ಮಡಿಕೇರಿ, ಡಿ. ೪: ಕೊಡವ ಅಭಿವೃದ್ಧಿ ನಿಗಮದ ಮೂಲಕ ಅನುದಾನ ಬಿಡುಗಡೆಯಾಗಿದೆ ಎಂದು ಸುಳ್ಳು ಮಾಹಿತಿ ನೀಡಿರುವ ಸಂಸದ ಪ್ರತಾಪ್ ಸಿಂಹ ಜನರ ಕ್ಷಮೆಯಾಚಿಸ ಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಪಕ್ಷದ ವಕ್ತಾರ ತೆನ್ನೀರ ಮೈನಾ, ಕಾರ್ಯಕ್ರಮವೊಂದರಲ್ಲಿ ಸಂಸದರು ಬಹಿರಂಗವಾಗಿ ಕೊಡವ ಅಭಿವೃದ್ಧಿ ನಿಗಮದ ಮೂಲಕ ರೂ.೧೦ ಕೋಟಿ ಅನುದಾನ ಬಿಡುಗಡೆಯಾಗಿರುವುದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ಶಾಸ ಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಪೊನ್ನಣ್ಣ ಅವರು ಯಾವದೇ ಅನುದಾನ ಬಿಡುಗಡೆ ಆಗಿರುವದಿಲ್ಲ ವೆಂದು ಪ್ರತಿಪಾದಿಸಿದ್ದರು. ಆದರೂ ಸಂಸದರು ಇತ್ತೀಚೆಗೆ ಮಾಧ್ಯಮದವ ರೊಂದಿಗೆ ಅನುದಾನ ಬಿಡುಗಡೆಯಾಗಿದೆ ಎಂದು ಮತ್ತೆ ಹೇಳಿಕೆ ನೀಡಿದ್ದಾರೆ. ಹಾಗಾಗಿ ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಲಾಗಿ ಜಿಲ್ಲಾಧಿಕಾರಿಗಳು ಕೊಡವ ಅಭಿವೃದ್ಧಿ ನಿಗಮಕ್ಕೆ ಯಾವದೇ ಅನುದಾನ ಬಿಡುಗಡೆಗೊಂಡಿರುವದಿಲ್ಲ ಎಂದು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಹಾಗಾಗಿ ಲಕ್ಷಾಂತರ ಮಂದಿಯ ಪ್ರತಿನಿಧಿಯಾಗಿರುವ, ಜವಾಬ್ದಾರಿ ಯುತ ಸ್ಥಾನದಲ್ಲಿರುವ ಸಂಸದರು ಸುಳ್ಳು ಮಾಹಿತಿ ನೀಡುವ ಮೂಲಕ ಜನತೆಗೆ ದ್ರೋಹವೆಸಗಿದ್ದಾರೆ. ಕೂಡಲೇ ಸಂಸದರು ಜನರ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕದ್ವಯರು ಪತ್ರಿಕಾಗೋಷ್ಠಿ ಮೂಲಕ ಕೆಲವೊಂದು ಕಾಮಗಾರಿಗಳು ಆಗಿಲ್ಲ, ಈಗಿನ ಶಾಸಕರು ಕಾಮಗಾರಿಗಳನ್ನು ಬದಲಾವಣೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ವಾಸ್ತವವಾಗಿ ಸುವರ್ಣ ಸಮುಚ್ಚಯ ಭವನ, ತಾಲೂಕು ಆಡಳಿತ ಭವನ ಸೇರಿದಂತೆ ಕೆಲವು ಕಾಮಗಾರಿಗಳು ಮಾಜಿ ಶಾಸಕರುಗಳ ಅವಧಿಯಲ್ಲಿ ಆರಂಭಗೊAಡಿದ್ದು, ಆಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ಆಗಿಲ್ಲ, ಅದೂ ಅಲ್ಲದೆ, ಆ ಕಾಮಗಾರಿಗಳೂ ಸೇರಿದಂತೆ ೨೦೧೮ರ ಪ್ರಕೃತಿ ವಿಕೋಪದಡಿ ಬಿಡುಗಡೆಯಾದ ಪರಿಹಾರ ಕಾಮಗಾರಿಗಳನ್ನು ಬದಲಾವಣೆ ಮಾಡಿ ತಮಗೆ ಬೇಕಾದ ರೀತಿಯಲ್ಲಿ ಕಾಮಗಾರಿ ಮಾಡಿರುವದು ಕೂಡ ಮಾಜಿ ಶಾಸಕರುಗಳು. ಈಗಿನ ಶಾಸಕರು ಸಾರ್ವಜನಿಕರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುತ್ತಿದ್ದಾರೆ. ಈಗಿನ ಅಭಿವೃದ್ಧಿ ಕಾರ್ಯಗಳ ಚಟುವಟಿಕೆಗಳೇ ಬೇರೆಯಾಗಿದೆ. ಜಿಲ್ಲೆಯ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಡಿಸಿಸಿ ಸದಸ್ಯರುಗಳಾದ ಕೆ.ಯು.ಅಬ್ದುಲ್ ರಝಾಕ್, ಕೇಟೋಳಿ ಮೋಹನ್ರಾಜ್, ಮಂಡಿರ ಸದಾ ಮುದ್ದಪ್ಪ, ಮಡಿಕೇರಿ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜೆ.ಪೀಟರ್ ಹಾಗೂ ಇತರರು ಇದ್ದರು.