ಗೋಣಿಕೊಪ್ಪಲು, ಡಿ. ೪: ಗೋಣಿಕೊಪ್ಪಲುವಿನ ಸೆಸ್ಕ್ ಇಲಾಖೆಯು ಗ್ರಾಹಕರಿಗೆ ನಿಯಮಬಾಹಿರವಾಗಿ ವಿದ್ಯುತ್ ಬಿಲ್ಲ್ ನೀಡಿದ ಹಿನೆÀ್ನಲೆಯಲ್ಲಿ ಅದನ್ನು ಪ್ರಶ್ನಿಸಿ ಗ್ರಾಹಕರ ವೇದಿಕೆಗೆ ತೆರಳಿದ ಮಹಿಳೆಗೆ ನ್ಯಾಯ ದೊರಕಿದ್ದು ನ್ಯಾಯಾಲಯವು ಸೆಸ್ಕ್ ಇಲಾಖೆಗೆ ೨೦ ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಸೆಸ್ಕ್ನ ಗ್ರಾಹಕರಾದ ಗೋಣಿಕೊಪ್ಪಲುವಿನ ೪ನೇ ವಿಭಾಗದ ರಕ್ಷಿತ್ ಡ್ರೆöÊ ಕ್ಲಿನಿಕ್ ಮಾಲೀಕರಾದ ಪೊನ್ನಮ್ಮ ಎಂಬವರು ನಿಯಮಾನುಸಾರ ಸೆಸ್ಕ್ ಇಲಾಖೆಯಿಂದ ವಿದ್ಯುತ್ ಪಡೆದು ೨೦೧೮ ರಂದು ಡ್ರೆöÊ ಕ್ಲಿನಿಕ್ ಆರಂಭಿಸಿದ್ದರು.

೨೦೧೯ರಲ್ಲಿ ಹೆಚ್ಚುವರಿ ವಿದ್ಯುತ್ ಸಂಪರ್ಕ ಬೇಕೆಂದು ಹೆಚ್ಚಿನ ವಿದ್ಯುತ್ ಪಡೆದಿದ್ದರು. ಅದಾದ ಬಳಿಕ ಸೆಸ್ಕ್ ಇಲಾಖೆಯು ಈ ಹಿಂದೆ ಅಳವಡಿಸಿದ್ದ ಮಾಪಕವು (ಮೀಟರ್) ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಹಿನೆÀ್ನಲೆಯಲ್ಲಿ ಅದನ್ನು ಬದಲಾಯಿಸಿದ್ದರು. ೨೦೨೨ ಜೂನ್‌ವರೆಗೂ ಮಾಲೀಕರಾದ ಪೊನ್ನಮ್ಮನವರು ಸೆಸ್ಕ್ ಬಿಲ್ಲನ್ನು ಪಾವತಿಸುತ್ತಲೇ ಬಂದಿದ್ದರು. ಜುಲೈ ೨೦೨೨ರಲ್ಲಿ ಸೆಸ್ಕ್ ಇಲಾಖೆಯು ಏಕಾಏಕಿ ೧,೧೮,೯೮೭ ಹಣವನ್ನು ಪಾವತಿಸುವಂತೆ ತಿಳಿಸಿತ್ತು.

ಇದರಿಂದ ಆತಂಕಗೊAಡÀ ಮಾಲೀಕರು ಗ್ರಾಹಕರ ಕುಂದು ಕೊರತೆಗಳ ನಿವಾರಣೆ ವೇದಿಕೆ ಕೊಡಗು ಇವರ ಮುಂದೆ ದೂರು ಸಲ್ಲಿಸಿದರು. ಡ್ರೆöÊ ಕ್ಲಿನಿಕ್ ನಡೆಸಲು ಬ್ಯಾಂಕಿನಿAದ ೩೫ ಲಕ್ಷ ಸಾಲ ಪಡೆದಿದ್ದ ಮಾಲೀಕರು ಉದ್ಯೋಗ ನಡೆಸುತ್ತಿದ್ದರು. ಆರಂಭದಲ್ಲಿ ಸೆಸ್ಕ್ ತಿಳಿಸಿದ ಎಲ್ಲಾ ಹಣವನ್ನು ಪಾವತಿಸಿದ್ದರೂ ಅಂತಿಮವಾಗಿ ೧,೧೮,೧೯೮೭ನ್ನು ಪಾವತಿ ಮಾಡಲೇಬೇಕೆಂದು ಒತ್ತಾಯಿಸಿ ತಪ್ಪಿದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೆದರಿಸಿದ್ದರು. ಇದರಿಂದ ನೊಂದ ಮಾಲೀಕರು ವಿದ್ಯುತ್ ಸಂಪರ್ಕ ಕಡಿತ ಗೊಳಿಸಬಹುದು ಎಂಬ ಭಯದಿಂದ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದರು.

