ಕುಶಾಲನಗರ, ಡಿ.೧೦: ಕುಶಾಲ ನಗರ ಶ್ರೀ ಗಣಪತಿ ದೇವಸ್ಥಾನ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿ ವತಿಯಿಂದ ೯ನೇ ದಿನವಾದ ಶನಿ ವಾರ ಕುಣಿಯೋಣ ಬಾರಾ ಹಾಗೂ ಡಾನ್ಸ್ ಡಾನ್ಸ್ ನೃತ್ಯ ಸ್ಪರ್ಧೆ ಏರ್ಪಡಿ ಸಲಾಗಿತ್ತು. ಗುಂಡೂರಾವ್ ಬಡಾ ವಣೆಯ ಜಾತ್ರೆ ಮೈದಾನದ ಸಾಂಸ್ಕೃ ತಿಕ ವೇದಿಕೆಯಲ್ಲಿ ೧೫ಕ್ಕೂ ಅಧಿಕ ನೃತ್ಯಪಟುಗಳು ವೈಯಕ್ತಿಕ ವಿಭಾಗದಲ್ಲಿ ಪಾಲ್ಗೊಂಡಿದ್ದರು.

ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಹಲವು ತಂಡಗಳು ಡಾನ್ಸ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೆರೆದ ಪ್ರೇಕ್ಷಕರ ಮನರಂಜಿಸಿದವು. ಕುಶಾಲನಗರದ ಡ್ರೀಮ್ ಸ್ಟಾರ್ ಡಾನ್ಸ್ ಸಂಸ್ಥೆ ಪ್ರಥಮ, ಕ್ರಿಯೇಟಿವ್ ಡಾನ್ಸ್ ಅಕಾಡೆಮಿ ದ್ವಿತೀಯ ಮತ್ತು ಸೋಮವಾರಪೇಟೆಯ ಪವರ್ ಸ್ಟಾರ್ ಸಂಸ್ಥೆ ತೃತೀಯ ಸ್ಥಾನ ಗಳಿಸಿತು.

ವೈಯಕ್ತಿಕ ವಿಭಾಗದಲ್ಲಿ ಮಿಥುನ್ ಮುತ್ತಯ್ಯ ಪ್ರಥಮ, ಪ್ರಸನ್ನ ದ್ವಿತೀಯ, ಅನಂತ್ ಕುಮಾರ್ ಮತ್ತು ಭಾವನಿ ತೃತೀಯ ಸ್ಥಾನ ಗಳಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ಕಲಾವಿದರಾದ ಮಿಲನ ಭರತ್ ಮತ್ತು ಹುಣಸೂರಿನ ಮಾದೇಶ್ ಕಾರ್ಯನಿರ್ವಹಿಸಿದರು.

ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾದ ಕೆ.ಪಿ. ಚಂದ್ರಕಲಾ ವಿಜೇತರಿಗೆ ಬಹುಮಾನ ವಿತರಿಸಿದರು. ಸಮಿತಿಯ ಪ್ರಮುಖರಾದ ವಿ.ಎಸ್.ಆನಂದ ಕುಮಾರ್, ಚಂದನ್ ಕುಮಾರ್ ಇದ್ದರು.