ಕಣಿವೆ, ಡಿ. ೮: ಕೊಡಗು ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚಿನ ಜನಸಾಂದ್ರತೆಯುಳ್ಳ ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿನ ಬವಣೆ ಉಂಟಾಗಿ ದಶಕಗಳು ಕಳೆದರೂ ಆಡಳಿತಾರೂಢರಿಂದ ಇದೂವರೆಗೂ ಕುಡಿಯವ ನೀರಿನ ಸಮಸ್ಯೆ ಇತ್ಯರ್ಥಪಡಿಸಲು ಸಾಧ್ಯವಾಗದಿರುವುದು ಬೇಸರದ ಸಂಗತಿ.
ಜೀವ ನದಿ ಕಾವೇರಿ ಕುಶಾಲನಗರ ಪಟ್ಟಣದೊಳಗೆ ಹರಿದರೂ ಕೂಡ ನದಿ ದಂಡೆಯ ನಿವಾಸಿಗಳಿಗೆ ಸಮರ್ಪಕವಾದ ಕುಡಿವ ನೀರು ಹರಿಸುವಲ್ಲಿ ವಿಫಲರಾಗಿರುವುದು ಜನರ ಬಗ್ಗೆ ಆಡಳಿತಾರೂಢರಲ್ಲಿನ ಅಸಡ್ಡೆಯನ್ನು ತೋರಿಸುತ್ತದೆ.
ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದಲ್ಲಿ ಪ್ರಸಕ್ತ ೩೦ ಸಾವಿರದಷ್ಟು ಜನಸಂಖ್ಯೆಯಿದ್ದು ಜಲಮಂಡಳಿಯಿAದ ಕೇವಲ ೨೦ ಸಾವಿರ ಜನಸಂಖ್ಯೆಗೆ ಮಾತ್ರ ಕುಡಿಯುವ ನೀರನ್ನು ಪೂರೈಸಲಾಗುತ್ತದೆ.
ಅಂದರೆ ಕುಶಾಲನಗರ ಪಟ್ಟಣ ಸೇರಿದಂತೆ ಮುಳ್ಳುಸೋಗೆ ಗ್ರಾಮಕ್ಕೂ ಕುಡಿವ ನೀರನ್ನು ಪೂರೈಸಲಾಗುತ್ತದೆ.
ಆದರೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಜನಸಾಂದ್ರತೆ ಇರುವ ಮುಳ್ಳುಸೋಗೆಯ ಬಸವೇಶ್ವರ ಬಡಾವಣೆಯ ನಿವಾಸಿಗಳಿಗೆ ಕಾವೇರಿ ನೀರು ಇದುವರೆಗೂ ಸಮರ್ಪಕವಾಗಿ ಪೂರೈಕೆಯಾಗದ ಬಗ್ಗೆ ಅಲ್ಲಿನ ಅನೇಕ ನಿವಾಸಿಗಳು ‘ಶಕ್ತಿ'ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
೪೫ ಲಕ್ಷ ಲೀಟರ್ ನೀರಿನ ಅವಶ್ಯವಿದೆ
ಕುಶಾಲನಗರ ಪುರಸಭಾ ವ್ಯಾಪ್ತಿಯ ಎಲ್ಲಾ ಬಡಾವಣೆಗಳು ಸೇರಿದಂತೆ ಮುಳ್ಳುಸೋಗೆ ಭಾಗದ ನಿವಾಸಿಗಳಿಗೆ ದಿನಂಪ್ರತೀ ೪೫ ಲಕ್ಷ ಲೀಟರ್ ಕುಡಿಯುವ ನೀರಿನ ಅವಶ್ಯವಿದೆ. ಆದರೆ ಇದು ಈಗ ಇರುವ ವ್ಯವಸ್ಥೆಯಡಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
(ಮೊದಲ ಪುಟದಿಂದ) ಹಾಗಾಗಿ ಕಾವೇರಿ ನೀರು ಹರಿಸಲು ಅಸಾಧ್ಯವಾದ ಕಡೆಗಳಲ್ಲಿ ಕೊಳವೆ ಬಾವಿಗಳ ಮೂಲಕ ನೀರು ಒದಗಿಸುವ ಕೆಲಸವಾಗುತ್ತಿದೆ.