ವೇದಿಕೆಯು ಇಲಾಖೆಯ ಅಧಿಕಾರಿಗಳು ಹಾಗೂ ಮಾಲೀಕರನ್ನು ವಿಚಾರಣೆಗೊಳಪಡಿಸಿದ ನಂತರ ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ತೊಂದರೆ ನೀಡಿರುವುದು ಗಮನಕ್ಕೆ ಬಂದ ಹಿನೆÀ್ನಲೆಯಲ್ಲಿ ಗ್ರಾಹಕರ ವೇದಿಕೆಯು ದೂರುದಾರರಿಗೆ ಹಿಂಬಾಕಿ ಬಿಲ್ಲಿನ ಮೊತ್ತವನ್ನು ನಾಲ್ಕು ಮಾಸಿಕ ಸಮ ಕಂತುಗಳಲ್ಲಿ ಪಾವತಿಸುವಂತೆ ಆದೇಶದಲ್ಲಿ ತಿಳಿಸಿದೆ. ಅಲ್ಲದೆ ದೂರುದಾರ ಅನುಭವಿಸಿದ ಮಾನಸಿಕ ಹಾಗೂ ಆರ್ಥಿಕ ಹಾಗೂ ಶಾರೀರಿಕ ಕಷ್ಟಗಳಿಗೆ ಪರಿಹಾರ ರೂಪದಲ್ಲಿ ಕಚೇರಿಗಳಿಗೆ ಓಡಾಡಿದ ಹಾಗೂ ಇತರೆ ಖರ್ಚು ವೆಚ್ಚದ ಸೇರಿ ಒಟ್ಟು ೨೦ ಸಾವಿರ ಪರಿಹಾರ ರೂಪದಲ್ಲಿ ಆದೇಶ ತಲುಪಿದ ೩೦ ದಿನದ ಒಳಗೆ ನೀಡುವಂತೆ ಆದೇಶ ನೀಡಿದೆ.

ಮಾಲೀಕರಾದ ಪೊನ್ನಮ್ಮ ಮುರುಗೇಶ್ ಎಂಬುವರು ವಿದ್ಯುತ್‌ಚ್ಛಕ್ತಿ ಲೋಕಪಾಲ ಬೆಂಗಳೂರಿಗೆ ತೆರಳಿ ಸೆಸ್ಕ್ ಇಲಾಖೆಯ ಸಿಬ್ಬಂದಿಗಳು ತಮ್ಮ ತಪ್ಪನ್ನು ಮರೆಮಾಚಿ ಅನಾವಶ್ಯಕವಾಗಿ ಗ್ರಾಹಕರ ಮೇಲೆ ಒತ್ತಡ ಹೇರಿ ತೊಂದರೆ ನೀಡುತ್ತಿರುವ ಬಗ್ಗೆ ಮನವಿಯನ್ನು ಸಲ್ಲಿಸಿದ್ದರು. ಇದರಿಂದ ಗೋಣಿಕೊಪ್ಪ ಸೆಸ್ಕ್ ಇಲಾಖೆಯ ಕೆಲ ಸಿಬ್ಬಂದಿಗಳು ತೋರಿದ ನಿರ್ಲಕ್ಷö್ಯತೆಯ ಬಗ್ಗೆ ಮನದಟ್ಟಾಗಿತ್ತು. ಈ ಹಿನೆÀ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗ್ರಾಹಕರಾದ ಪೊನ್ನಮ್ಮ ಮುರುಗೇಶ್ ಪರವಾಗಿ ಆದೇಶ ನೀಡಿದ್ದಾರೆ.

-ಹೆಚ್.ಕೆ. ಜಗದೀಶ್