ಪ್ರತ್ಯಕ್ಷ ವರದಿ -ಚಂದ್ರಮೋಹನ್

ಕುಶಾಲನಗರ, ಡಿ. ೧೨: ಕೊಡಗು -ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ರಸ್ತೆ ಮಡಿಕೇರಿ -ಸಂಪಾಜೆ ರಾಷ್ಟಿçÃಯ ಹೆದ್ದಾರಿ ೨೭೫ರ ಅಭಿವೃದ್ಧಿ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಕೇವಲ ಕಡತಗಳ ಪ್ರಗತಿಯಲ್ಲಿದೆಯೇ ಹೊರತು ಕಾಮಗಾರಿ ನಡೆಸುವಲ್ಲಿ ಸಂಪೂರ್ಣ ನಿರ್ಲಕ್ಷö್ಯ ತಾಳಿದೆ.

ಅಂತರಜಿಲ್ಲೆ, ಅಂತರ್ ರಾಜ್ಯ ಮಟ್ಟದ ಸಂಪರ್ಕ ಕೊಂಡಿಯಾಗಿರುವ ಸಂಪಾಜೆ- ಮಡಿಕೇರಿ ಹೆದ್ದಾರಿ ರಸ್ತೆ ಭೂಕುಸಿತದ ಅಪಾಯದ ಹಂತದಲ್ಲಿದ್ದರೂ ಇನ್ನೂ ಆಡಳಿತ ಮಾತ್ರ ತಲೆ ಕೆಡಿಸಿಕೊಂಡಿಲ್ಲ ಎಂದರೆ ತಪ್ಪಾಗಲಾರದು.

ಈ ಹೆದ್ದಾರಿ ರಸ್ತೆಯ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿ ಕಳೆದ ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿದ್ದು ಮುಂದಿನ ಮಳೆಗಾಲದಲ್ಲಿ ಈ ವ್ಯಾಪ್ತಿಯ ಹೆದ್ದಾರಿಯಲ್ಲಿ ಸಂಭಾವ್ಯ ಮಣ್ಣು ಕುಸಿತ ಮತ್ತಿತರ ಪ್ರಾಕೃತಿಕ ವಿಕೋಪಗಳಿಂದ ಜಿಲ್ಲೆಯ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಪರಿಸ್ಥಿತಿ ಎದುರಾಗುವುದು ಬಹುತೇಕ ಖಚಿತ ಎನ್ನಬಹುದು.

೨೦೧೮ರ ನಂತರದ ವರ್ಷಗಳ ಅವಧಿಯಲ್ಲಿ ಮಳೆಗಾಲ ಸಂದರ್ಭ ಈ ಭಾಗದ ಹೆದ್ದಾರಿಯಲ್ಲಿ ಬಿರುಕು ಕಾಣುವುದರೊಂದಿಗೆ ಮಡಿಕೇರಿ ಸಂಪಾಜೆ ಹೆದ್ದಾರಿ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಬಹುತೇಕ ಏರುಪೇರಾಗಿತ್ತು. ಮಡಿಕೇರಿ ಪಟ್ಟಣದ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳ ಕಟ್ಟಡದ ತಡೆಗೋಡೆಯಿಂದ ಆರಂಭಗೊAಡು ಸಂಪಾಜೆ ಸಮೀಪದ ದೇವರಕೊಲ್ಲಿ ತನಕ ರಸ್ತೆ ಸಂಪೂರ್ಣ ಅಪಾಯಕಾರಿಯಾಗಿ ಪರಿವರ್ತನೆಗೊಂಡಿರುವ ದೃಶ್ಯ ಅಲ್ಲಲ್ಲಿ ಕಾಣಬಹುದು.

ಈ ವ್ಯಾಪ್ತಿಯಲ್ಲಿ ಮಳೆಗಾಲದ ಅವಧಿಯಲ್ಲಿ ಸರಾಸರಿ ಅಂದಾಜು ೨೯೦೦ ಮಿಲಿಮೀಟರ್ ಮಳೆ ಆಗುತ್ತಿದ್ದು, ಅಲ್ಲಲ್ಲಿ ಬೆಟ್ಟ ಕುಸಿತ, ರಸ್ತೆ ಜಾರುವ ಘಟನೆಗಳು ನಿರಂತರವಾಗಿ ಸಂಭವಿಸುತ್ತಿವೆ. ೨೦೨೩ರ ಮಳೆಗಾಲ ಅವಧಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಯಾವುದೇ ಆತಂಕಗಳು ಎದುರಾಗಿಲ್ಲ.

