ಮಡಿಕೇರಿ, ಡಿ. ೮: ಸಶಸ್ತç ಪಡೆಗಳ ಧ್ವಜ ದಿನಾಚರಣೆಗಾಗಿ ಕೊಡಗು ಜಿಲ್ಲೆಯಲ್ಲಿ ನಿಗದಿತಕ್ಕಿಂತ ಹೆಚ್ಚಾಗಿ ನಿಧಿ ಸಂಗ್ರಹವಾದ ಕಾರಣ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ರಾಜ್ಯಪಾಲರ ನಿವಾಸದಲ್ಲಿ ಗೌರವಿಸಲಾಯಿತು. ಬೆಂಗಳೂರಿನಲ್ಲಿನ ರಾಜ್ಯಪಾಲರ ನಿವಾಸದಲ್ಲಿ ನಡೆದ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಜನರಲ್ ಬಿ.ಕೆ ರೆಫ್ಸಾ÷್ವಲ್ (ವಿ.ಎಸ್.ಎಂ) ಅವರಿಂದ ಜಿಲ್ಲಾಧಿಕಾರಿ ಸ್ಮರಣಿಕೆಯನ್ನು ಸ್ವೀಕರಿಸಿದರು.