ಸಿದ್ದಾಪುರ, ಡಿ. ೧೩: ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಫಿ ತೋಟಗಳನ್ನು ನಿವೇಶನವಾಗಿ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಇದನ್ನು ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಒತ್ತಾಯಿಸಿದ ಪ್ರಸಂಗ ಎದುರಾಯಿತು.
ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಗ್ರಾಮಸ್ಥ ಸೌಕತ್ ಅಲಿ ಮಾತನಾಡಿ, ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಯೊAದು ನೂರಾರು ಎಕರೆ ಕಾಫಿ ತೋಟವನ್ನು ಬೇರೆಯೊಂದು ಖಾಸಗಿ ಸಂಸ್ಥೆಗೆöಇತ್ತೀಚೆಗೆ ಮಾರಾಟ ಮಾಡಿದೆ. ಇದನ್ನು ಖಾಸಗಿ ವ್ಯಕ್ತಿಗಳು ಖರೀದಿಸಿ ತೋಟವನ್ನು ನಿವೇಶನವಾಗಿ ಹಂಚಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಬಡಾವಣೆ ರೂಪಿಸಲು ಯತ್ನಿಸುತ್ತಿದ್ದಾರೆ ಎಂದರು. ಅಲ್ಲದೆ ನಿವೇಶನ ಖರೀದಿಸುವವರಿಗೆ ಗ್ರಾಮ ಪಂಚಾಯಿತಿ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಭರವಸೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳನ್ನು ನಿವೇಶನವಾಗಿ ಮಾಡಿ ಆ ಜಾಗಕ್ಕೆ ನಮೂನೆ ೯-೧೧ ದಾಖಲೆಗಳನ್ನು ಪಂಚಾಯಿತಿಗಳಿAದ ನೀಡಬಾರದೆಂದು ಸೌಕತ್ ಆಲಿ ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಹೆಚ್.ಬಿ. ರಮೇಶ್ ಮಾತನಾಡಿ, ಈ ಹಿಂದೆ ದೊಡ್ಡ ಸಂಸ್ಥೆಯೊAದರ ಅಧೀನದಲ್ಲಿದ್ದ ನೂರಾರು ಎಕರೆ ಕಾಫಿ ತೋಟಗಳನ್ನು ಖಾಸಗಿ ಸಂಸ್ಥೆಯೊAದಕ್ಕೆ ಮಾರಾಟ ಮಾಡುವ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕಾರ್ಮಿಕರಾದವರಿಗೆ ಹಾಗೂ ಲೈನ್ಮನೆಗಳಲ್ಲಿ ವಾಸ ಮಾಡುತ್ತಿದ್ದ ಕಾರ್ಮಿಕರಿಗೆ ಅದೇ ತೋಟಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುವುದೆಂದು ತಿಳಿಸಿದ್ದರು.
ಆದರೆ ಇದೀಗ ತೋಟ ಖರೀದಿಸಿರುವ ಕೆಲಸ ಸಂಸ್ಥೆಯವರು ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ಕೆಲಸ ನೀಡದೇ ಏಕಾಏಕಿ ಹೊರ ಹಾಕುತ್ತಿದ್ದಾರೆ. ಇದರಿಂದಾಗಿ ಕಾರ್ಮಿಕರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆAದರು.
ಕಸ ಸಮಸ್ಯೆ: ವಿ.ಕೆ. ಬಷೀರ್ ಮಾತನಾಡಿ, ಜಿಲ್ಲೆಯಲ್ಲಿ ಅತೀ ದೊಡ್ಡ ಗ್ರಾಮ ಪಂಚಾಯಿತಿ ಸಿದ್ದಾಪುರ ಆಗಿದ್ದು, ಇಲ್ಲಿ ಕಸ ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲ. ಈ ಹಿಂದೆ ಜಾಗ ಖರೀದಿಸಲೆಂದು ಜಿಲ್ಲಾಧಿಕಾರಿಗಳ ಕಚೇರಿಗೆ ಗ್ರಾಮ ಪಂಚಾಯಿತಿ ಮೂಲಕ ಹಣ ಪಾವತಿಸಲಾಗಿದೆ. ಆದರೂ ಈವರೆಗೂ ಜಾಗ ಸಿಗದೇ ಸಮಸ್ಯೆಯಾಗಿ ಎಂದರು.