ನಿತ್ಯವೂ ೨೮ ಲಕ್ಷ ಲೀಟರ್ ನೀರು ಪೂರೈಕೆ
ಕುಶಾಲನಗರ ಜಲಮಂಡಳಿ ಪ್ರತಿನಿತ್ಯವೂ ಕಾವೇರಿ ನದಿಯಿಂದ ೬೫ ಹೆಚ್‌ಪಿ ಸಾಮರ್ಥ್ಯದ ಯಂತ್ರಗಾರದಿAದ ೨೮ ಸಾವಿರ ಲೀಟರ್ ನೀರನ್ನು ಮೇಲೆತ್ತಿ ಜಲಮಂಡಳಿಯ ಶುದ್ಧೀಕರಣ ಘಟಕದತ್ತ ಹರಿಸುತ್ತಿದೆ. ಅಲ್ಲಿಂದ ೨೫ ಹೆಚ್ ಪಿ ಸಾಮರ್ಥ್ಯದ ಯಂತ್ರದಿAದ ಶುದ್ಧೀಕರಿಸಿದ ನೀರನ್ನು ೨.೫೦ ಲಕ್ಷ ಲೀ. ಸಾಮರ್ಥ್ಯದ ಎತ್ತರದ ಟ್ಯಾಂಕ್‌ಗಳಿಗೆ ಸರಬರಾಜು ಮಾಡಿ ಅಲ್ಲಿಂದ ಪೈಪುಗಳ ಮೂಲಕ ನಗರದ ನಿವಾಸಿಗಳ ಮನೆ ಮನೆಗಳಿಗೆ ಮೂರು ದಿನಗಳಿಗೊಮ್ಮೆ ಪೂರೈಕೆ ಮಾಡಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿ ಆನಂದ್ ಮಾಹಿತಿ ನೀಡಿದ್ದಾರೆ.
ಪೈಪುಗಳ ವ್ಯಾಪ್ತಿ ೯೫ ಕಿಮೀ
ಕುಶಾಲನಗರದ ನಿವಾಸಿಗಳಿಗೆ ಕುಡಿವ ಶುದ್ಧ ನೀರು ಪೂರೈಸಲು ೯೫ ಕಿಮೀ. ನಷ್ಟು ದೂರದ ಪೈಪ್ ಲೈನ್‌ಗಳ ಜೋಡಣೆ ಮಾಡಲಾಗಿದೆ.
೨.೫೦ ಲಕ್ಷ ಲೀ. ನೀರು ಸಂಗ್ರಹಣಾ ಸಾಮರ್ಥ್ಯದ ೩ ಟ್ಯಾಂಕುಗಳು ಹಾಗೂ ೧.೫೦ ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಒಂದು ಟ್ಯಾಂಕ್ ಇದೆ. ಇಲ್ಲಿ ಈಗ ಇರುವ ಬಹುತೇಕ ನೀರಿನ ಟ್ಯಾಂಕುಗಳು, ಪೈಪುಗಳ ಜೋಡಣೆ ಹಾಗೂ ಕಚೇರಿ ಕಟ್ಟಡ ಎಲ್ಲವೂ ೪೦ ವರ್ಷ ಹಳೆಯದಾಗಿದ್ದು ಬಹುತೇಕ ಎಲ್ಲವೂ ಶಿಥಿಲವಾಗಿವೆ. ಆದಾಗ್ಯೂ ನಾವು ನಮ್ಮ ಸಿಬ್ಬಂದಿ ಇರುವ ವ್ಯವಸ್ಥೆಯಡಿ ಅಚ್ಚುಕಟ್ಟಾಗಿ ಹಾಗೂ ಜೋಪಾನವಾಗಿ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಆನಂದ್ ತಿಳಿಸಿದ್ದಾರೆ.
ಒಂದು ಕೋಟಿ ನೀರಿನ ಕರ ಬಾಕಿ
ಸಾರ್ವಜನಿಕ ನಲ್ಲಿಗಳ ಸಂಪರ್ಕದ ಕರ ವಸೂಲಾತಿ ಬಿಲ್ ಸೇರಿದಂತೆ ಕುಶಾಲನಗರ ಪುರಸಭೆ ೨೫ ಲಕ್ಷ ಹಣದ ಬಾಕಿ ಉಳಿಸಿಕೊಂಡಿದ್ದರೆ, ಸಾರ್ವಜನಿಕರು ಕೂಡ ನೀರಿನ ಕರವನ್ನು ಸಕಾಲದಲ್ಲಿ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಆದ್ದರಿAದ ಕಾವೇರಿ ನದಿಯ ಶುದ್ಧೀಕರಿಸಿದ ನೀರನ್ನು ನಿತ್ಯವೂ ಕುಡಿಯುವ ಮೂಲಕ ನದಿಯ ಪಾವಿತ್ರ‍್ಯತೆ ಹಾಗೂ ಸ್ವಚ್ಛತೆಯತ್ತ ಪ್ರತಿಯೊಬ್ಬರು ಗಮನ ಹರಿಸಬೇಕಿದೆ. ಜೊತೆಗೆ ಸದಾ ನೀರೊಳಗೆ ಇರುವ ಅಗಸನಿಗೆ ತಪ್ಪದ ಬಾಯಾರಿಕೆ ಎಂಬAತೆ ಕಾವೇರಿ ನದಿ ದಂಡೆಯಲ್ಲಿನ ನಿವಾಸಿಗಳು ಇನ್ನಾದರೂ ಕಾವೇರಿ ಶುದ್ಧ ನೀರಿನಿಂದ ವಂಚಿತರಾಗದAತೆ ಆಡಳಿತಾರೂಢರು ಎಚ್ಚರವಹಿಸಬೇಕಿದೆ. - ಕೆ.ಎಸ್.ಮೂರ್ತಿ