ನಾಪೋಕ್ಲು, ಡಿ. ೧೩: ಮೈಸೂರಿನಲ್ಲಿ ಒಕಿನೊವ ಷೋರಿನ್-ರಿಯೋ ಕರಾಟೆ ಡೂ ಆಫ್ ಇಂಡಿಯಾ ಮತ್ತು ಇಂಟರ್ ನ್ಯಾಷನಲ್ ಮಬೂನಿ-ಹ ಶಿಟೊ-ರಿಯೋ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ ಎಕ್ಸೆಲ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಅಂಜನ್ ಕೆ.ಪಿ. ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾನೆ.
ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ಮತ್ತು ಧೀರಜ್ ಕಾರ್ಯಪ್ಪರಿಂದ ತರಬೇತಿ ಪಡೆಯುತ್ತಿದ್ದು, ಕುಟ್ಟಂಜೆಟ್ಟಿರ ಪೂಣಚ್ಚ ಮತ್ತು ಲೀಲಾವತಿ ದಂಪತಿ ಪುತ್ರ.