ವಸತಿ ಇಲ್ಲ: ಅಂಬೇಡ್ಕರ್ ನಗರದ ನಿವಾಸಿ ರವಿ ಮಾತನಾಡಿ, ಅಂಬೇಡ್ಕರ್ ನಗರದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯ ವಸತಿ ಯೋಜನೆಯನ್ನು ನಂಬಿ ಮನೆಗಳನ್ನು ಕೆಡವಿದ್ದಾರೆ. ಆದರೆ ಈವರೆಗೂ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಮಂಜೂರಾತಿ ಆಗಿಲ್ಲ. ಮನೆ ನಿರ್ಮಾಣವಾಗದೇ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಮನವಿ ಮಾಡಿದರು.
ಮೈದಾನವಿಲ್ಲ: ಸಾಮಾಜಿಕ ಕಾರ್ಯಕರ್ತ ಎ.ಎಸ್. ಮುಸ್ತಫಾ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಕ್ರೀಡಾಪಟುಗಳಿಗೆ ಆಟವಾಡಲು ಸೂಕ್ತವಾದ ಮೈದಾನ ಇಲ್ಲ. ಕಳೆದ ಸುಮಾರು ವರ್ಷಗಳಿಂದ ಸಾರ್ವಜನಿಕ ಮೈದಾನಕ್ಕಾಗಿ ಮನವಿ ಸಲ್ಲಿಸಿದರೂ ಈವರೆಗೂ ಮೈದಾನಕ್ಕೆ ಜಾಗ ಗುರುತಿಸಿಲ್ಲ ಎಂದರು. ಸಿದ್ದಾಪುರ ಮಾರುಕಟ್ಟೆಯು ದುಸ್ಥಿತಿಯಿಂದ ಕೂಡಿದೆ. ಹೆಚ್ಚು ವರಮಾನವಿದ್ದರೂ ಸಂತೆ ಮಾರುಕಟ್ಟೆ ಅಭಿವೃದ್ಧಿಗೊಳಿಸಲಿಲ್ಲ ಎಂದು ಮುಸ್ತಫ ಆರೋಪಿಸಿದರು.
ಬಾವಿ ಸಮಸ್ಯೆ: ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮ ಮಾತನಾಡಿ, ಗ್ರಾಮ ಪಂಚಾಯಿತಿ ಸಮೀಪದಲ್ಲಿದ್ದ ಹಳೇ ಕಾಲದ ತೆರೆದ ಬಾವಿಯನ್ನು ಹಿಂದಿನ ಅಧ್ಯಕ್ಷರು ವಾರ್ಡ್ ಸದಸ್ಯರ ಗಮನಕ್ಕೆ ತಾರದೇ ಮುಚ್ಚಿ ಖಾಸಗಿ ವ್ಯಕ್ತಿಗಳಿಗೆ ರಸ್ತೆ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿದರು. ಬಾವಿಯನ್ನು ಪುನರ್ನಿರ್ಮಾಣ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಈ ಬಾವಿಯನ್ನು ಅವಲಂಭಿಸಲಾಗುತ್ತಿತ್ತು ಎಂದರು.
ಪುನರ್ವಸತಿ ಆಗಿಲ್ಲ: ಕರಡಿಗೋಡು ನದಿ ತೀರದ ನಿವಾಸಿಗಳಾದ ಕೃಷ್ಣ ಹಾಗೂ ಅಯ್ಯಪ್ಪ ಮಾತನಾಡಿ, ೨೦೧೯ರ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈವರೆಗೂ ಪುನರ್ವಸತಿ ಕಲ್ಪಿಸಿಕೊಟ್ಟಿರುವುದಿಲ್ಲ. ಅಲ್ಲದೇ ಸಿದ್ದಾಪುರ ಪಟ್ಟಣದ ಕೆಲವು ಬೃಹತ್ ಕಟ್ಟಡಗಳ ಕೊಳಚೆ ಹಾಗೂ ತ್ಯಾಜ್ಯ ನೀರುಗಳನ್ನು ಚರಂಡಿಯ ಮೂಲಕ ಕಾವೇರಿ ನದಿಗೆ ಹರಿಯ ಬಿಡಲಾಗುತ್ತಿದೆಂದು ಹೇಳಿದರು.
ತನಿಖೆಗೆ ಆಗ್ರಹ: ಗ್ರಾಮಸ್ಥ ರಮೇಶ್ ಮಾತನಾಡಿ, ಕಳೆದ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದವರು ಹಲವಾರು ಭ್ರಷ್ಟಚಾರ ನಡೆಸಿರುವುದು ಇತ್ತೀಚೆಗೆ ನಡೆದ ಜಮಾಬಂದಿ ಲೆಕ್ಕ ಪರಿಶೋಧನ ಸಭೆಯಲ್ಲಿ ಕಂಡುಬAದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಲು ಒತ್ತಾಯಿಸಿದರು.
