೆ ಸ್ವಾಮಿಗೆ ಉಯ್ಯಾಲೆ ಸೇವೆ ನಡೆಯಲಿದೆ. ತಾ. ೧೫ ರಂದು ಬೆಳಿಗ್ಗೆ ನವಗ್ರಹ ಹೋಮ, ತಾ. ೧೬ ರಂದು ಬೆಳಿಗ್ಗೆ ಶಾಸ್ತç ಪೂಜೆ ಅಭಿಷೇಕ ನವಕ ಹೋಮ ಪೂಜೆ ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

೩ ಗಂಟೆಗೆ ಪಾಲ್ ಕೊಂಬು ನಂತರ ೬ ಗಂಟೆಯಿAದ ದೇವಾಲಯದಿಂದ ಹೊರಟು ಊರಿನ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ನಡೆಯಲಿದೆ. ರಾತ್ರಿ ೮ ಗಂಟೆಯಿAದ ಭಜನೆ ನಂತರ ಬೆಳಗ್ಗಿನ ಜಾವ ೩ ಗಂಟೆಗೆ ಅಗ್ನಿಕೊಂಡ ಪ್ರವೇಶ ನೆರವೇರಲಿದೆ.