ಮಡಿಕೇರಿ, ಡಿ. ೪: ಸರಕಾರವು ರಾಜ್ಯದಲ್ಲಿನ ಸಣ್ಣ ಹಾಗೂ ಮಾಧ್ಯಮ ಕಾಫಿ ಬೆಳೆಗಾರರ ೧೦ ಹೆಚ್.ಪಿ. ವರೆಗಿನ ನೀರಾವರಿ ಪಂಪ್ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕ ಪಾವತಿ ವಿಚಾರದಲ್ಲಿ ಹಲವು ನಿಬಂಧನೆಗಳನ್ನು ವಿಧಿಸಿರುವುದರಿಂದ ಸಮಸ್ಯೆಯಾಗುತ್ತಿ ರುವ ಕುರಿತು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಇಂದು ಬೆಳಗಾವಿಯಲ್ಲಿ ಆರಂಭ ಗೊಂಡ ಅಧಿವೇಶನದಲ್ಲಿ ಮೇಲ್ಮನೆ ಯಲ್ಲಿ ಪ್ರಶ್ನಿಸಿದರು.
ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಗೂ ೧೦ ಹೆಚ್.ಪಿ. ತನಕ ಉಚಿತ ವಿದ್ಯುತ್ ವ್ಯವಸ್ಥೆಗೆ ಈ ಹಿಂದೆ ಆದೇಶವಾಗಿದೆ. ಆದರೆ ಕಾಫಿ ಬೆಳೆಗಾರರಿಗೆ ಹಲವು ನಿಬಂಧನೆ ವಿಧಿಸಿರುವುದು ಸರಿಯಲ್ಲ. ಇದನ್ನು ಸರಿಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಇತರ ಕೃಷಿ ಸೇರಿ ದಂತೆ ಕಬ್ಬು, ಅಡಿಕೆ ಬೆಳೆಗೂ ಉಚಿತ ವಿದ್ಯುತ್ ಇದೆ. ಆದರೆ ಕಾಫಿಗೆ ಏಕೆ ನಿಬಂಧನೆ ಎಂಬುದನ್ನು ಅವರು ಪ್ರಶ್ನಿಸಿದ್ದರು.
ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಪರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉತ್ತರ ನೀಡಿದರು.
ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ ಹೆಚ್.ಪಿ ವರೆಗಿನ ನೀರಾವರಿ ವಿದ್ಯುತ್ ಪಂಪು ಸೆಟ್ಗಳ ವಿದ್ಯುತ್ ಶುಲ್ಕವನ್ನು ದಿನಾಂಕ: ೦೧.೦೭.೨೦೨೨ ರಿಂದ ಬಳಕೆಯಾಗುವ ವಿದ್ಯುತ್ ಬಳಕೆಗೆ ಅನ್ವಯವಾಗುವಂತೆ ಗ್ರಾಹಕರುಗಳಿಗೆ ಮರುಪಾವತಿಸಲಾಗುವುದು.
ಈ ಪ್ರವರ್ಗದ ಗ್ರಾಹಕರುಗಳು ಮಾಹಿತಿಗಳ ದೃಢೀಕೃತ ದಾಖಲೆ ಯನ್ನು ಒದಗಿಸುವುದು ಕಡ್ಡಾಯ ವಾಗಿರುತ್ತದೆ.
ಈ ಪ್ರವರ್ಗದ ಗ್ರಾಹಕರುಗಳ ವಿದ್ಯುತ್ ಸ್ಥಾವರಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ನಿಗಧಿಪಡಿಸಿರುವ ವಿದ್ಯುತ್ ದರ ಸೂಚಿಯಂತೆ ಮಾಸಿಕ ವಿದ್ಯುತ್ ಬಿಲ್ಲನ್ನು ಸಿದ್ಧಪಡಿಸಿ ನೀಡಲಾಗುವುದು.
ಈ ಸೌಲಭ್ಯಕ್ಕೆ ಅರ್ಹರಾಗುವ ಬಳಕೆದಾರರು/ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ನಿಗದಿತ ಸಮಯದಲ್ಲಿ ಪಾವತಿಸಿದ ನಂತರ ಸದರಿ ಗ್ರಾಹಕರುಗಳಿಗೆ/ಬಳಕೆದಾರರಿಗೆ ಆಃಖಿ ಯೋಜನೆಯ ವ್ಯವಸ್ಥೆಯಡಿ ಸರ್ಕಾರದಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಒದಗಿಸುವ ಸಹಾಯಧನವನ್ನು ಮಾಸಿಕ ವಿದ್ಯುತ್ ಬಳಕೆ ಶುಲ್ಕದ ಮೇಲೆ ವಿಧಿಸುವ ವಿದ್ಯುತ್ ತೆರಿಗೆಯನ್ನು ಹೊರತುಪಡಿಸಿ, ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಮರು ಪಾವತಿಸಲಾಗುವುದು.
