ಮಡಿಕೇರಿ, ಡಿ. ೧೦: ನಗರದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ವತಿಯಿಂದ ಮಕ್ಕಳ ದಿನಾಚರಣೆಯನ್ನು ಶ್ರೀ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಆಚರಿಸಲಾಯಿತು.
ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳೇ ಸಭಾ ಕಾರ್ಯಕ್ರಮ ನಡೆಸಿದರು.
ಟಿಯಾ ಕಿಶೋರ್, ಆರ್ನವ್ ಅನಿಲ್ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪುಟಾಣಿ ಆಯುಷಿ ಗಿರೀಶ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ವಿಹಾನ್ ಸುಜಯ್, ಆರ್ನವ್ ಅನಿಲ್, ದರ್ಶಿನಿ ಜಗದೀಶ್ ದೇಶ ಭಕ್ತಿಗೀತೆಯನ್ನು ಹಾಡಿದರು. ಆಯುಷಿ ಗಿರೀಶ್ ಅಧ್ಯಕ್ಷರ ಭಾಷಣ ಮಾಡಿದರು. ಪುಟಾಣಿಗಳಾದ ಶ್ರೀನಿಧಿ ದೇವರಾಜ್, ಧರ್ಮಿಕ್ ಮಹೇಶ್, ಹಿಮಾನಿ ಕುಮಾರ್, ಜಶ್ವಿಕ್ ಯಶ್ವಂತ್, ಗಗನ್ ರಮೇಶ್, ಸನ್ನಿಧಿ ಸುಧೀಪ್, ರಾಘವಿ ಮೋಹನ್ ಹಾಜರಿದ್ದರು.
ಈ ಸಂದರ್ಭ ಮಹಿಳಾ ಸಮಾಜದ ಸ್ಥಾಪಕ ಮಾಜಿ ಉಪಾಧ್ಯಕ್ಷೆ ವಿಜಯ ಗಣೇಶ್ ಎಲ್ಲಾ ಮಕ್ಕಳಿಗೆ ಕಿರುಕಾಣಿಕೆ ನೀಡಿ ಪ್ರೋತ್ಸಾಹಿಸಿದರು.
ಕೃಪಾ ಲೋಕೇಶ್ ಪ್ರಾರ್ಥಿಸಿ, ತನ್ಮಯಿ ಮಹೇಶ್ ಸ್ವಾಗತಿಸಿ, ದೀಷ್ಣಾ ನಾಗೇಶ್ ನಿರೂಪಿಸಿ, ಹಂಸಿಣಿ ಜಗದೀಶ್ ವಂದಿಸಿದರು.
ಮಹಿಳಾ ಸಮಾಜದ ಆಡಳಿತ ಮಂಡಳಿಯವರು ಮತ್ತು ಸದಸ್ಯೆಯರು ಉಪಸ್ಥಿತರಿದ್ದರು. ಮಕ್ಕಳಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು.