ಮಡಿಕೇರಿ, ಡಿ. ೧೨ : ಬೆಳಗೆದ್ದ ಕೂಡಲೇ ಒಂದಿಷ್ಟು ಅಲಂಕಾರ ಮಾಡಿಕೊಂಡು ಶಾಲಾ-ಕಾಲೇಜು, ಕೆಲಸಕ್ಕೆ ಹೋಗಿ ತಮ್ಮಿಷ್ಟಕ್ಕೆ ಸಂಭ್ರಮದಿAದ ವಿಹರಿಸುವ ಬಾಲಕಿಯರು ದಿನ ನಿತ್ಯ ಕಣ್ಮುಂದೆ ಸುಳಿಯುತ್ತಾರೆ., ಇವರುಗಳ ನಡುವೆ ಚಡ್ಡಿ, ಟೀ ಶರ್ಟ್ ಧರಿಸಿ., ಕಾಲಿಗೆ ಸ್ಟಡ್ಸ್ ಹಾಕಿ ಬಿಸಿಲಿನ ಝಳದ ನಡುವೆ ಪುಟಿದೇಳುತ್ತಿದ್ದ ಚೆಂಡಿನೊAದಿಗೆ ಆಟವಾಡಿದ ಬಾಲಕಿಯರು ಕ್ರೀಡಾ ಪ್ರೇಮಿಗಳ ಮನದಲ್ಲಿ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು..!

ಈ ಒಂದು ಅಪರೂಪದ ರೋಚಕ ಕ್ಷಣ ಕಂಡು ಬಂದಿದ್ದು ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಫುಟ್ಬಾಲ್ ಮೈದಾನದಲ್ಲಿ., ಕೊಡಗು ಮೊಗೇರ ಸೇವಾ ಸಮಾಜ, ಕೊಡಗು ಮೊಗೇರ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಬಾಲಕಿಯರ ತಂಡಗಳು ಕೂಡ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದವು.

ಟೀA ಮಡಿಕೇರಿ ಹಾಗೂ ಟೀಂ ಸುಂಟಿಕೊಪ್ಪ ತಂಡಗಳು ಭಾಗವಹಿಸಿದ್ದವು. ಬಹುತೇಕ ಕ್ರೀಡಾ ಶಾಲೆ ಬಾಲಕಿಯರನ್ನು ಒಳಗೊಂಡಿದ್ದ ಮಡಿಕೇರಿ ತಂಡ ಉತ್ತಮ ಆಟ ಪ್ರದರ್ಶನದೊಂದಿಗೆ ಆಟಕ್ಕಿಳಿದು ಪ್ರಥಮಾರ್ಧದಲ್ಲಿ ತಂಡದ ಮುನ್ನಡೆ ಆಟಗಾರ್ತಿ ಕಡಗದಾಳುವಿನ ಪಿ.ಕೆ. ರಕ್ಷಿತಾ ಗೋಲು ಬಾರಿಸಿ ತಂಡಕ್ಕೆ ೧-೦ ಗೋಲಿನ ಮುನ್ನಡೆ ಕಾಯ್ದುಕೊಂಡರು. ದ್ವಿತಿಯಾರ್ಧದಲ್ಲಿ ಪ್ರಬಲ ಪೈಪೋಟಿ ನೀಡಿದ ಸುಂಟಿಕೊಪ್ಪ ತಂಡದ ದೀಪಿಕ ಗೊಲು ಬಾರಿಸುವದರ ಮೂಲಕ ಪಂದ್ಯವನ್ನು೧-೧ ಗೋಲುಗಳಿಂದ ಸಮನಾಗಿಸಿದರು.

ನಂತರದಲ್ಲಿ ಪೆನಾಲ್ಟಿ ಶೂಟೌಟ್ ನೀಡಲಾಗಿ ಇದರಲ್ಲಿ ಟೀಂ ಸುಂಟಿಕೊಪ್ಪ ತಂಡ ಎರಡು ಗೋಲು ಬಾರಿಸಿದರೆ, ಮಡಿಕೇರಿ ತಂಡ ಒಂದು ಗೋಲು ಮಾತ್ರ ಬಾರಿಸಿ ಸೋಲನುಭವಿಸಿತು. ಫುಟ್ಬಾಲ್ ಆಟಕ್ಕೂ ಕೂಡ ಸೈ ಎಂದು ಬಾಲಕಿಯರು ತೋರಿಸಿಕೊಟ್ಟರು. ಇದೇ ಪ್ರಥಮ ಬಾರಿಗೆ ಮೊಗೇರ ಸಮಾಜದಿಂದ ಫುಟ್ಬಾಲ್ ಪಂದ್ಯಾವಳಿ ಆಯೋಜನೆಯೊಂದಿಗೆ ಬಾಲಕಿಯರಿಗೂ ಅವಕಾಶ ಮಾಡಿಕೊಟ್ಟ ಪ್ರಶಂಸೆಗೆ ಮೊಗೇರ ಫುಟ್ಬಾಲ್ ಕ್ಲಬ್ ಪಾತ್ರವಾಗಿದೆ. ಯಾವದೇ ತರಬೇತುದಾರರು, ಮಾರ್ಗದರ್ಶಕರಿಲ್ಲದೆ ಮೈದಾನಕ್ಕಿಳಿದ ಸುಂಟಿಕೊಪ್ಪ ತಂಡದ ಆಟಗಾರ್ತಿಯರು ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾದರಲ್ಲದೆ, ಪ್ರೋತ್ಸಾಹಕರ ಬಹುಮಾನಕ್ಕೂ ಭಾಜನರಾದರು. -ಸಂತೋಷ್