ದಾಖಲೆಗೆ ಹಣ: ಗ್ರಾಮ ಪಂಚಾಯಿತಿ ಸದಸ್ಯ ವಿ.ಕೆ. ಜಾಫರ್ ಆಲಿ ಮಾತನಾಡಿ, ಕೆಲವು ಗ್ರಾ.ಪಂ. ಸದಸ್ಯರುಗಳು ನಿವೇಶನಗಳ ನಮೂನೆ ೯-೧೧ ದಾಖಲಾತಿಗಳನ್ನು ಮಾಡಿಸಿ ಕೊಡಲು ರೂ. ೨೦ ಸಾವಿರದಷ್ಟು ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು. ಪಂಚಾಯಿತಿ ಹಾಗೂ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿಗಳ ಕಚೇರಿಯಿಂದ ನೀಡುತ್ತಿರುವ ಈ ದಾಖಲಾತಿಗಳಿಗೆ ಹೆಚ್ಚು ಹಣ ಪಡೆಯುವುದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಗಂಭೀರವಾಗಿ ಪರಿಗಣಿಸ ಬೇಕೆಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ಖಾಯಂ ಪಿಡಿಓ ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಅಲ್ಲದೇ ಟ್ರಾಫಿಕ್ ಸಮಸ್ಯೆ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ವೈದ್ಯರ ನೇಮಿಸುವಂತೆ ಮನವಿ ಮಾಡಿಕೊಂಡರು.
ಕ್ರಮದ ಭರವಸೆ: ಸಭೆಯನ್ನು ಉದ್ದೇಶಿಸಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವರ್ಣಿತ್ ನೇಗಿ ಮಾತನಾಡಿ, ವಸತಿ ಯೋಜನೆಯ ಫಲಾನುಭವಿಗಳು ಆಯಾ ಗ್ರಾಮ ಪಂಚಾಯಿತಿಯ ಕಚೇರಿಗೆ ಜಿ.ಪಿ.ಎಸ್. ಮಾಡುವ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ವಿಳಂಬ ಮಾಡದೇ ನೀಡಬೇಕು. ಮನೆ ಗುರುತಿಸಿದ ಸ್ಥಳದಿಂದ ಬದಲಾವಣೆ ಮಾಡಬಾರ ದೆಂದು ಸಲಹೆ ನೀಡಿದರು. ಫಲಾನುಭವಿಗಳು ಮೃತಪಟ್ಟಲ್ಲಿ ಅವರುಗಳ ವಾರಿಸುದಾರರ ದಾಖಲಾತಿಗಳನ್ನು ಪರಿಶೀಲಿಸಿ ನಂತರ ಹಣ ಮಂಜೂರಾತಿ ಮಾಡಲು ಪಿಡಿಓಗೆ ಸೂಚಿಸಿದರು.
ಸಿದ್ದಾಪುರ ಗ್ರಾ.ಪಂ. ಕಸ ವಿಲೇವಾರಿಯ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಯ ಮೂಲಕ ಜಾಗ ಪಡೆಯಲು ಈಗಾಗಲೇ ಚರ್ಚೆ ನಡೆಯುತ್ತಿದೆ ಎಂದರು. ಕಸಗಳನ್ನು ಯಂತ್ರ ಬಳಸಿ ಬೇರ್ಪಡಿಸಲಾಗುವುದು. ಸಂತ್ರಸ್ತರಿಗೆ ಪುರ್ನವಸತಿ ಜಾಗದ ವಿಚಾರದ ಬಗ್ಗೆ ಮಾಹಿತಿ ಪಡೆಯುವುದಾಗಿ ಹೇಳಿದರು.
ಇದೇ ಸಂದರ್ಭ ಸಿ.ಇ.ಓ ರವರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅಮೃತ ಕೆರೆ ಗುಹ್ಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡರು ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್, ಉಪಾಧ್ಯಕ್ಷ ಪಳಣಿಸ್ವಾಮಿ, ಪಿಡಿಓ ಸೆಫೀಕ್, ಕಾರ್ಯದರ್ಶಿ ಮೋಹನ್ ಹಾಜರಿದ್ದರು.