ಸಂಪಾಜೆ ಘಾಟ್ ಸೆಕ್ಷನ್ ವ್ಯಾಪ್ತಿಯ ೭೧.೬ ಕಿ.ಮಿ ನಿಂದ ೧೧೨.೩ ಕಿ. ಮಿ ಅಂತರದ ಹೆದ್ದಾರಿ ರಸ್ತೆ ಸುಮಾರು ೩೩ ತಿರುವುಗಳಿಂದ ಕೂಡಿದ್ದು ಎಲ್ಲೆಡೆ ರಸ್ತೆ ಅಪಾಯದ ಅಂಚಿನಲ್ಲಿದೆ ಎನ್ನುವ ವರದಿಯನ್ನು ರಾಷ್ಟಿçÃಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಕೇಂದ್ರ ಭೂಸಾರಿಗೆ ಇಲಾಖೆಗೆ ದಾಖಲೆಯೊಂದಿಗೆ ಮಾಹಿತಿ ನೀಡಿ ನಾಲ್ಕು ವರ್ಷಗಳು ಕಳೆದಿವೆ.

೨೦೨೨ರಲ್ಲಿ ಸಂಭವಿಸಿದ ಹಲವು ಭೂಕಂಪನಗಳಲ್ಲಿ ರಸ್ತೆ ಅಲ್ಲಲ್ಲಿ ಬಿರುಕು ಕಂಡಿರುವುದು, ಇದರ ಪರಿಣಾಮವಾಗಿ ಈ ಭಾಗದ ರಸ್ತೆ ಸಂಚಾರ ಬಹುತೇಕ ಅಪಾಯಕಾರಿ ಎನ್ನುವಂತಾಗಿದೆ.

ಮಡಿಕೇರಿ-ಸAಪಾಜೆ ರಸ್ತೆಯ ಮದೆ ನಾಡು ಸಮೀಪದ ಕರ್ತೋಜಿಗುಡ್ಡ ಮಳೆಗಾಲದಲ್ಲಿ ಬಹುತೇಕ ಕುಸಿದಿದ್ದು ಈ ಬಾರಿ ಇದು ಇನ್ನೂ ಅಪಾಯದ ಹಂತದಲ್ಲಿದೆ. ೨೦೨೨ರ ಮಳೆಗಾಲದಲ್ಲಿ ಈ ವ್ಯಾಪ್ತಿಯ ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿದ್ದು ಅಪಾಯವನ್ನು ಎದುರಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಾಗಿ ರಾಷ್ಟಿçÃಯ ಹೆದ್ದಾರಿ ಅಧಿಕಾರಿಗಳು ಹಲವು ಹಿಟಾಚಿ ಯಂತ್ರಗಳನ್ನು ಸ್ಥಳದಲ್ಲಿ ಇಡುವ ಮೂಲಕ ಮಣ್ಣು ತೆರವುಗೊಳಿಸುವ ಕಾಯಕದಲ್ಲಿ ತೊಡಗಿದ್ದನ್ನು ನೆನಪಿಸಬಹುದು.

ಈ ನಡುವೆ ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಕೂಡ ಸ್ಥಗಿತಗೊಂಡಿತ್ತು. ಮಡಿಕೇರಿ ಸಂಪಾಜೆ ನಡುವೆ ದೇವರಕೊಲ್ಲಿ ಬಳಿ ಹೆದ್ದಾರಿ ರಸ್ತೆ ಕುಸಿತಕ್ಕೆ ಒಳಗಾಗಿ ಈ ಭಾಗದ ರಸ್ತೆ ಇನ್ನೂ ಸರಿಪಡಿಸುವಲ್ಲಿ ಸಂಬAಧಿಸಿದ ಅಧಿಕಾರಿಗಳು ವಿಫಲರಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಮಳೆಗಾಲದ ಅವಧಿಯಲ್ಲಿ ಈ ಜಾಗದಲ್ಲಿ ಹಾಕಿದ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಬ್ಯಾರಿಕೆಡ್‌ಗಳು ಮತ್ತು ಫಲಕಗಳು ಇಲ್ಲಿ ಕಾಡು ಸೇರಿದ್ದು ತುಕ್ಕು ಹಿಡಿಯಲಾರಂಭಿಸಿದೆ.

ರಾಷ್ಟಿçÃಯ ಹೆದ್ದಾರಿ ಮಂಗಳೂರು ವಿಭಾಗದ ಅಧಿಕಾರಿಗಳು ಮಡಿಕೇರಿ ಸಂಪಾಜೆ ವ್ಯಾಪ್ತಿಯ ನಡುವೆ ಹೆದ್ದಾರಿಯಲ್ಲಿ ಇರುವ ಅಪಾಯಕಾರಿ ತಿರುವುಗಳನ್ನು ಗುರುತಿಸಿದ್ದು, ಕುಸಿತ ತಪ್ಪಿಸುವ ನಿಟ್ಟಿನಲ್ಲಿ ರಸ್ತೆಗೆ ರಿಟೇನಿಂಗ್ ವಾಲ್, ಗಾರ್ಡ್ವಾಲ್‌ಗಳನ್ನು ನಿರ್ಮಿಸಲು ಕ್ರಿಯಾಯೋಜನೆ ರೂಪಿಸಿ ಎರಡು ವರ್ಷಗಳು ಸಂದಿವೆ.

ಈ ಸಂಬAಧ ರಾಷ್ಟಿçÃಯ ಹೆದ್ದಾರಿ ಮೂಲಕ ಮೂರು ಹಂತದ ಕಾಮಗಾರಿಗಳನ್ನು ನಡೆಸಲು ಒಟ್ಟು ೧೬೫ ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ಭೂಸಾರಿಗೆ ಇಲಾಖೆಗೆ ರವಾನಿಸಲಾಗಿದೆ ಎನ್ನುತ್ತಾರೆ ಹೆದ್ದಾರಿ ವಿಭಾಗದ ಹಿರಿಯ ಅಧಿಕಾರಿಗಳು.

ಹಣದ ಕೊರತೆಯಿಂದ ಇದುವರೆಗೆ ಮಡಿಕೇರಿ ಸಂಪಾಜೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣ ಎನ್ನಲಾಗಿದೆ.

ಈ ಬಗ್ಗೆ ರಾಷ್ಟಿçÃಯ ಹೆದ್ದಾರಿಯ ಮಂಗಳೂರು ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅವರನ್ನು ‘ಶಕ್ತಿ’ ಸಂಪರ್ಕಿಸಿ ಪ್ರತಿಕ್ರಿಯೆ ಬಯಸಿದಾಗ, ಮಡಿಕೇರಿ ಸಂಪಾಜೆ ನಡುವೆ ಕೇಂದ್ರ ಭೂಸಾರಿಗೆ ಇಲಾಖೆಗೆ ೩ ಹಂತದ ಕಾಮಗಾರಿ ನಡೆಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಥಮ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಅಂದಾಜು ೨೦ ಕೋಟಿ ವೆಚ್ಚದಲ್ಲಿ ಸಂಪಾಜೆಯಿAದ ಮಡಿಕೇರಿ ಕಡೆಗೆ ೨೦ ಕಿಲೋ ಮೀಟರ್ ತನಕ ಡಾಮರಿಂಗ್ ವ್ಯವಸ್ಥೆ ಕೈಗೊಳ್ಳಲಾಗುವುದು. ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಮಳೆಗಾಲಕ್ಕೆ ಮುನ್ನ ವಾರ್ಷಿಕ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಡಿಕೇರಿ ಸಂಪಾಜೆ ರಾಷ್ಟಿçÃಯ ಹೆದ್ದಾರಿ ರಸ್ತೆ ಮೂಲಕ ಕೊಡಗು ಜಿಲ್ಲೆ, ಮಂಗಳೂರು ಮೈಸೂರು ಹಾಸನ ರಸ್ತೆ ಸಂಪರ್ಕ ಹೊಂದಿದ್ದು ಇದರೊಂದಿಗೆ ನೆರೆಯ ಕೇರಳ ರಾಜ್ಯಕ್ಕೂ ಇದೇ ಮಾರ್ಗವನ್ನು ದಿನನಿತ್ಯ ಸಾವಿರಾರು ವಾಹನಗಳು ಅವಲಂಬಿಸಬೇಕಾಗಿದೆ. ಅಪಾಯಕಾರಿ ಪ್ರದೇಶವಾದ ಮಲೆನಾಡು ಗ್ರಾಮದ ಸಮೀಪ ಕರ್ತೋಜಿಗುಡ್ಡ ವ್ಯಾಪ್ತಿಯಲ್ಲಿ ಯಾವುದೇ ಸಂದರ್ಭ ಮಳೆಗಾಲದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಅಧಿಕ ಎನ್ನಲಾಗಿದ್ದು ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಈ ಮಳೆಗಾಲಕ್ಕೂ ಮುನ್ನ ಕೂಡಲೇ ಕಾರ್ಯ ಯೋಜನೆ ಪೂರ್ಣಗೊಳಿಸಬೇಕಾಗಿದೆ. ಮದೆನಾಡು ಸಂಪಾಜೆ ನಡುವೆ ೭ ಕಡೆ ರಸ್ತೆ ಬದಿಯ ಬೆಟ್ಟಗಳು ಕುಸಿದಿದ್ದು ಈ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಅಪಾಯದ ಹಂತಕ್ಕೆ ಪರಿವರ್ತನೆಗೊಳ್ಳಲಿದೆ ಎನ್ನುತ್ತಾರೆ ಸ್ಥಳೀಯರು.

