ಕೂಡಿಗೆ, ಡಿ.೧೦: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಹೆಬ್ಬಾಲೆ ಗ್ರಾಮದಲ್ಲಿ ತಾ. ೧೨ ರಂದು ನಡೆಯಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ರಾಮೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ನಡೆಯಲ್ಲಿರುವ ಅದ್ಧೂರಿ ಜಾತ್ರೋತ್ಸವದ ಅಂಗವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೂಟ್ಯನ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಗ್ರಾಮಾಂತರ ಪೋಲಿಸ್ ಠಾಣೆಯ ಸಭಾಂಗಣದಲ್ಲಿ ಕರೆಯಲಾಗಿತು.
ಶ್ರೀ ಬನಶಂಕರಿ ಅಮ್ಮನವರ ಹಬ್ಬ ಹಾಗೂ ವಿವಿಧ ಉಪ ಸಮಿತಿಯ ವತಿಯಿಂದ ವಿವಿಧ ಉಪ ಗ್ರಾಮಗಳಿಂದ ಹೊರಡಲಿರುವ, ಮಿನಿ ದಸರಾ ಮಾದರಿಯ ವಿದ್ಯುತ್ ಅಲಂಕೃತವಾದ ಶೋಭಯಾತ್ರೆಯ ಮಂಟಪಗಳ ಮೆರವಣಿಗೆ ಹಾಗೂ ಜಾತ್ರೋತ್ಸವದ ಕಾರ್ಯಕ್ರಮದಲ್ಲಿ ಪೊಲೀಸ್ ಬಂದೂಬಸ್ತು ವ್ಯವಸ್ಥೆ ಸೇರಿದಂತೆ ಕಾನೂನಿನ ನಿಯಮಗಳಿಗೆ ಗ್ರಾಮಸ್ಥರು ಸಹಕಾರ ನೀಡುವುದು ಅದನ್ನು ಪಾಲಿಸುವ ಬಗ್ಗೆ ಸಭೆಯಲ್ಲಿ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್, ಭಾರತಿ, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣಾಕುಮಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್, ದೇವಾಲಯ ಸಮಿತಿಯ ಅಧ್ಯಕ್ಷ ಬಸವರಾಜ್, ಸೇರಿದಂತೆ ಶೋಭಾಯಾತ್ರೆಯ ಮಂಟಪಗಳ ವಿವಿಧ ಸಮಿತಿಯ ಅಧ್ಯಕ್ಷರುಗಳು ಸಮಿತಿಯ ನಿರ್ದೇಶಕರು ಸೇರಿದಂತೆ ಗ್ರಾಮದ ಪ್ರಮುಖರು ಹಾಜರಿದ್ದರು.