ಕುಶಾಲನಗರ, ಡಿ. ೨ : ಕುಶಾಲನಗರ ಗಣಪತಿ ದೇವಾಲಯ ಗಣಪತಿ ಮೂರ್ತಿಗೆ ಸ್ಥಳೀಯ ಉದ್ಯಮಿ ಎಸ್.ಎಲ್. ಶ್ರೀಪತಿ ಅವರು ದುರ್ಗಾ ಗಣಪತಿ ಕವಚವನ್ನು ಅರ್ಪಿಸಿದರು.
ರಥಬೀದಿಯ ರಾಧಾಕೃಷ್ಣ ಮೆಡಿಕಲ್ ಸ್ಟೋರ್ ಮಾಲೀಕರಾದ ಶ್ರೀಪತಿ ಅವರು ದೇವಾಲಯಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ದೇವರ ಬೆಳ್ಳಿ ಕವಚವನ್ನು ಗಣಪತಿ ದೇವಾಲಯ ಸೇವಾ ಸಮಿತಿಯ ಆಡಳಿತ ಮಂಡಳಿಗೆ ನೀಡಿದರು.
ಈ ಸಂದರ್ಭ ಕುಟುಂಬ ಸದಸ್ಯರಾದ ಶಾಂತ ಶ್ರೀಪತಿ, ಈಶ್ವರ್ ಮತ್ತು ಆಡಳಿತ ಮಂಡಳಿ ಗೌರವಾಧ್ಯಕ್ಷ ವಿ.ಎನ್. ವಸಂತಕುಮಾರ್, ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು, ರಾಘವೇಂದ್ರ ಭಟ್, ವ್ಯವಸ್ಥಾಪಕÀ ಶ್ರೀನಿವಾಸರಾವ್, ಚಂದ್ರು ಮತ್ತಿತರರು ಇದ್ದರು.