ಪ್ರಸಕ್ತ ಮಳೆಗಾಲಕ್ಕೆ ಮುನ್ನ ಸಂಪಾಜೆ ಘಾಟ್ ರಸ್ತೆಯಲ್ಲಿ ರಸ್ತೆ ಸುರಕ್ಷತೆ ಮತ್ತು ವಾರ್ಷಿಕ ಯೋಜನೆ ಅಡಿಯಲ್ಲಿ ಕೂಡಲೇ ಕಾಮಗಾರಿ ಕೈಗೊಳ್ಳದಿದ್ದಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವುದರೊಂದಿಗೆ ಅನಾಹುತ ಎದುರಾಗಲಿದೆ ಎನ್ನುವುದು ಈ ಭಾಗದ ಸ್ಥಳೀಯರ ಅಭಿಪ್ರಾಯವಾಗಿದೆ.

ಸರ್ಕಾರ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಮಳೆಗಾಲಕ್ಕೆ ಮುನ್ನ ಈ ಭಾಗದ ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ ಎನ್ನುತ್ತಾರೆ ಮೊಣ್ಣಂಗೇರಿ ಗ್ರಾಮದ ಸಮಾಜಸೇವಕ ಧನಂಜಯ್.

ರಾಜ್ಯದ ಶಿರಾಡಿ, ಚಾರ್ಮಾಡಿ ಘಾಟ್ ರಸ್ತೆಗಳು ಸಮಸ್ಯೆಗೆ ಒಳಗಾದಾಗ ಬದಲಿ ರಸ್ತೆಯಾಗಿ ಮೈಸೂರು-ಮಡಿಕೇರಿ-ಬಂಟ್ವಾಳ ರಸ್ತೆಯನ್ನು ಬಳಸುವುದು ಕಳೆದ ಹಲವು ವರ್ಷಗಳಿಂದ ನಡೆದು ಬಂದ ಸಂಪ್ರದಾಯವಾಗಿದೆ. ಮಡಿಕೇರಿ ಸಂಪಾಜೆ ನಡುವೆ ನಾಲ್ಕು ಕಡೆ ರಸ್ತೆ ಅಗಲೀಕರಣ ಮಾಡಿದ್ದರೂ ಆ ಕಾಮಗಾರಿ ಕೂಡ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿರುವ ದೃಶ್ಯ ಕಾಣಬಹುದು.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಡಿಕೇರಿ ಸಂಪಾಜೆ ರಾಷ್ಟಿçÃಯ ಹೆದ್ದಾರಿ ರಸ್ತೆಯ ಸುರಕ್ಷತೆ, ಅಭಿವೃದ್ಧಿ ಕಾಮಗಾರಿಗೆ ತಕ್ಷಣ ಒತ್ತು ನೀಡಿ ಕಾಮಗಾರಿ ಆರಂಭಿಸಬೇಕಾಗಿದೆ.

ಮುಂದಿನ ಮಳೆಗಾಲದ ಒಳಗಾಗಿ ಮಡಿಕೇರಿ ಸಂಪಾಜೆ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬವಾದಲ್ಲಿ ಕೊಡಗು ಜಿಲ್ಲೆ ಮಳೆಗಾಲ ಸಂದರ್ಭ ಅಂದಾಜು ಮೂರು ತಿಂಗಳ ಕಾಲ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುವ ಸಾಧ್ಯತೆ ಅಧಿಕವಾಗಿದ್ದು ಈ ಸಂಬAಧ ರಾಷ್ಟಿçÃಯ ಹೆದ್ದಾರಿ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ.