ಮಡಿಕೇರಿ, ಡಿ. ೧೩: ಸಂಪೂರ್ಣ ಸ್ವಾಸ್ಥö್ಯ ಯೋಗ ಕೇಂದ್ರದ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಅಂಗವಾಗಿ ಜನವರಿ ೧೪ರಂದು ರಾಜ್ಯಮಟ್ಟದ ಯೋಗಾಸನ ಹಾಗೂ ಸಮೂಹ ಸೂರ್ಯ ನಮಸ್ಕಾರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕೇಂದ್ರದ ವ್ಯವಸ್ಥಾಪಕರಾದ ಸೋಮಯ್ಯ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಗೋಣಿಕೊಪ್ಪ ಕೈಕೇರಿಯ ಭಗವತಿ ದೇವಾಲಯದಲ್ಲಿ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೩ರವರೆಗೆ ಸ್ಪರ್ಧೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೀನಿಯರ್, ಜೂನಿಯರ್ ಮತ್ತು ಸಾರ್ವಜನಿಕರಿಗೆ ಮೂರು ವಿಭಾಗಗಳಲ್ಲಿ ಸಮೂಹ ಸೂರ್ಯ ನಮಸ್ಕಾರ ಸ್ಪರ್ಧೆ ನಡೆಯಲಿದೆ. ೮ ರಿಂದ ೧೫, ೧೬ ರಿಂದ ೩೫, ೩೬ ರಿಂದ ೫೦, ೫೦ ರಿಂದ ೬೫ ವರ್ಷದೊಳಗಿನ ಪುರುಷರು, ಮಹಿಳೆಯರಿಗೆ ವೈಯಕ್ತಿಕ ಆಸನಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಮೊದಲ ಬಹುಮಾನವಾಗಿ ರೂ. ೧೫ ಸಾವಿರ, ದ್ವಿತೀಯ ಬಹುಮಾನವಾಗಿ ರೂ. ೧೦ ಸಾವಿರ, ತೃತೀಯ ಬಹುಮಾನವಾಗಿ ರೂ. ೫ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ಹೆಸರು ನೋಂದಾವಣಿಗೆ ತಾ.೨೫ ಕೊನೆ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗೆ ೭೦೦೯೮೬೫೧೧೯ ಅನ್ನು ಸಂಪರ್ಕಿಸಬಹುದು ಎಂದು ಸೋಮಯ್ಯ ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಕೇಂದ್ರದ ಸದಸ್ಯರಾದ ಅಚ್ಚಲ್ಪಾಡಿ ತಿಮ್ಮಯ್ಯ, ಚರಣ್, ಚರಣ್‌ಕುಮಾರ್, ರಾಜು ಉಪಸ್ಥಿತರಿದ್ದರು.