ಗೋಣಿಕೊಪ್ಪಲು, ಡಿ. ೮: ಶಿವಮೊಗ್ಗದ ಕೆಳದಿ ಶಿವಪ್ಪ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಸಹಯೋಗ ದೊಂದಿಗೆ ‘ಜೀವ ಸಂಕುಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ ಅವುಗಳ ಪ್ರಸ್ತುತತೆ ಮತ್ತು ಭವಿಷ್ಯದ ನಿರೀಕ್ಷೆಗಳ’ ಕುರಿತಾದ ೨ ದಿನಗಳ ಅಂತರರಾಷ್ಟಿçÃಯ ಸಮ್ಮೇಳನಕ್ಕೆ ತೆರೆ ಎಳೆಯಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿಗಳಾದ ಡಾ.ಆರ್.ಸಿ. ಜಗದೀಶ್, ಔಷಧೀಯ ಸಸ್ಯಗಳ ವ್ಯವಸ್ಥಿತ ಸಾಗುವಳಿ ಆಗುತ್ತಿಲ್ಲ. ಕೇವಲ ಕಾಡಿನಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಔಷಧೀಯ ಗಿಡಗಳನ್ನು ಬಳಸ ಲಾಗುತ್ತಿದೆ. ಇದರಿಂದ ಮುಂದಿನ ಪೀಳಿಗೆಗೆ ಲಭ್ಯತೆಯ ಕೊರತೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದರಿಂದ ಪ್ರತಿ ನಾಗರಿಕ ತಮ್ಮ ಸಾಗುವಳಿ ಹಾಗೂ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಔಷಧೀಯ ಗಿಡಗಳ ಬೆಳವಣಿಗೆಗೆ ಮುಂದಾಗಬೇಕು, ಇದರಿಂದ ಜೀವ ವೈವಿಧ್ಯತೆ ಸಂರಕ್ಷಣೆ ಆಗಲಿದೆ, ಮುಂದಿನ ಪೀಳಿಗೆಗೆ ನಾವುಗಳು ಕೊಟ್ಟ ಕೊಡುಗೆ ಆಗಲಿದೆ. ಮಾನವ ೭ ಸಾವಿರ ಪ್ರಬೇಧದ ಸಸ್ಯಗಳ ಹಾಗೂ ಅದರ ಉತ್ಪನ್ನಗಳನ್ನು ಆಹಾರವಾಗಿ ಬಳಸಬಲ್ಲ, ಆದರೆ ಪ್ರಸ್ತುತ ಮಾನವ ಕೇವಲ ೨೦೦ ಸಸ್ಯಗಳ ಪ್ರಬೇಧಗಳನ್ನು ಬೆಳೆದು ಬಳಸುತ್ತಿದ್ದಾನೆ. ೨೦೦ ರಲ್ಲಿ ೨೦ ಪ್ರಬೇಧಗಳು ಹೆಚ್ಚಿನ ಬಳಕೆಯಲ್ಲಿವೆ, ೨೦ರಲ್ಲಿ ಕೇವಲ ೨ ಪ್ರಬೇಧಗಳಾದ ಭತ್ತ ಹಾಗೂ ಗೋಧಿ ಮಾನವನ ಆಹಾರದ ಬೇಡಿಕೆಯ ಶೇ.೮೦ ರಷ್ಟನ್ನು ಪೂರೈಸುತ್ತಿವೆ ಎಂದು ಮಾಹಿತಿ ನೀಡಿದರು.

