ಮಡಿಕೇರಿ, ಡಿ. ೧೩: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದಲ್ಲಿ “ದಕ್ಷ ನಾಯಕತ್ವ ಮತ್ತು ಸಮರ್ಥ ವೃತ್ತಿಪರತೆಯಿಂದ ಮಾತ್ರವೇ ಸಹಕಾರ ಕ್ಷೇತ್ರ ಸಧÀÈಡಗೊಳ್ಳಲು ಸಾಧ್ಯ” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಅಂತರ್ ತರಬೇತಿ ಕೇಂದ್ರಗಳ ರೆಗ್ಯೂಲರ್ ಡಿಸಿಎಂ ಅಭ್ಯರ್ಥಿಗಳಿಗೆ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು.
ಈ ಚರ್ಚಾ ಸ್ಪರ್ಧೆಯಲ್ಲಿ ನಗರದ ಸಹಕಾರ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಸಹನಾ ಎನ್.ಪಿ ಹಾಗೂ ಜಸ್ಮಿತಾ ಪಿ.ಜಿ ಭಾಗವಹಿಸಿದ್ದರು. ಈ ಪೈಕಿ ಜಸ್ಮಿತಾಗೆ ದ್ವಿತೀಯ ಬಹುಮಾನ ಲಭಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಡಾ.ರೇಣುಕಾ ಆರ್.ಎಸ್. ಹರ್ಷ ತಿಳಿಸಿದ್ದಾರೆ.