ಈ ಪ್ರವರ್ಗದ ಗ್ರಾಹಕರುಗಳ ಒಂದು ಸ್ಥಾವರಕ್ಕೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಲಾ ಗುವುದು.
ರಾಜ್ಯ ಸರ್ಕಾರವು ೨೦೨೧-೨೨ರ ಆಯವ್ಯಯದಲ್ಲಿ ಸರ್ಕಾರದ ಯೋಜ ನೆಗಳಡಿಯ ಫಲಾನುಭವಿಗಳಿಗೆ ಆರ್ಥಿಕ ನೆರವನ್ನು ಆಧಾರ್ ಆಧಾರಿತ ಪಾವತಿಯ ಡಿಬಿಟಿ ಅಡಿ ಪಾವತಿ ಮಾಡಲಾಗುತ್ತಿದ್ದು, ಈ ಸೌಲಭ್ಯ ವಿತರಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಎಲ್ಲಾ ಯೋಜನೆಗ ಳಿಗೂ ಡಿಬಿಟಿ ಅಡಿ ಪಾವತಿ ಮಾಡಲು ಕ್ರಮ ವಹಿಸಲಾಗುವುದೆಂದು ಘೋಷಿಸಲಾಗಿರುತ್ತದೆ. ಅದರಂತೆ, ಆರ್ಥಿಕ ಇಲಾಖೆಯು ಹಾಗೂ ಇ-ಆಡಳಿತ ಇಲಾಖೆಯು ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗ ಳನ್ನು ಡಿಬಿಟಿ ವ್ಯವಸ್ಥೆಯಡಿ ತರುವಂತೆ ಎಲ್ಲಾ ಇಲಾಖೆಗಳಿಗೆ ತಿಳಿಸಿದೆ.
ರಾಜ್ಯ ಸರ್ಕಾರವು ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ ಹೆಚ್.ಪಿ ವರೆಗಿನ ನೀರಾವರಿ ವಿದ್ಯುತ್ ಪಂಪ್ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಹಲವು ಷರತ್ತು / ನಿಬಂಧನೆಗಳಿಗೊಳಪಟ್ಟು ಆರ್ಥಿಕ ಇಲಾಖೆಯ ಸಹಮತಿಯನ್ವಯ ಸರ್ಕಾರಿ ಆದೇಶ ಸಂಖ್ಯೆ ಎನರ್ಜಿ/೫೨೧/ಪಿಎಸ್ಆರ್/೨೦೨೧ ದಿ. ೨೦.೦೭.೨೦೨೨ ಅನ್ನು ಹೊರಡಿಸಲಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾಗುವ ಗ್ರಾಹಕರು ತಮ್ಮ ಸ್ಥಾವರದ ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ನಿಗದಿತ ಸಮಯದಲ್ಲಿ ಪಾವತಿಸಬೇಕಾಗಿರುತ್ತದೆ. ಮಾಸಿಕ ಬಿಲ್ಲಿನಲ್ಲಿನ ವಿದ್ಯುತ್ ತೆರಿಗೆ ಮೊತ್ತವನ್ನು ಹೊರತುಪಡಿಸಿ, ಉಳಿದ ಬಿಲ್ಲಿನ ಮೊತ್ತವನ್ನು ಆಃಖಿ ವ್ಯವಸ್ಥೆಯಡಿ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಮರು ಪಾವತಿಸಲಾಗುವುದು.
ಸರ್ಕಾರಿ ಆದೇಶದ ಸೌಲಭ್ಯವನ್ನು ೧೦ ಹೆಚ್.ಪಿ ವರೆಗಿನ ಎಲ್ಲಾ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರು ವರ್ಷದಲ್ಲಿ ಕೇವಲ ೩-೪ ತಿಂಗಳು ಮಾತ್ರ ವಿದ್ಯುತ್ ಬಳಸಿದರೂ ಅಥವಾ ವರ್ಷದ ಎಲ್ಲಾ ತಿಂಗಳಿನಲ್ಲಿ ವಿದ್ಯುತ್ ಬಳಸುವ ಈ ಪ್ರವರ್ಗದ ಗ್ರಾಹಕರಿಗೂ ಸಹ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗುವುದು. ಈ ಬಗ್ಗೆ ಸದಸ್ಯರ ಮನವಿ ಬಗ್ಗೆ ಸಚಿವರಲ್ಲಿ ಪ್ರಸ್ತಾಪಿಸಿ ಪರಿಶೀಲನೆ ಮಾಡಲಾಗುವುದು ಎಂದು ಸಚಿವ ಖರ್ಗೆ ಮಾಹಿತಿ ನೀಡಿದರು.