(ಮೊದಲ ಪುಟದಿಂದ) ಇದೇ ಸಂದರ್ಭ ಉತ್ತಮ ಸಂಶೋಧನಾ ವಿಷಯ ಮಂಡನೆಗೆ ಯುವ ವಿಜ್ಞಾನಿಗಳಿಗೆ ಬಹುಮಾನ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಅಶೋಕ್ ಸಂಗಪ್ಪ ಅಲೂರ್ ಮಾತನಾಡಿ, ಪ್ರಕೃತಿಯು ಎಲ್ಲರ ಅವಶ್ಯಕತೆಯನ್ನು ಪೂರೈಸಬಲ್ಲದು, ದುರಾಸೆಗಳನಲ್ಲ, ನಾವು ಕೃಷಿ ಜೀವ ವೈವಿಧ್ಯತೆ ಅವಲೋಕಿಸಿದಾಗ ಕೇವಲ ಕೆಲವೇ ಕೆಲವು ಬೆಳೆಗಳು ಮಾತ್ರ ಬಳಕೆಯಲ್ಲಿವೆೆ. ಉಳಿದವು ಮೂಲೆ ಸೇರಿವೆ. ಇದು ಅಸಮರ್ಪಕ ಪದ್ಧತಿ ಪಾಲನೆಯಿಂದ ಇದು ಕಂಡುಬರುತ್ತಿವೆ ಎಂದು ಅಭಿಪ್ರಾಯಿಸಿದರು.

ಹೊಸ ಆಯೋಜನೆ ಹಾಗೂ ವಿಧಾನಗಳಿಂದ ನಶಿಸಿ ಹೋಗುತ್ತಿರುವ ಜೀವ ವೈವಿಧ್ಯತೆಯನ್ನು ಪುನರ್ ಸ್ಥಾಪನೆ ಮಾಡಬಹುದು, ಗಣಿಗಾರಿಕೆ ನಡೆದ ಸ್ಥಳದಲ್ಲಿ ಗೋಡಂಬಿ ಹಾಗೂ ಸಿಹಿ ಗೆಣಸು ಬೆಳೆದು ಯಶಸ್ವಿಯಾದ ಉದಾಹರಣೆ ನಮ್ಮ ಮುಂದಿದೆ ಎಂದ ಅವರು, ಯುವ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಜೀವ ವೈವಿಧ್ಯತಾ ಮಂಡಳಿಯ ಸದಸ್ಯ ಕಾರ್ಯದರ್ಶಿ ಡಾ.ಜಗತ್ ರಾಂ ಮಾತನಾಡಿ ಮಂಡಳಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಸ್ನಾತಕೋತ್ತರ ಶಿಕ್ಷಣದ ಡೀನ್ ಡಾ.ದಿನೇಶ್ ಕುಮಾರ್, ಪ್ರಕೃತಿಯಲ್ಲಿನ ಹಲವಾರು ವಿಚಾರಗಳ ಬಗ್ಗೆ ನಾವು ಸಾಕಷ್ಟು ತಿಳಿಯಬೇಕಾಗಿದೆ. ಹಲವು ರಹಸ್ಯಗಳನ್ನು ಸಂಶೋಧನೆ ಮೂಲಕ ಹೊರತರಬೇಕಾಗಿದೆ. ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಎರಡು ದಿನಗಳ ಸಮ್ಮೇಳನದಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಯುವ ವಿಜ್ಞಾನಿಗಳು ೧೧೦ ವಿವಿಧ ಪ್ರಬಂಧಗಳನ್ನು ಮಂಡಿಸಿದ್ದರು. ಆಯ್ದ ಪ್ರಬಂಧಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂಚಾಲಕರಾದ ಡಾ.ಬಿ.ಎನ್.ಸತೀಶ್ ಪ್ರಬಂಧ ಮಂಡನೆಯ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕರಾದ ಡಾ.ಆರ್.ಎನ್.ಕೆಂಚರೆಡ್ಡಿ, ಡಾ.ವಿ.ಮಹೇಶ್ವರಪ್ಪ, ಡಾ.ಬಿ.ಜಿ.ನಾಯಕ್. ಡಾ.ಹರೀಶ್ ಟಿ.ಎಸ್. ಡಾ.ಗಣೇಶ್ ಪ್ರಸಾದ್, ಡಾ.ಮಂಜುಳಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.ವಿದ್ಯಾ ಜಗದೀಶ್ ಪ್ರಾರ್ಥಿಸಿ, ಸಹಾಯಕ ಪ್ರಾಧ್ಯಾಪಕಿ ಡಾ.ರನಿಸಾ ನಿರೂಪಿಸಿ, ಡಾ. ಟಿ.ಎಸ್.ಹರೀಶ್ ವಂದಿಸಿದರು - ಚಿತ್ರ ವರದಿ : ಹೆಚ್.ಕೆ.ಜಗದೀಶ್