ಮಡಿಕೇರಿ, ಡಿ. ೨: ನೇಣು ಬಿಗಿದುಕೊಂಡು ತಮಿಳುನಾಡು ಮೂಲದ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ತಮಿಳುನಾಡಿನ ತಿರುಚಿ ಜಿಲ್ಲೆಯ ಎಸ್. ಸಂಜಯ್ (೨೧) ಮೃತ ದುರ್ದೈವಿ. ಕಳೆದ ೨೦ ದಿನಗಳ ಹಿಂದೆ ನಗರಕ್ಕೆ ಬಂದು ಕೂರ್ಗ್ ಇಂಟರ್ ನ್ಯಾಷನಲ್ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಸಂಜಯ್ ಅಲ್ಲೇ ಸಮೀಪದ ವಿಜಯ ವಿನಾಯಕ ದೇವಾಲಯ ಬಳಿ ಮನೆಯೊಂದರಲ್ಲಿ ತನ್ನ ೩ ಮಂದಿ ಸಹಸಿಬ್ಬಂದಿಗಳೊAದಿಗೆ ವಾಸಿಸುತ್ತಿದ್ದ. ತಾ. ೧ ರಂದು ಸಂಜಯ್ ಕೆಲಸಕ್ಕೆ ತೆರಳಿ ಮಧ್ಯಾಹ್ನ ೧ ಗಂಟೆಗೆ ವಿಶ್ರಾಂತಿಗೆAದು ಮನೆಗೆ ತೆರಳಿದ್ದಾನೆ. ವಾಪಾಸ್ ಸಂಜೆ ೭ ಗಂಟೆಗೆ ಕೆಲಸಕ್ಕೆ ಬಾರದ ಹಿನ್ನೆಲೆ ಸ್ನೇಹಿತರು ರೂಂಗೆ ತೆರಳಿದ ಸಂದರ್ಭ ಮನೆಯ ಬಾಗಿಲು ತೆರೆಯಲಿಲ್ಲ. ನಂತರ ವೆಂಟಿಲೇಟರ್ ಮೂಲಕ ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಈ ಸಂಬAಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.